ಮನೆ ರಾಜ್ಯ ಇಡೀ ದೇಶದಲ್ಲಿ ಕಾಂಗ್ರೆಸ್ 20 ‍ಸ್ಥಾನ ಗೆಲ್ಲುವುದಿಲ್ಲ: ಸಿ.ಟಿ.ರವಿ

ಇಡೀ ದೇಶದಲ್ಲಿ ಕಾಂಗ್ರೆಸ್ 20 ‍ಸ್ಥಾನ ಗೆಲ್ಲುವುದಿಲ್ಲ: ಸಿ.ಟಿ.ರವಿ

0

ಬಳ್ಳಾರಿ: ರಾಜ್ಯದಲ್ಲಿ ಅಲ್ಲ, ಇಡೀ ದೇಶದಲ್ಲಿಯೇ ಕಾಂಗ್ರೆಸ್ ಇಪ್ಪತ್ತು ಸ್ಥಾನ ಗೆಲ್ಲುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಅವರು ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಇಪ್ಪತ್ತು ಲೋಕಸಭೆ ಕ್ಷೇತ್ರದಲ್ಲಿ ಗೆಲ್ಲುವುದಾಗಿ ಹೇಳಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿ, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಕಳೆದ ಬಾರಿ ಬೋನಸ್ ಅಗಿ ಒಂದೆರಡು ಕ್ಷೇತ್ರ ಗೆದ್ದಿದ್ದರು. ಈಗ ಅದು ಕೂಡ ಗೆಲ್ಲುವುದಿಲ್ಲ. ರಾಜ್ಯದಲ್ಲಿ ನಾವು 28 ಕ್ಷೇತ್ರ ಗೆಲ್ಲುತ್ತೇವೆ ಎಂದರು.

ಆರಂಭದಲ್ಲಿ ಇಂಡಿಯಾ ಒಕ್ಕೂಟ ದೊಡ್ಡ ಸೌಂಡ್ ಮಾಡಿತ್ತು. ಒಂದನೇ ಎರಡನೆಯ ಮೀಟಿಂಗ್ ದೊಡ್ಡ ಸೌಂಡ್ ಮಾಡಿತ್ತು. ಮೂರನೇ ಮೀಟಿಂಗ್ ಢಮಾರ್ ಅಯ್ತು. ದೇಶದಲ್ಲಿ ರಾಮಮಂದಿರ ನಿರ್ಮಾಣದ ಬಳಿಕ ಸರ್ವಂ ರಾಮಮಯಂ ಆಗಿದೆ. ಲೋಕಸಭೆಯಲ್ಲಿ ನಾಲ್ಕು ನೂರು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಎಲ್ಲೇಡೆ ರಾಮ ಭಾವನೆ ಹೆಚ್ಚಾಗಿದೆ. ಹೀಗಾಗಿ ಇದೀಗ ಸಿದ್ದರಾಮಯ್ಯ ಅವರಿಗೆ ಜೈಶ್ರೀರಾಂ ಎನ್ನುವ ಹಾಗಾಗಿದೆ. ನಲವತ್ತು ವರ್ಷದ ರಾಜಕಾರಣದಲ್ಲಿ ರಾಮಮಂದಿರ ಕಟ್ಟಬೇಕೆಂದು ಒಮ್ಮೆಯೂ ಹೇಳಿಲ್ಲ. ಆದರೆ ಈಗ ಸಿದ್ದರಾಮಯ್ಯ ಬಾಯಿಯಲ್ಲಿ ಜೈಶ್ರೀರಾಮ್ ಬಂದಿದೆಯೆಂದರೆ ಕಾಂಗ್ರೆಸ್ ನವರಿಗೆ ಬಿಜೆಪಿ ಗೆಲ್ಲುತ್ತದೆಯೆಂದು ಗೊತ್ತಾಗಿದೆ ಎಂದರು.

ಮಂಡ್ಯ ವಿಚಾರದಲ್ಲಿ ಮಹಾ ಅಪರಾಧವಾಗಿದೆ. ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಿದೆ. ರಾಷ್ಟ್ರಧ್ವಜ ಹಾರಿಸಲು ಬೇಡ ಎಂದವರಾರು. ಆದರೆ ಹನುಮ ಧ್ವಜ ಇಳಿಸಿ ಹಾರಿಸಬೆಕಿತ್ತೇಕೆ? ಅದಕ್ಕಿಂತ ದೊಡ್ಡ ಸ್ಥಂಭದ ಮೇಲೆ ಎತ್ತರದ ರಾಷ್ಟ್ರದ ಧ್ವಜ ಹಾರಿಸಿ. ಹನುಮ ಧ್ವಜ ಮತ್ತು ರಾಷ್ಟ್ರಧ್ವಜ ಜಗಳ ಹಚ್ಚಿದ್ದಾರೆ. ಕುಕೃತ್ಯ ಮಾಡುವ ಕೆಲಸ ಮಾಡಿದ್ದಾರೆ ಎಂದರು.

ಕುರುಬರ ಹಾಸ್ಟೆಲ್ ಮೇಲೆ ಯಾರು ದಾಳಿ ಮಾಡಿಲ್ಲ. ಹಾಸ್ಟೆಲ್ ಮುಂದೆಯಿದ್ದ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಹರಿದಿದ್ದಾರೆ. ಕಾಂಗ್ರೆಸ್ ಟೂಲ್ ಕಿಟ್ ರಾಜಕೀಯ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಕುರುಬರು ಹಿಂದೂಗಳಲ್ಲವೆ? ಅವರು ದೇಶ ಭಕ್ತರು. ಸಂಗೊಳ್ಳಿ ರಾಯಣ್ಣ ಯಾರು? ಕನಕದಾಸ ಸನಾತನ ಪರಂಪರೆಯ ಎತ್ತಿ ಹಿಡಿದಿದ್ದಾರೆ. ಕುರುಬರು ಹನುಮ ಭಕ್ತರು. ಕುರುಬರನ್ನು ಎತ್ತಿಕಟ್ಟುವ ಟೂಲ್ ಕಿಟ್ ರಾಜಕೀಯ ಕಾಂಗ್ರೆಸ್ ಮಾಡುತ್ತಿದೆ. ಮೋದಿ ಮುಂದೆ ಕಾಂಗ್ರೆಸ್ ಬ್ಲಾಕ್ ಮೇಲ್ ರಾಜಕೀಯ ನಡೆಯೋದಿಲ್ಲ ಎಂದರು.