ಮನೆ ರಾಷ್ಟ್ರೀಯ ಐತಿಹಾಸಿಕ, ವಿನೂತನ ಬಜೆಟ್: ಪ್ರಧಾನಿ ಮೋದಿ ಬಣ್ಣನೆ

ಐತಿಹಾಸಿಕ, ವಿನೂತನ ಬಜೆಟ್: ಪ್ರಧಾನಿ ಮೋದಿ ಬಣ್ಣನೆ

0

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದರು.  ಬಜೆಟ್ ಕುರಿತು ಪ್ರತಿಕ್ರಿಯಿಸಿದ  ಪ್ರಧಾನಿ  ನರೇಂದ್ರ ಮೋದಿ, ಯುವಕರು, ಮಹಿಳೆಯರು, ಬಡವರು, ರೈತರು ಈ ನಾಲ್ಕು ಸ್ತಂಭಗಳ ಬಲಪಡಿಸುವ ಐತಿಹಾಸಿಕ ಬಜೆಟ್​ ಎಂದು ಬಣ್ಣಿಸಿದ್ದಾರೆ.

ಯುವಕರು, ಮಹಿಳೆಯರು, ಬಡವರು, ರೈತರು ಪ್ರಯೋಜನ ಪಡೆಯಲಿದ್ದಾರೆ. ಈ ಬಜೆಟ್ ಎಲ್ಲರ ಅಭಿವೃದ್ಧಿ ಮಾಡಲಿದೆ, ಬಜೆಟ್ ನಲ್ಲಿ ಎಲ್ಲ ವರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಇಂದಿನ ಬಜೆಟ್ ಕೇವಲ ಮಧ್ಯಂತರ ಬಜೆಟ್ ಅಲ್ಲ, ಎಲ್ಲರನ್ನೂ ಒಳಗೊಳ್ಳುವ ಮತ್ತು ವಿನೂತನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಬಜೆಟ್ ಅಭಿವೃದ್ಧಿ ಹೊಂದಿದ ಭಾರತದ ನಾಲ್ಕು ಆಧಾರ ಸ್ತಂಭಗಳಾದ – ಯುವಕರು, ಬಡವರು, ಮಹಿಳೆಯರು, ರೈತರು. ಈ ಬಜೆಟ್ ದೇಶದ ಭವಿಷ್ಯ ಕಟ್ಟುವ ಬಜೆಟ್ ಆಗಿದೆ.

ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಬಜೆಟ್‌ನಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ರಚಿಸುವುದಾಗಿ ಘೋಷಿಸಲಾಗಿದೆ. ಸ್ಟಾರ್ಟಪ್‌ಗಳಿಗೆ ಲಭ್ಯವಿರುವ ತೆರಿಗೆ ವಿನಾಯಿತಿಯ ವಿಸ್ತರಣೆಯನ್ನೂ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ ರೈತರಿಗಾಗಿ ಅತ್ಯಂತ ಮಹತ್ವದ ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ನ್ಯಾನೋ ಡಿಎಪಿ ಬಳಕೆ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿಸ್ತರಣೆ ಮತ್ತು ಆತ್ಮನಿರ್ಭರ ಆಯಿಲ್ ಸೀಡ್ ಅಭಿಯಾನವು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ.

ನಾವು ಹಳ್ಳಿ ಮತ್ತು ನಗರಗಳಲ್ಲಿ ಬಡವರಿಗೆ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದೇವೆ ಮತ್ತು ಈಗ ನಾವು ಇನ್ನೂ 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ.