ಮನೆ ಸ್ಥಳೀಯ ಜನ-ಜಾನುವಾರುಗಳಿಗೆ ನೀರು, ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಿ: ಶಾಸಕ ಜಿ.ಟಿ.ದೇವೇಗೌಡ

ಜನ-ಜಾನುವಾರುಗಳಿಗೆ ನೀರು, ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಿ: ಶಾಸಕ ಜಿ.ಟಿ.ದೇವೇಗೌಡ

0

ಮೈಸೂರು: ಮುಂದಿನ ದಿನಗಳಲ್ಲಿ ಎದುರಾಗುವ ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕಟ್ಟೆಚ್ಚರವಹಿಸಬೇಕು. ಜನ-ಜಾನುವಾರುಗಳಿಗೆ ನೀರು,ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಅಧಿಕಾರಿಗಳು ಐದಾರು ತಿಂಗಳ ಕಾಲ ಹಳ್ಳಿಗಳಿಗೆ ತಪ್ಪದೆ ಭೇಟಿ ನೀಡಿ ಪರಿಸ್ಥಿತಿ ಅರಿತು ಕೆಲಸ ಮಾಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ  ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ನಗರಸಭೆ,ಪಟ್ಟಣ ಪಂಚಾಯಿತಿ,ಗ್ರಾಪಂ ಅಧಿಕಾರಿಗಳ, ವಿ.ಎ.‌ ಸರ್ವೆಯರ್ ಗಳ ಸಭೆ ನಡೆಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಗಳಲ್ಲಿ ಜನ-ಜಾನುವಾರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಬೇಸಿಗೆ ಬರಲಿದ್ದು, ನೀರು ಪೂರೈಕೆಗೆ ಸಂಬಂಧಿಸಿದಂತೆ ಪೂರ್ವ ತಾಂರಿ ವಾಡಿಕೊಳ್ಳಬೇಕು. ಈ ವಿಷುಂದಲ್ಲಿ ನಿರ್ಲಕ್ಷ್ಯ ವಹಿಸಬಾರದು’ ಎಂದು ನಿರ್ದೇಶನ ನೀಡಿದರು.

ಕ್ಷೇತ್ರದ ಗ್ರಾಮ ಪಂಚಾಯಿತಿವಾರು ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು, ಕುಡಿುುಂವ ನೀರಿನ ಪರಿಸ್ಥಿತಿ, ನರೇಗಾ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪಿಡಿಒಗಳಿಂದ ವಾಹಿತಿ ಪಡೆದು ಚಾಟಿ ಬೀಸಿದರು.

ಮನ್ರೇಗಾ,೧೫ನೇ ಹಣಕಾಸು ಆಯೋಗದ ಅನುದಾನ, ರಾಜ್ಯ,ಕೇಂದ್ರಸರ್ಕಾರದಿಂದ ಬರುವ ಅನುದಾನವನ್ನು ಬಳಸಿಕೊಂಡು ಮೊದಲು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು. ಬರಗಾಲ ನಿರ್ವಹಣೆಯೇ ನಿಮಗೆ ಮೊದಲ ಆದ್ಯತೆಯ ಕೆಲಸ ಆಗಬೇಕು. ೧೫ನೇ ಹಣಕಾಸು ಆಯೋಗದಿಂದ ಬರುವ ಅನುದಾನದಲ್ಲಿ ನೀರಿನ ಕಾಮಗಾರಿಗಳಿಗೆ ಒತ್ತು ಕೊಡಬೇಕು ಎಂದು ಸೂಚಿಸಿದರು. ತಾಲ್ಲೂಕಿನ ಬೀರಿಹುಂಡಿುಂಲ್ಲಿ ಕುಡಿುುಂವ ನೀರಿಗೆ ಸಮಸ್ಯೆ ಇದೆ. ನಾಲ್ಕು ಕೊಳವೆಬಾವಿುಂಲ್ಲಿನ ನೀರಿನ ಇಳುವರಿ ಕಡಿಮೆಾಂಗಿದೆ. ಆದ್ದರಿಂದ ಖಾಸಗಿುಂವರ ಜೊತೆ ಒಪ್ಪಂದ ವಾಡಿಕೊಳ್ಳಲಾಗಿದೆ. ಅವರಿಗೆ ಸೇರಿದ ಕೊಳವೆಬಾವಿಗಳಿಂದ ನೀರು ಪಡೆುಂಲಾಗುವುದು. ೧೫ ದಿನಗಳಲ್ಲಿ ಪೈಪ್‌ಲೈನ್ ವಾಡಿ ಪೂರೈಸಲು ಕ್ರಮ ವಹಿಸಲಾಗುವುದು’ ಎಂದು ಅಲ್ಲಿನ ಪಿಡಿಒ ತಿಳಿಸಿದರು.

‘ಶಾಲೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಶಿಕ್ಷಕರು ಆದ್ಯತೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಕಾಂಪೌಂಡ್, ಆಟದ ಮೈದಾನ ಹಾಗೂ ಸ್ಮಶಾನ ನಿರ್ವಾಣಕ್ಕೆ ಆದ್ಯತೆ ನೀಡಬೇಕು. ಆಶ್ರುಂ ೋಂಜನೆಗೆ ಸಂಬಂಧಿಸಿದಂತೆ ಆಾಂ ಗ್ರಾಮಗಳಲ್ಲೇ ಸರ್ಕಾರಿ ಜಾಗವನ್ನು ಕೂಡಲೇ ಗುರುತಿಸಬೇಕು’ ಎಂದು ದೇವೇಗೌಡ ಸೂಚಿಸಿದರು.

 ಪಿಡಿಒಗಳಿಗೆ ಪಾಠ: ‘ಪಿಡಿಒಗಳು ಾಂರೋ ಕೆಲವು ನಾುಂಕರನ್ನು ಹಚ್ಚಿಕೊಳ್ಳುವುದಲ್ಲ; ಅಲ್ಲಿನ ಜನರನ್ನು ಹಚ್ಚಿಕೊಳ್ಳಬೇಕು. ಕೆಲವರನ್ನು ಓಲೈಸಿ ಾಂರದೋ ಕೆಂಗಣ್ಣಿಗೆ ಗುರಿಾಂಗಬೇಕೇಕೆ?’ ಎಂದು ಪಾಠ ವಾಡಿದರು. ‘ಪಿಡಿಒಗಳನ್ನು ನಾನೇನೂ ವರ್ಗಾವಣೆ ವಾಡಿಸುತ್ತಿಲ್ಲ. ಸರ್ಕಾರವೇ ದಿಢೀರನೆ ವರ್ಗಾವಣೆ ವಾಡುತ್ತಿದೆ. ನಮ್ಮ ಕ್ಷೇತ್ರದಲ್ಲಿರುವವರನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲು ಅವಕಾಶ ಕೊಡಬಾರದು. ಅಧಿಕಾರಿಗಳು ಕೂಡ ಸರ್ಕಾರಕ್ಕೆ ಮನವರಿಕೆ ವಾಡಿಕೊಡಬೇಕು. ಚೆನ್ನಾಗಿ ಕೆಲಸ ವಾಡುತ್ತಿರುವವರನ್ನು ನಮ್ಮಲ್ಲೇ ಉಳಿಸಿಕೊಳ್ಳಬೇಕು’ ಎಂದರು.

‘ನಮ್ಮ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿುಂಲ್ಲಿ ಬೆಂಗಳೂರಿನಂತೆ ಒಂದು ಗುಂಟೆಗೂ ಬಹಳ ಬೆಲೆ ಬಂದಿದೆ. ಹೀಗಾಗಿ ಾಂರೂ ಒಂದು ಗುಂಟೆುಂನ್ನೂ ಕೊಡುವುದಕ್ಕೆ ಬುಂಸುವುದಿಲ್ಲ. ಕಂದಾುಂ ದಾಖಲೆೆುೀಂ ಶಾಶ್ವತ ದಾಖಲೆ. ಅದನ್ನು ಪರಿಗಣಿಸಿ ಜಾಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

 ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ: ಕ್ಷೇತ್ರದ ವ್ಯಾಪ್ತಿುಂಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆುುಂತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ವಾಣಕ್ಕೆ ಅಗತ್ಯ ಇರುವ ನಿವೇಶನ ಮಂಜೂರಾತಿಗೆ ಪ್ರಸ್ತಾಪ ಸಲ್ಲಿಸಬೇಕು. ಅಧಿವೇಶನದ ವೇಳೆ ಸಚಿವರನ್ನು ಭೇಟಿ ವಾಡಿ ಮಂಜೂರು ವಾಡಿಸುವ ಜತೆಗೆ ಕಟ್ಟಡ ನಿರ್ವಾಣಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ವಾಡಿಸಲು ಪ್ರುಂತ್ನ ನಡೆಸಲಾಗುತ್ತದೆ.ತಕ್ಷಣವೇ ಇಲಾಖೆುಂ ಮೂಲಕ ಸರ್ಕಾರಕ್ಕೆ ಪಟ್ಟಿ ಸಮೇತ ಪ್ರಸ್ತಾಪವನ್ನು ಸಲ್ಲಿಸುವಂತೆ ಶಿಶು ಯೋಜನಾಧಿಕಾರಿಗೆ ಸೂಚಿಸಿದರು.

ಸರ್ಕಾರಿ ಹಿರಿುಂ ಪ್ರಾಥಮಿಕ, ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಕಟ್ಟಡ ನಿರ್ವಾಣ,ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವುದು ಅಗತ್ಯ ಇರುವ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ರುಬಿಆರ್ ಸಿಗಳ ಸಭೆ ನಡೆಸಿ ವಾಹಿತಿುಂನ್ನು ಪಡೆುಂಬೇಕು. ಹೆಚ್ಚುವರಿ ಕೊಠಡಿಗಳ ನಿರ್ವಾಣಕ್ಕೆ ಬೇಕಾದ ಅನುದಾನ ಸಮೇತ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಬೇಕು ಎಂದು ತಾಪಂ ಇಒಗೆ ಸಲಹೆ ನೀಡಿದರು.

ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಶೌಚಾಲುಂಗಳ ನಿರ್ವಹಣೆ ವಾಡದೆ ಇರುವ ಬಗ್ಗೆ ದೂರು ಬರುತ್ತಿದೆ. ಸ್ಥಳೀುಂ ಪೌರ ಕಾರ್ಮಿಕರಿಂದ ವಾರದಲ್ಲಿ ಒಂದು ದಿನ ಶುಚಿಗೊಳಿಸುವಂತೆ ವಾಡಬೇಕು ಎಂದರು.ಎಲ್ಲೆಲ್ಲಿ ಕಟ್ಟಡ ನಿರ್ಮಿಸಬೇಕು ಮತ್ತು ಹೆಚ್ಚುವರಿ ಕೊಠಡಿಗಳೆಷ್ಟು ಬೇಕಾಗಿದೆ ಎಂಬ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಅದರ ಪ್ರತಿುಂನ್ನು ನನಗೂ ಕೊಡಬೇಕು. ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ನಾನು ಆದ್ಯತೆ ಮೇಲೆ ಮಂಜೂರು ವಾಡಿಸಿಕೊಡುತ್ತೇನೆ. ಪ್ರಸ್ತಾವ ಕಳುಹಿಸಿ ಸುಮ್ಮನೆ ಕುಳಿತುಕೊಂಡರೆ ಪ್ರೋಂಜನ ಆಗುವುದಿಲ್ಲ. ನನ್ನ ಮೂಲಕ ಫಾಲೋಅಪ್ ವಾಡಿಸಬೇಕು. ಕೂಡಲೇ ಪಟ್ಟಿ ಕೊಡಬೇಕು’ ಎಂದು ನಿರ್ದೇಶನ ನೀಡಿದರು.

ನಿರ್ವಹಣೆಗೆ ಕ್ರಮ ವಹಿಸಿ: ‘ಸರ್ಕಾರಿ ಶಾಲಾ ಶೌಚಾಲುಂಗಳ ನಿರ್ವಹಣೆುಂನ್ನು ವಾರದಲ್ಲಿ ಒಮ್ಮೆಾಂದರೂ ಗ್ರಾಮ ಪಂಚಾಯಿತಿಯಿಂದ ವಾಡಬೇಕು. ಶಿಕ್ಷಕರು ಈ ವಿಷುಂದಲ್ಲಿ ಕ್ರಮ ವಹಿಸುತ್ತಿಲ್ಲ. ಮಕ್ಕಳ ಕೈಯಲ್ಲಿ ವಾಡಿಸಿಬಿಡುತ್ತಾರೆ. ಇದು ದೊಡ್ಡ ಸುದ್ದಿಾಂಗುತ್ತದೆ. ದೂರುಗಳು ಬರುತ್ತದೆ’ ಎಂದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಹುತೇಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶೌಚಾಲುಂ ನಿರ್ವಹಣೆಗಾಗಿ ಶಾಲೆಗೆ ಅನುದಾನ ನಿಗದಿಪಡಿಸಿರುವುದನ್ನು ಬಳಸಿಕೊಂಡು ನಿರ್ವಹಣೆ ವಾಡಬೇಕು. ಆಯಾ ಊರಿನಲ್ಲಿ ಇರುವ ಪೌರ ಕಾರ್ಮಿಕರ ಬಳಸಿಕೊಳ್ಳಬೇಕು. ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ವಾಡುವವರಿಗೆ ಇದನ್ನು ವಹಿಸಿದರೆ ಒತ್ತಡ ಬೀಳಲಿದೆ. ಸ್ವಚ್ಛತೆ ವಾಡುವುದಕ್ಕೆ ಕೊರತೆ ಇದೆ ಎಂದು ಹೇಳಿದರು.

ಇದನ್ನು ಪರಿಗಣಿಸಿದ ಶಾಸಕ ಜಿ.ಟಿ.ದೇವೇಗೌಡ, ಶಾಲೆುಂಲ್ಲಿ ಉತ್ತಮ ವಾತಾವರಣ ಮತ್ತು ಮಕ್ಕಳ ಕೈನಲ್ಲಿ ಸ್ವಚ್ಛ ವಾಡಿಸದಂತೆ ನೋಡಿಕೊಳ್ಳಬೇಕು.ಒಂದು ವೇಳೆಮಕ್ಕಳಿಂದ ಶುಚಿಗೊಳಿಸಿ ಸಿಕ್ಕಿಬಿದ್ದರೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಲವಾಲ,ಗುಂಗ್ರಾಲ್ ಛತ್ರ,ಆನಂದೂರು,ನಾಗವಾಲ, ಜುಂಪುರ, ದೊಡ್ಡ ವಾರನಗೌಡನಹಳ್ಳಿ ಮೊದಲಾದ ಪಂಚಾಯಿತಿುಂಲ್ಲಿ ಬರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಾಹಿತಿ ಪಡೆದುಕೊಂಡರು. ಒಂದೆರಡು ಹಳ್ಳಿ ಬಿಟ್ಟರೆ ಉಳಿದ ಗ್ರಾಮದಲ್ಲಿ ಾಂವುದೇ ಸಮಸ್ಯೆ ಇಲ್ಲ.ಜಲಜೀವನ್‌ಮಿಷನ್ ಯೋಜನೆಯಡಿ ಮನೆ ಮನೆಗೆ ಪೈಪ್ ಲೈನ್ ಎಳೆದು ಕುಡಿುುಂವ ನೀರು ಪೂರೈಕೆ ವಾಡಲಾಗುತ್ತಿದೆ ಎಂದು ಇಒ ಹೇಳಿದರು.

ಸರ್ಕಾರಿ ಜಾಗ ಗುರುತಿಸಿ: ಭೂಮಿಯ ಬೆಲೆ ಜಾಸ್ತಿಯಾಗುತ್ತಿರುವುದರಿಂದ ಸರ್ಕಾರಿ ಭೂಮಿಯನ್ನು ಗುರುತಿಸಿ ಮೀಸಲಿಡಬೇಕು. ಮುಂದೆ ಸರ್ಕಾರಿ ಶಾಲೆ,ಅಂಗನವಾಡಿ ಕಟ್ಟಡ,ಆಸ್ಪತ್ರೆ,ವಸತಿ ಬಡಾವಣೆಗಳಿಗೆ ಭೂಮಿ ಕೊರತೆ ಎದುರಾಗುವ ಕಾರಣ ಸರ್ಕಾರಿ ಜಮೀನು ಎಲ್ಲೆಲ್ಲಿದೆ ಎಂಬುದನ್ನು ಗುರುತಿಸಿ ಬೌಂಡರಿ ನಿಗದಿಪಡಿಸಬೇಕು. ವಸತಿ ಬಡಾವಣೆಗೆ ಪ್ರಸ್ತಾಪ ಸಲ್ಲಿಸಿರುವ ಗ್ರಾಪಂಗಳಿಗೆ ಹಸ್ತಾಂತರ ಮಾಡಬೇಕು ಎಂದು ತಹಸಿಲ್ದಾರ್‌ಗೆ ಸೂಚಿಸಿದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡಬೇಕು. ಚಾಮುಂಡಿಬೆಟ್ಟದಲ್ಲಿ ಸ್ವಚ್ಛತೆ ಸರಿಯಾಗಿ ಮಾಡಬೇಕು. ರಸ್ತೆಗೆ ಕಸ ತಂದು ಎಸೆಯುವ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮಜರುಗಿಸಬೇಕು ಎಂದು ಹೇಳಿದರು.ತಾಪಂ ಆಡಳಿತಾಧಿಕಾರಿ ಸವಿತ, ತಹಸಿಲ್ದಾರ್ ಮಹೇಶ್,ತಾಲ್ಲೂಕು ಪಂಚಾಯಿತಿ ಇಒ ಗಿರಿಧರ್,ಎಡಿಎಲ್‌ಆರ್ ಚಿಕ್ಕಣ್ಣ ಸಭೆಯಲ್ಲಿ ಹಾಜರಿದ್ದರು.