ಮನೆ ಅಪರಾಧ ಆಕಸ್ಮಿಕವಾಗಿ ಲೋನ್‌ ಆ್ಯಪ್‌ ಡೌನ್‌ ಲೋಡ್‌ ಮಾಡಿದ ಯುವತಿ:  ಸೈಬರ್‌ ವಂಚಕರಿಂದ ಬ್ಲ್ಯಾಕ್‌ ಮೇಲ್

ಆಕಸ್ಮಿಕವಾಗಿ ಲೋನ್‌ ಆ್ಯಪ್‌ ಡೌನ್‌ ಲೋಡ್‌ ಮಾಡಿದ ಯುವತಿ:  ಸೈಬರ್‌ ವಂಚಕರಿಂದ ಬ್ಲ್ಯಾಕ್‌ ಮೇಲ್

0

ಬೆಂಗಳೂರು: ಇನ್‌ ಸ್ಟಾಗ್ರಾಂ ವೀಕ್ಷಿಸುವಾಗ ಆಕಸ್ಮಿಕವಾಗಿ ಲೋನ್‌ ಆ್ಯಪ್‌ ಡೌನ್‌ ಲೋಡ್‌ ಮಾಡಿದಕ್ಕಾಗಿ ಯುವತಿಯೊಬ್ಬಳಿಗೆ ಕರೆ ಮಾಡಿದ ಸೈಬರ್‌ ವಂಚಕರು ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ 22 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಗೋವಿಂದಪುರ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಟಿ ಕಾಯ್ದೆ ಅಡಿ ಕೇಸ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ‌

ಸಂತ್ರಸ್ತೆ ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಂ ಖಾತೆ ವೀಕ್ಷಿಸುವಾಗ ಆಕಸ್ಮಿಕವಾಗಿ ಲೋನ್‌ ಆ್ಯಪ್‌ ಡೌನ್‌ ಲೋಡ್‌ ಆಗಿದ್ದು, ಕೆಲ ಕ್ಷಣಗಳಲ್ಲೇ ಅದನ್ನು ಡಿಲೀಟ್‌ ಮಾಡಿದ್ದಾರೆ. ಆದರೆ, ಕೆಲ ಅಪರಿಚಿತ ವ್ಯಕ್ತಿಗಳು, ಸಂತ್ರಸ್ತೆಯ ನಗ್ನ ಚಿತ್ರಗಳನ್ನು ಕೃತಕ ಬುದ್ಧಿಮತೆ ಮೂಲಕ ಸೃಷ್ಟಿಸಿ, ಆಕೆಯ ಮೊಬೈಲ್‌ ಗೆ ಕಳುಹಿಸಿದ್ದಾರೆ. ಅಲ್ಲದೆ, ಐದಾರು ನಂಬರ್‌ ಗಳಿಂದ ನಿರಂತರ ಕರೆ ಮಾಡಿ, ತಾವೂ ಸೂಚಿಸಿದ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಬೇಕು. ಹಣ ಕೊಡಲು ಯುವತಿ ನಿರಾಕರಿಸಿದ್ದಾರೆ. ಆಕೆಯ ನಗ್ನ ಫೋಟೋಗಳನ್ನು ಕುಟುಂಬದವರು ಹಾಗೂ ಸ್ನೇಹಿತರಿಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಹೀಗಾಗಿ ಕೃತಕ ಬುದ್ಧಿಮತ್ತೆ ಮೂಲಕ ನಗ್ನಪೋಟೋಗಳನ್ನು ಸೃಷ್ಟಿಸಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸಂತ್ರಸ್ತೆ ದೂರು ನೀಡಿದ್ದಾರೆ. ‌