ಉಡುಪಿ: ಅಯೊಧ್ಯೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶುಕ್ರವಾರ ಸಂಜೆ ಪಲ್ಲಕ್ಕಿ ಉತ್ಸವ ನೆರವೇರಿತು.
ಶ್ರೀರಾಮಲಲ್ಲಾನ ವಿಗ್ರಹವನ್ನು ವಾದ್ಯಘೋಷ, ವಿಷ್ಣುಸಹಸ್ರನಾಮ, ಭಜನೆಗಳೊಂದಿಗೆ ಪಲ್ಲಕ್ಕಿಯಲ್ಲಿಟ್ಟು ಮಂಗಳಾರತಿ ಬೆಳಗಿದ ಬಳಿಕ ಮಂದಿರದ ಹೊರ ಆವರಣದ ಸುತ್ತ ಒಂದು ಸುತ್ತು ತಂದ ಬಳಿಕ ಯಾಗ ಶಾಲೆಯಲ್ಲಿಟ್ಟು ಅಷ್ಟಾವಧಾನ ಸೇವೆ ನಡೆಸಲಾಯಿತು.
Saval TV on YouTube