ಮನೆ ರಾಜಕೀಯ ನನ್ನ ವಿರುದ್ಧ ಇಂತಹ ನೂರು ಎಫ್​ ಐಆರ್​ ಹಾಕಿದರು ನಾನು ಹೆದರಲ್ಲ: ಕೆ.ಎಸ್​.ಈಶ್ವರಪ್ಪ

ನನ್ನ ವಿರುದ್ಧ ಇಂತಹ ನೂರು ಎಫ್​ ಐಆರ್​ ಹಾಕಿದರು ನಾನು ಹೆದರಲ್ಲ: ಕೆ.ಎಸ್​.ಈಶ್ವರಪ್ಪ

0

ಶಿವಮೊಗ್ಗ: ನನ್ನ ವಿರುದ್ಧ ಇಂತಹ ನೂರು ಎಫ್​ ಐಆರ್​ ಹಾಕಿದರು ನಾನು ಹೆದರಲ್ಲ. ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುವೆ. ದೇಶದ್ರೋಹಿ ಹೇಳಿಕೆ ಕೊಡುವವರ ಮೇಲೆ ಕೇಸ್ ಹಾಕಿಲ್ಲ. ಆದರೆ ನನ್ನ ಮೇಲೆ ಕೇಸ್ ಹಾಕಿದ್ದಾರೆ  ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಆರೋಪಿಸಿದರು.

 ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ರಾಷ್ಟ್ರದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು. ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ ಎಂದರು.

ಸಂಸದ ಡಿ.ಕೆ.ಸುರೇಶ್‌ ಅವರಿಗೆ ಮೊದಲು ನೋಟಿಸ್ ಕೊಡಲಿ. ನನ್ನ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್​​ ಗೊಂದಲ ಸೃಷ್ಟಿಸುತ್ತಿದೆ. ನಾನು ಎಲ್ಲೂ ಸಂಸದ ಡಿಕೆ ಸುರೇಶ್ ಅವರಿ​ಗೆ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿಲ್ಲ. ನನಗೆ ನೋಟಿಸ್ ಬಂದಿದೆ, ನಾನು ಉತ್ತರ ಕೊಡುತ್ತೇನೆ. ಪ್ರಕರಣದಲ್ಲಿ ನನಗೆ ಕ್ಲೀನ್​ ಚಿಟ್ ಸಿಗುವ ವಿಶ್ವಾಸ ಇದೆ ಎಂದರು.

ನನಗೆ ಇನ್ನೂ ನೂರು ನೋಟಿಸ್ ಕೊಡಿ, ನನ್ನ ಅಭ್ಯಂತರ ಇಲ್ಲ. ಡಿ.ಕೆ.ಸುರೇಶ್ ​ಗೆ ಯಾಕೆ ನೋಟಿಸ್ ನೀಡಿಲ್ಲ-ಕೆ.ಎಸ್.ಈಶ್ವರಪ್ಪ. ನಾನು ಡಿ.ಕೆ.ಸುರೇಶ್​ ರನ್ನು ಗುಂಡುಕ್ಕಿ ಕೊಲ್ಲಿ ಎಂದಿಲ್ಲ. ನಾನು ಹೇಳಿರುವುದು ದೇಶದ್ರೋಹಿಗಳನ್ನು ಗುಂಡಿಕ್ಕಿ‌ ಕೊಲ್ಲುವ ಕಾನೂನು ತನ್ನಿ ಎಂದಿದ್ದೇನೆ. ಈ ದೇಶಕ್ಕಾಗಿ ಬಲಿದಾನ ಆದವರ ಬಗ್ಗೆ ಡಿ.ಕೆ ಸುರೇಶ್ ಅವರಿಗೆ ಗೊತ್ತಿಲ್ಲ. ನನ್ನ ಮಾತನ್ನ ತಿರುಚುವ ಪ್ರಯತ್ನ ಮಾಡಲಾಗುತ್ತಿದೆ. ನನ್ನ ಹೇಳಿಕೆಯನ್ನು ಸ್ವತಂತ್ರಕ್ಕಾಗಿ ಹೋರಾಟ ಮಾಡಿದವರು ಸ್ವಾಗತ ಮಾಡುತ್ತಾರೆ. ನೋಟೀಸ್ ಗೆ ಕಾನೂನು ಬದ್ದವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ. ಈ ಪ್ರಕರಣದಲ್ಲೂ ನನಗೆ ಕ್ಲೀನ್ ಚಿಟ್ ಸಿಗುತ್ತೆ ಎಂದು ಸ್ಪಷ್ಟಪಡಿಸಿದರು.

ಸುಳ್ಳು ಹೇಳುವುದರಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸೀಮ. ಆರ್ ​​ಎಸ್ ಎಸ್ ಬಗ್ಗೆ ನೀಡಿದ ಹೇಳಿಕೆ ಸಿಎಂ ವಾಪಸ್​ ಪಡೆಯಲಿ. ಸಿದ್ದರಾಮಯ್ಯನವರೇ ನೀವು ಮೊದಲು ಶ್ವೇತಪತ್ರ ಹೊರಡಿಸಿ. ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ ಇಂತಹ ಹೇಳಿಕೆ ಬೇಡ. ಮೊದಲು ಶ್ವೇತಪತ್ರ ಹೊರಡಿಸಿ. ರಾಜ್ಯ ಸರ್ಕಾರ ದಿವಾಳಿ ಆಗಿ ಹೋಗಿದೆ. ರಾಷ್ಟ್ರಭಕ್ತರನ್ನ ಕಂಡರೇ ಕಾಂಗ್ರೆಸ್‌ ನವರಿಗೆ ಅಲರ್ಜಿ. ಕುಂಕುಮ ಹಚ್ಚಿಕೊಂಡವರ ಬಗ್ಗೆ ಭಯ ಇದೆ ಇವರಿಗೆ. ರಾಷ್ಟ್ರಪತಿಗಳ ಬಗ್ಗೆನು ಗೌರವ ಇಲ್ಲ ಇವರಿಗೆ. ಮುಖ್ಯಮಂತ್ರಿ ಗಳು ತಮ್ಮ ಭಾಷೆಯನ್ನು ಸುಧಾರಿಸಿಕೊಳ್ಳಬೇಕು. ಕೇಂದ್ರದ ನಾಯಕರಿಗೆ ಕಾನೂನು ತರುವ ಕುರಿತು ಪತ್ರ ಬರೆಯುತ್ತಿದ್ದೇನೆ ಎಂದು ವಾಗ್ದಾಳಿ ಮಾಡಿದರು.