ಮನೆ ರಾಜ್ಯ ಫೆ.೧೬ರಂದು ಶ್ರೀರಂಗನಾಥನ ಬ್ರಹ್ಮ ರಥೋತ್ಸವ

ಫೆ.೧೬ರಂದು ಶ್ರೀರಂಗನಾಥನ ಬ್ರಹ್ಮ ರಥೋತ್ಸವ

0

ಶ್ರೀರಂಗಪಟ್ಟಣ: ಇದೇ ಫೆ.೧೬ರ ಶುಕ್ರವಾರದಂದು ರಥ ಸಪ್ತಮಿ ಅಂಗವಾಗಿ ನಡೆಯಲಿರುವ ಶ್ರೀರಂಗನಾಥ ಬ್ರಹ್ಮ ರಥೋತ್ಸವ ನಡೆಯಲಿದ್ದು, ರಥದ ಶೃಂಗಾರ ಹಾಗೂ ಸಕಲ ಧಾರ್ಮಿಕ ಕಾರ್ಯಕ್ರಮಗಳ ಸಿದ್ದತೆ ಭರದಿಂದ ಸಾಗಿದೆ.

ಕಾವೇರಿ ಮಡಿಲಲ್ಲಿ ಇತಿಹಾಸ ವುಳ್ಳ ಶ್ರೀರಂಗಪಟ್ಟಣದ ಆದಿರಂಗನಿಗೆ ದಕ್ಷಿಣಭಾರತದ ವಿವಿದೆಡೆ ಭಕ್ತರಿದ್ದು,ಅಂದು ಮುಂಜಾನೆಯೇ ರಾಜ್ಯ ಸೇರಿದಂತೆ ಹೊರ ರಾಜ್ಯ ಹಾಗೂ ಅಕ್ಕಪಕ್ಕದ ಊರುಗಳಿಂದ ಭಕ್ತರು ಆಗಮಿಸಿ ಪಕ್ಕದಲ್ಲಿಯೇ ಹರಿಯುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ , ಶ್ರೀರಂಗನ ದರ್ಶನ ಪಡೆಯುವುದು ವಿಶೇಷವಾಗಿರುತ್ತದೆ.
ಸೂರ್ಯ ಮಂಡಲ: ಅಂದು ಮುಂಜಾನೆ ೪.೩೦ರ ವೇಳೆಗೆ ದೇವಾಲಯದಲ್ಲಿ ವೈದ್ಧಿಕರ ಪೂಜೆಗಳ ಆರಂಭದೊಂದಿಗೆ ಬೆಳಗ್ಗೆ ೬ಕ್ಕೆ ಗಜಲಕ್ಷ್ಮಿ ವಾಹನ,ಸೂರ್ಯ ಮಂಡಲ ಹಾಗೂ ಚಂದ್ರಮಂಡಲ ರಥಗಳು ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಂಚರಿಸಿ,ಗ್ರಾಮದ ಜನರಿಂದ ಪೂಜಿಸಿದ ನಂತರ ಶ್ರಿರಂಗನಾಥ ದೇವಾಲಯದ ಮುಂಭಾಗ ಬಂದು ನಿಲ್ಲುತ್ತವೆ.
ಬ್ರಹ್ಮ ರಥೋತ್ಸವ.ಇದಾದ ನಂತರ ನಂತರ ಪುನಃ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹೋಮ ಹವನ ನಡೆಸಿ ಮದ್ಯಾಹ್ನ ೧.೩೦ರ ವೇಳೆಗೆ ಸರ್ವ ಅಲಂಕೃತ ಆಭರಣಗಳಿಂದ ಕಂಗೊಳಿಸುವ ಶ್ರೀರಂಗನಾಯಕಿ ಮತ್ತು ಶ್ರೀರಂಗನಾಥನ ಉತ್ಸವ ಮೂರ್ತಿಯನ್ನು ವೈದ್ಧಿಕರು ಸರ್ವ ಅಲಂಕೃತವಾಗಿ ಸಿದ್ದಗೊಂಡ ನಂತರ ಬ್ರಹ್ಮರಥದಲ್ಲಿ ಪ್ರತಿಷ್ಟಾಪಿಸ
ಲಾಗುತ್ತದೆ. ಮಹಾವಿಷ್ಣು ಸ್ವರೂಪಿ ಆದಿಶೇಷ ಕುಳಿತ ಈ ಬ್ರಹ್ಮರಥವನ್ನು ದೇವಾಲಯದ ಬಳಿ ಸಾವಿರಾರು ಭಕ್ತರಿಂದ ರಥವನ್ನು ಎಳೆಯುವ ಮೂಲಕ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಗುತ್ತದೆ ಎಂದು ದೇವಾಲಯದ ಮುಖ್ಯ ಅರ್ಚಕ ವಿಜಯಸಾರಥಿ ತಿಳಿಸಿದರು.
ದೂರದ ಊರುಗಳಿಂದ ಆಗಮಿಸುವ ಹೊಸದಾಗಿ ವಿವಾಹವಗ ಗಂಡು ಹೆಣ್ಣು ಸೇರಿದಂತೆ ಇತರ ಭಕ್ತರು ರಥಕ್ಕೆ ಹಣ್ಣು ಜವನ ಎಸೆಯುವ ಮೂಲಕ ಭಕ್ತಿ ಭಾವಗಳನ್ನು ಸಮರ್ಪಿಸುವುದು ವಿಶೇಷವಾಗಿರುತ್ತದೆ.