ಮನೆ ಸ್ಥಳೀಯ ಆಹಾರ ಮೇಳವೇ ಜನರಿಗೆ ಅಚ್ಚು -ಮೆಚ್ಚು: ಈ ಜನುಮವೇ ದೊರಕಿದೆ ರುಚಿ ಸವಿಯಲು…

ಆಹಾರ ಮೇಳವೇ ಜನರಿಗೆ ಅಚ್ಚು -ಮೆಚ್ಚು: ಈ ಜನುಮವೇ ದೊರಕಿದೆ ರುಚಿ ಸವಿಯಲು…

0

ಮೈಸೂರು ಫೆಸ್ಟ್ ನ ವಿಶೇಷ ಕಾರ್ಯಕ್ರಮ ‘ಆಹಾರ ಮೇಳಕ್ಕೆ ‘ ಒಮ್ಮೆ ಹೋಗಿ ಬಂದರೆ ಈ ಮಾತು ನೆನಪಾಗುವುದು ಖಂಡಿತ.

ಮಾನಸ ಗಂಗೋತ್ರಿಯ ಕ್ರೀಡಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿರುವ ಆಹಾರ ಮೇಳವು ಸಾರ್ವಜನಿಕರು ಹಾಗೂ ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಮಸ್ರುಮ್ ಬಿರಿಯಾನಿ, ಚಿಕ್ಕಪೇಟೆ ದೊನ್ನೆ ಬಿರಿಯಾನಿ, ಪಾರಂಪರಿಕ ಮೇಲುಕೋಟೆ ಪುಳಿಯೋಗ್ಗರೆ, ಗೋಬಿ ಅಂಡ್ ಚೈನೀಸ್ ಫುಡ್, ಡ್ರೈ ಗೋಬಿ, ವಿವಿಧ ರೀತಿಯ ಐಸ್ ಕ್ರೀಮ್ ಗಳು, ಚುರುಮುರಿ ಹೀಗೆ 37 ಬೇರೆ ಬೇರೆ ರೀತಿಯ ಆಹಾರದ ಮಳಿಗೆಗಳಲ್ಲಿ ಭೋಜನ ಪ್ರಿಯರಿಗೆ ಸವಿಯಲು ಜನವರಿ 28 ರವರೆಗೂ ಸಿಗುತ್ತವೆ.

ನಮ್ಮ ಗಂಗೋತ್ರಿಯ ಆವರಣದಲ್ಲಿ ಆಹಾರ ಮೇಳ ಆಯೋಜಿಸಿರುವುದು ಬಹಳ ಖುಷಿಯ ವಿಚಾರ. ಮೈಸೂರು ದಾಸರದಲ್ಲಿ ನಾನು ಆಹಾರಮೇಳದ ಅನುಭವನ್ನು ಕಳೆದುಕೊಂಡಿದ್ದೆ ಆದರೆ ಮೈಸೂರು ಫೆಸ್ಟ್ ಆಹಾರಮೇಳ ಅದನ್ನು ಮರೆಸಿದೆ. ಪ್ರತಿಯೊಂದು ತಿನಿಸುಗಳು ಸಹ ತುಂಬಾ ರುಚಿಯಾಗಿವೆ. ಮತ್ತೆ ಮತ್ತೆ ನಮ್ಮ ಗಂಗೋತ್ರಿಯಲ್ಲೇ ಕಾರ್ಯಕ್ರಮವನ್ನು ಆಯೋಜಿಸಬೇಕು.

ಶ್ರೀಶೈಲ್ ಪಾಟೀಲ್, ಮಾನಸ ಗಂಗೋತ್ರಿ ವಿದ್ಯಾರ್ಥಿ.

ಸೈ ಎನಿಸಿಕೊಂಡ ಮೇಲುಕೋಟೆ ಪುಳಿಯೋಗ್ಗರೆ : ಯಾವುದೇ ಆಹಾರ ಮೇಳವಾಗಲಿ ಮೊದಲು ನೆನಪಿಗೆ ಬರುವುದೇ ಮೇಲುಕೋಟೆ ಪುಳಿಯೋಗ್ಗರೆ. ಇದು ತನ್ನ ತನ್ನ ಪಾರಂಪರಿಕ ರುಚಿ ಇಂದಲೇ ಜನರಿಗೆ ಬಹಳ ಅಚ್ಚು ಮೆಚ್ಚಾಗಿದೆ. ಮೈಸೂರು ಫೆಸ್ಟ್ ಆಹಾರ ಮೇಳದಲ್ಲೂ ತನ್ನ ಛಾಪನ್ನು ಮೂಡಿಸಿ ಅತಿ ಹೆಚ್ಚು ಜನರನ್ನು ಸೆಳೆದು ಸೈ ಎನಿಸಿಕೊಂಡಿದೆ.