ಮನೆ ರಾಷ್ಟ್ರೀಯ ತೀವ್ರಗೊಳ್ಳಲಿದೆ ಅಸನಿ ಚಂಡಮಾರುತ: ಆಂಧ್ರ, ಒಡಿಶಾದಲ್ಲಿ ಮಳೆ ಸಾಧ್ಯತೆ

ತೀವ್ರಗೊಳ್ಳಲಿದೆ ಅಸನಿ ಚಂಡಮಾರುತ: ಆಂಧ್ರ, ಒಡಿಶಾದಲ್ಲಿ ಮಳೆ ಸಾಧ್ಯತೆ

0

ನವದೆಹಲಿ (New Delhi)-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಭಾನುವಾರ ಚಂಡಮಾರುತವಾಗಿ ಪರಿವರ್ತನೆಗೊಂಡಿದೆ.

‘ಅಸನಿ’ ಚಂಡಮಾರುತವು ಇನ್ನಷ್ಟು ತೀವ್ರಗೊಳ್ಳಲಿದ್ದು, ಆಂಧ್ರಪ್ರದೇಶ, ಒಡಿಶಾದಲ್ಲಿ ಭಾರಿ ಗಾಳಿ ಮತ್ತು ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 75 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಆದರೆ, ಈ ಚಂಡಮಾರುತವು ಭೂಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ ಕಡಿಮೆಯಾಗಿದ್ದು, ಈ ವಾರ ಮಧ್ಯಭಾಗದಲ್ಲಿ ದುರ್ಬಲಗೊಳ್ಳಲಿದೆ ಎನ್ನಲಾಗಿದೆ.

ಉತ್ತರ ಆಂಧ್ರ ಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವು‌ ವಾಯುವ್ಯಕ್ಕೆ ಚಲಿಸುವ ಮತ್ತು ಪೂರ್ವ ಮಧ್ಯ ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.