ಮನೆ ಸ್ಥಳೀಯ ಬಡವರು, ನಿರ್ಗತಿಕರಿಗೆ ಮೊದಲ ಆದ್ಯತೆ ನೀಡಬೇಕು: ಎಲ್ ನಾರಾಯಣಸ್ವಾಮಿ

ಬಡವರು, ನಿರ್ಗತಿಕರಿಗೆ ಮೊದಲ ಆದ್ಯತೆ ನೀಡಬೇಕು: ಎಲ್ ನಾರಾಯಣಸ್ವಾಮಿ

0

ಮೈಸೂರು: ಬಡವರು, ನಿರ್ಗತಿಕರಂತಹವರ ಪ್ರಕರಣಗಳು ತಮ್ಮ ಮುಂದೆ ಬಂದಾಗ ಅವರಿಗೆ ನೀವು ಮೊದಲ ಆದ್ಯತೆ ನೀಡಬೇಕು ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಎಲ್. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ಸಾಕ್ಷರತೆಯ ಬಗ್ಗೆ ಸಂವಾದತ್ಮಕ ಅಧಿವೇಶನ ಸಭೆಯಲ್ಲಿ ಮಾತನಾಡಿ, ಜನರು ಅಧಿಕಾರಿಗಳನ್ನು ನಂಬಿ ಬಂದಿರುತ್ತಾರೆ ಅಂತವರಿಗೆ ಸ್ವಂದಿಸುವುದು ನಮ್ಮ ಕರ್ತವ್ಯ. ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು ಏಕೆಂದರೆ ಆ ರೀತಿಯ ಪ್ರಕರಣಕ್ಕೆ ಒಳಗಾಗಿರುವವರಿಗೆ ಬೇಗನೆ ನ್ಯಾಯ ಕೊಡಿಸುವ ಅಗತ್ಯವಿರುತ್ತದೆ.

ಇಲ್ಲಿಯವರೆಗೂ ಸಭೆಯಲ್ಲಿ ಚರ್ಚಿಸಲಾಗಿರುವ ಕೆಲವು ಪ್ರಕರಣಗನ್ನು ಇನ್ನೂ ಬಗೆಹರಿಸಿ ವರದಿ ನೀಡಿರುವುದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರಸ್ತುತ ಬಾಕಿ ಉಳಿದಿರುವ ಪ್ರಕರಣಗಳಿಗೆ ಪ್ರತ್ಯೇಕ ಅಂತಿಮ ದಿನಾಂಕವನ್ನು ನೀಡಲಾಗಿದ್ದು ಆ ದಿನಾಂಕದೊಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ವೆಂಟಗೋಡಿ ಅವರು ಮಾತನಾಡಿ ಪ್ರಕರಣಗಳು ಪರಿಹಾರವಾದ ಕೂಡಲೇ ಅದರ ವರದಿಯನ್ನು ಸಲ್ಲಿಸಬೇಕು. ಆಗ ನಾವು ಮುಂದಿನ ಕ್ರಮ ಕೈಗೊಳ್ಳಬಹುದು ಆದ್ದರಿಂದ ಸಂಬoಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ ವರದಿ ಸಲ್ಲಿಸಬೇಕು ಎಂದರು.

ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಡಾ.ಟಿ.ಶ್ಯಾಮಭಟ್ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಬಂದoತಹ ಪ್ರಕರಣಗಳಿಗೆ ಖುದ್ದು ಅಧಿಕಾರಿಗಳೇ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಇದರಿಂದ ಜನರಿಗೆ ಸರಿಯಾದ ನ್ಯಾಯ ದೊರಕಿಸಲು ನೆರವಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.