ಮನೆ ರಾಜ್ಯ ಚಿಕ್ಕೋಡಿಯ ಅಂಕಲಿ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ: ಐದು ಮನೆಗಳು, ಒಂದು ಅಂಗಡಿ ಸಂಪೂರ್ಣ ಭಸ್ಮ

ಚಿಕ್ಕೋಡಿಯ ಅಂಕಲಿ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ: ಐದು ಮನೆಗಳು, ಒಂದು ಅಂಗಡಿ ಸಂಪೂರ್ಣ ಭಸ್ಮ

0

ಚಿಕ್ಕೋಡಿ(ಬೆಳಗಾವಿ): ತಡರಾತ್ರಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಐದು ಮನೆಗಳು ಹಾಗೂ ಒಂದು ಅಂಗಡಿ ಸಂಪೂರ್ಣ ಸುಟ್ಟಿರುವ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿ ಅಗ್ನಿಶಾಮಕ ಸಿಬ್ಬಂದಿಗಳು ಬಂದು ನಾಲ್ಕು ಫೈರ್​ ಎಂಜಿನ್ ​ಗಳ ಮೂಲಕ ಯಶಸ್ವಿಯಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿದಾನಂದ ಮೇದಾರ ಮತ್ತು ಮಹಾದೇವ ಮೇದಾರ ಕುಟುಂಬಕ್ಕೆ ಸೇರಿದ 5 ಮನೆಗಳು ಮತ್ತು ದತ್ತಾತ್ರೇಯ ಪರಿಟ್​ ಅವರಿಗೆ ಸೇರಿದ ಅಂಗಡಿ ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

ಸ್ಥಳಕ್ಕೆ ಚಿಕ್ಕೋಡಿ ಡಿವೈಎಸ್ಪಿ ಗೋಪಾಲ ಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.