ಮನೆ ರಾಜಕೀಯ ಆರಗ ಜ್ಞಾನೇಂದ್ರ ಮೆಂಟಲ್‌: ಕಿಮ್ಮನೆ ರತ್ನಾಕರ್

ಆರಗ ಜ್ಞಾನೇಂದ್ರ ಮೆಂಟಲ್‌: ಕಿಮ್ಮನೆ ರತ್ನಾಕರ್

0

ಶಿವಮೊಗ್ಗ(Shimoga)-ಗೃಹ ಸಚಿವ ಆರಗ ಜ್ಞಾನೇಂದ್ರ (Arrag Jnanendra) ಮೆಂಟಲ್‌ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ (kimane Ratnakar) ಹೇಳಿದರು.

ಪಾದಯಾತ್ರೆ ಮಾಡೋದು ಕಿಮ್ಮನೆ ಕರ್ಮ, ಪಾದಯಾತ್ರೆ ಮಾಡಲಿ ಎಂದು ರಸ್ತೆ ಮಾಡಿಕೊಟ್ಟಿದ್ದೇನೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಕುರಿತು ಏನು ಪ್ರತಿಕ್ರಿಯೆ ನೀಡ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೇಳಿದರೆ, ಅವ ಸ್ವಲ್ಪ ಮೆಂಟಲ್ ಕೇಸ್ ಎಂದು ಏಕವಚನದಲ್ಲಿ ಸಂಬೋಧಿಸಿದರು. ಬಿಜೆಪಿಯದ್ದು ದೇಶ ವಿರೋಧಿ, ಕುಲಗೆಟ್ಟ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯದ್ದು ಕುಲಗೆಟ್ಟ, ದೇಶ ಹಾಳು ಮಾಡುವಂತಹ ಸಿದ್ಧಾಂತ. ನಾವದನ್ನು ವಿರೋಧಿಸುತ್ತೇವೆ.‌ ಅವರಿಂದ ಏನು ಬಯಸೋದಕ್ಕೆ ಸಾಧ್ಯ.‌ ಮೋದಿ ಬಂದ ಮೇಲೆ ಏನು ಮಾಡಿದ್ರು? ಸಿಎಎ, ಎನ್‌ಆರ್‌ಸಿ, ಈದ್ಗಾ ಮೈದಾನಗಳು, ರಾಮ ಜನ್ಮಭೂಮಿ ಇಂಥವೇ ವಿಷಯಗಳು. ಮನುಷ್ಯನ ಒಳಿತಿಗಾಗಿ ಮಾಡಬೇಕಿರೋ ಕೆಲಸಗಳನ್ನ ಇವರು ಮಾಡ್ತಿಲ್ಲ. ಜಟ್ಕಾ, ಹಲಾಲ್ ಕಟ್ ವಿಷಯಗಳೆಲ್ಲಾ ಬಿಜೆಪಿ ಬಂದ ಮೇಲೆ ಶುರುವಾದವು. ಈ ದೇಶದಲ್ಲಿ ಸಾವಿರಾರು ಜಾತಿಗಳಿವೆ, ಅವರೆಲ್ಲಾ ಏನು ಮಾಡಬೇಕು ಎಂದು ಕಿಮ್ಮನೆ ಪ್ರಶ್ನಿಸಿದರು.

ಶಿವಮೊಗ್ಗ- ತೀರ್ಥಹಳ್ಳಿ ರಸ್ತೆ ಮಂಜೂರು ಮಾಡಿಸಿದ್ದು ನಾನು. ಅವರ ಹದಿನೈದು ವರ್ಷದ ಅಧಿಕಾರ ಅವಧಿಯಲ್ಲಿ ಹೊಟ್ಟೆ ಬೆಳೆಸಿಕೊಂಡು ಓಡಾಡಿದ್ದಷ್ಟೇ. ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಅನುದಾನದ ಕೆಲಸಗಳು ತಾಲೂಕಿನಾದ್ಯಂತ ನನ್ನ ಅವಧಿಯಲ್ಲಿ ಮಂಜೂರಾಗಿದ್ದವು. ಅವುಗಳನ್ನ ಉದ್ಘಾಟನೆ ಮಾಡುವ ಕೆಲಸವನ್ನಷ್ಟೇ ಅವರು ಮಾಡ್ತಾ ಇದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಒಳಗಿನ ಭಿನ್ನಾಭಿಪ್ರಾಯಗಳನ್ನು ನಾವು ಸರಿಪಡಿಸಿಕೊಳ್ತೇವೆ. ಆದರೆ, ಬಿಜೆಪಿ ಪಕ್ಷದೊಳಗೆ ಬಗೆಹರಿಯದ ಸಮಸ್ಯೆಗಳಿವೆ. ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಗೃಹ ಸಚಿವರ ವಿರುದ್ಧ ಹರಿಹಾಯ್ದಿದ್ದರು.‌ ಶಾಸಕ ರಾಜೂಗೌಡ ಕೂಡ ಗೃಹ ಸಚಿವ ಅಸಮರ್ಥರು ಎಂದಿದ್ದರು. ನಾನೂ ಕೂಡ ಸಚಿವನಾಗಿದ್ದೆ, ಬಿಜೆಪಿ ಹಿರಿಯ ನಾಯಕರಾದ ಈಶ್ವರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡರಂತವರೂ ಕೂಡ ನನ್ನ ಕಾರ್ಯವೈಖರಿಯನ್ನ ಪ್ರಶಂಸಿದ್ದರು. ಅವರು ಅಭಿನಂದಿಸಿರೋದಕ್ಕೆ ಶಾಸಕ ಸಭೆಯ ದಾಖಲೆಗಳಿವೆ ಎಂದರು.

ಆದರೆ, ಆರಗ ಜ್ಞಾನೇಂದ್ರ ಅವರಿಂದ ಪ್ರತಿದಿನ ಮರ್ಯಾದೆ ಹರಾಜಾಗುತ್ತಿದೆ. ತೀರ್ಥಹಳ್ಳಿ ಬಿಜೆಪಿ ಮತದಾರರು ತಲೆತಗ್ಗಿಸಿಕೊಂಡು ನಡೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಆರಗ ಜ್ಞಾನೇಂದ್ರ ಹೆಸರು ಕೆಡಿಸಿಕೊಂಡಿದ್ದಾರೆ.‌ ಹತ್ತನೇ ತಾರೀಖಿನಂದು ಪಾದಯಾತ್ರೆ ಸಮಾರೋಪದಲ್ಲಿ ಇತಿಹಾಸ ಸೃಷ್ಟಿಯಾಗುತ್ತೆ. ಅಷ್ಟು ಜನ ಸೇರುತ್ತಾರೆ ಎಂದು ಕಿಮ್ಮನೆ ರತ್ನಾಕರ್‌ ಹೇಳಿದರು.

ಬಿಜೆಪಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧದ ಪಾದಯಾತ್ರೆಯನ್ನು ಆರನೇ ತಾರೀಕಿನಿಂದ ಆರಂಭ ಮಾಡಿದ್ದೇವು.‌ ಮೊದಲ ದಿನ ಕಾಗೋಡು ಪುತ್ರಿ ಬಂದಿದ್ದರು. ಭಾನುವಾರ ಮಧು ಬಂಗಾರಪ್ಪ ಪಾದಯಾತ್ರೆಯಲ್ಲಿ ಸೇರಿಕೊಂಡರು. ದಿನೇ ದಿನೇ ತೀರ್ಥಹಳ್ಳಿಯಲ್ಲಿ ಅರಾಜಕತೆ ಹೆಚ್ಚಾಗುತ್ತಿದೆ. ಪಾದಯಾತ್ರೆಗೆ ಜನರ ಸ್ಪಂದನೆ ಹೆಚ್ಚಿದೆ ಎಂದರು.