ಮನೆ ರಾಷ್ಟ್ರೀಯ ಹಲ್ದ್ವಾನಿ ಹಿಂಸಾಚಾರ: ದಿನಗಳಲ್ಲಿ ನ್ಯಾಯಾಂಗ ತನಿಖೆ ನಡೆಸಿ, ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆ

ಹಲ್ದ್ವಾನಿ ಹಿಂಸಾಚಾರ: ದಿನಗಳಲ್ಲಿ ನ್ಯಾಯಾಂಗ ತನಿಖೆ ನಡೆಸಿ, ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆ

0

ಉತ್ತರಾಖಂಡ್:‌ ನೈನಿತಾನ್‌ ಜಿಲ್ಲೆಯ ಹಲ್ದ್ವಾನಿ ನಗರದ ವನ್‌ ಭೂಲ್‌ ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರದ ಘಟನೆ ಬಗ್ಗೆ 15 ದಿನಗಳಲ್ಲಿ ನ್ಯಾಯಾಂಗ ತನಿಖೆ ನಡೆಸಿ, ಅದರ ತನಿಖಾ ವರದಿಯನ್ನು ಸರ್ಕಾರಕ್ಕೆ ನೀಡಬೇಕೆಂದು ಉತ್ತರಾಖಂಡ್‌ ಮುಖ್ಯ ಕಾರ್ಯದರ್ಶಿ ರಾಧಾ ರತುರಿ ಸೂಚನೆ ನೀಡಿದ್ದಾರೆ.

ಹಲ್ದ್ವಾನಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐದು ಮಂದಿಯನ್ನು ಬಂಧಿಸಲಾಗಿದೆ. ಮೂರು ಎಫ್‌ ಐಆರ್‌ ದಾಖಲಿಸಿದ್ದು, 19 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ಒಟ್ಟು 5,000 ಅಪರಿಚಿತರನ್ನು ಉಲ್ಲೇಖಿಸಲಾಗಿದೆ.

ಫೆಬ್ರವರಿ 8ರಂದು ಹಲ್ದ್ವಾನಿಯ ಬನ್‌ ಬೂಲ್‌ ಪುರ ಪ್ರದೇಶದಲ್ಲಿನ ಅತಿಕ್ರಮವಾಗಿ ನಿರ್ಮಿಸಿದ್ದ ಮಸೀದಿಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಅತಿಕ್ರಮಣ ತೆರವು ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದರು. ಇದರ ಪರಿಣಾಮ ಪೊಲೀಸರು ಹಲ್ದ್ವಾನಿ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಲ್ದ್ವಾನಿ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕರ್ಫ್ಯೂ ತೆರವುಗೊಳಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎ.ಪಿ.ಅಂಶುಮಾನ್‌ ತಿಳಿಸಿದ್ದಾರೆ. ಶುಕ್ರವಾರ ಹಲ್ದ್ವಾನಿ ಪ್ರದೇಶಕ್ಕೆ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.