ಮನೆ ರಾಷ್ಟ್ರೀಯ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ: ಜಿ ಪರಮೇಶ್ವರ್

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಲು ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ: ಜಿ ಪರಮೇಶ್ವರ್

0

ಬೆಂಗಳೂರು: ಬಿಜೆಪಿ ನಾಯಕರಲ್ಲಿ ಅದ್ಯಾವ ನೈತಿಕತೆ ಉಳಿದಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ ಅಂತ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.

ಬರ ಪರಿಹಾರ ಧನವನ್ನು ರೈತರಿಗೆ ಇನ್ನೂ ನೀಡಿಲ್ಲ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಅಂತ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸುವುದಾಗಿ ಹೇಳಿದ್ದಾರೆ ಅಂತ ಮಾಧ್ಯಮ ಪ್ರತಿನಿಧಿಗಳು ತಿಳಿಸಿದಾಗ ಪರಮೇಶ್ವರ್ ಹಾಗೆ ಪ್ರತಿಕ್ರಿಯಿಸಿದರು. ಬರ ಪರಿಹಾರ ಪರಿಹಾರ ನಿಧಿ ಕೇಂದ್ರದಿಂದ ಇದುವರೆಗೆ ಬಿಡುಗಡೆಯಾಗಿಲ್ಲ, ರಾಜ್ಯದ 27 ಸಂಸತ್ ಸದಸ್ಯರು ಪ್ರಧಾನಿಯವರಿಗಾಗಲೀ, ಗೃಹ ಸಚಿವರಿಗಾಗಲೀ ಯಾಕೆ ಮನವಿ ಮಾಡುತ್ತಿಲ್ಲ? ಎಂದು ಪರಮೇಶ್ವರ್ ಕೇಳಿದರು.

ನ್ಯಾಯಸಮ್ಮತವಾಗಿ ರಾಜ್ಯಕ್ಕೆ ಸಲ್ಲಬೇಕಾದ ಬರಪರಿಹಾರ ನಿಧಿ ಬಿಡುಗಡೆ ಮಾಡಲಿ ಅಂತ ಕೇಳಲಿ. ಅದನ್ನು ಮಾಡೋದು ಬಿಟ್ಟು ಇಲ್ಲಿ ಪ್ರತಿಭಟನೆ ನಡೆಸಿದರೆ ಅದಕ್ಕೇನು ಅರ್ಥ? ಎಂದು ಗೃಹ ಸಚಿವ ಅಸಹನೆಯಿಂದ ಕೇಳಿದರು.

 ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ. ತಲಾ ರೂ. 2,000 ಯಂತೆ ರೈತರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಹಣ ವರ್ಗಾಯಿಸಲಾಗಿದೆ. ಕುಡಿಯುವ ನೀರು ಮತ್ತು ಇತರ ಸೌಲಭ್ಯಗಳ ಏರ್ಪಾಟಿಗೆ ರೂ. 545 ಕೋಟಿ ಹಣವನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಳಿಸಲಾಗಿದೆ. ಬೊಕ್ಕಸದಲ್ಲಿ ಹಣ ಇಲ್ಲ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು.