ಮನೆ ರಾಷ್ಟ್ರೀಯ ಕೇಂದ್ರ ಸರ್ಕಾರದ ಶ್ವೇತ ಪತ್ರಕ್ಕೆ ವಿರುದ್ಧವಾಗಿ ಕಪ್ಪು ಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್

ಕೇಂದ್ರ ಸರ್ಕಾರದ ಶ್ವೇತ ಪತ್ರಕ್ಕೆ ವಿರುದ್ಧವಾಗಿ ಕಪ್ಪು ಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್

0

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಗುರುವಾರ ಕೇಂದ್ರ ಸರ್ಕಾರದ ಶ್ವೇತ ಪತ್ರಕ್ಕೆ ವಿರುದ್ಧವಾಗಿ ಕಪ್ಪು ಪತ್ರ ಬಿಡುಗಡೆ ಮಾಡಿದರು.

ಹತ್ತು ವರ್ಷಗಳ ಮೋದಿ ಸರ್ಕಾರದ ಅವಧಿಯ ವೈಫಲ್ಯಗಳನ್ನು ಪಟ್ಟಿ ಮಾಡಿರುವ ಬ್ಲ್ಯಾಕ್ ಪೇಪರ್ ಬಿಡುಗಡೆ ಮಾಡಿದ್ದಾರೆ.

ಕಪ್ಪು ಪತ್ರಕ್ಕೆ ಹತ್ತು ವರ್ಷಗಳ ಅನ್ಯಾಯದ ಕಾಲ ಎಂದು ಹೆಸರಿಸಲಾಗಿದೆ. ಪಕ್ಷದ ಪ್ರಕಾರ, ಕಪ್ಪು ಪತ್ರವು ನಿರುದ್ಯೋಗ, ಬೆಲೆ ಏರಿಕೆ ಮತ್ತು ರೈತರ ಸಂಕಷ್ಟದ ಬಗ್ಗೆ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ.

ಕಪ್ಪು ಪತ್ರ ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖ್ಯಸ್ಥ ಖರ್ಗೆ, “ನಾವು ಸರ್ಕಾರದ ವಿರುದ್ಧ ‘ಕಪ್ಪು ಪತ್ರ’ ಬಿಡುಗಡೆ ಮಾಡುತ್ತಿದ್ದೇವೆ, ಏಕೆಂದರೆ ಅವರು ಸಂಸತ್ತಿನಲ್ಲಿ ಮಾತನಾಡುವಾಗ ಅವರು ಯಾವಾಗಲೂ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ ಆದರೆ ತಮ್ಮ ವೈಫಲ್ಯಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅವರು ಆರ್ಥಿಕತೆಯಲ್ಲಿ ವಿಫಲರಾಗಿದ್ದಾರೆ” ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ನಿರುದ್ಯೋಗ ಈ ದೇಶದ ಬಹುದೊಡ್ಡ ಸಮಸ್ಯೆ, ಅದರ ಬಗ್ಗೆ ಅವರು (ಮೋದಿ) ಮಾತನಾಡುವುದೇ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.

 “ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ ಉದ್ಯೋಗಗಳ ಬಗ್ಗೆ ಪ್ರಧಾನಿ ಮಾತನಾಡಲಿಲ್ಲ, ನೀವು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ನೆಹರೂ ಅವರನ್ನು ನಿಂದಿಸುತ್ತಿದ್ದೀರಿ, ಆದರೆ ನಿಮ್ಮ ಸ್ವಂತ MNREGA ಬಗ್ಗೆ ಮಾತನಾಡಿ, ಅದಕ್ಕೆ ಹಣ ಬಿಡುಗಡೆಯಾಗಿಲ್ಲ, ಅದು ಗ್ರಾಮೀಣ ಸಂಕಷ್ಟಕ್ಕೆ ಕಾರಣವಾಗಿದೆ,’’ ಎಂದರು.