ಮನೆ ಸುದ್ದಿ ಜಾಲ ಖ್ಯಾತ ಸಂಗೀತಗಾರ ಪಂಡಿತ್ ಶಿವಕುಮಾರ್ ಶರ್ಮಾ ಹೃದಯಾಘಾತದಿಂದ ನಿಧನ

ಖ್ಯಾತ ಸಂಗೀತಗಾರ ಪಂಡಿತ್ ಶಿವಕುಮಾರ್ ಶರ್ಮಾ ಹೃದಯಾಘಾತದಿಂದ ನಿಧನ

0

ಮುಂಬೈ(Mumbai): ಖ್ಯಾತ ಸಂತೂರ್ ವಾದಕ, ಪದ್ಮ ವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ(84) ಹೃದಯಾಘಾತದಿಂದ ಮಂಗಳವಾರ ವಿಧಿವಶರಾದರು.

ಖ್ಯಾತ ಸಂತೂರ್ ವಾದಕರಾಗಿದ್ದ ಶಿವಕುಮಾರ್ ಶರ್ಮಾ ಸಂಗೀತ ನಿರ್ದೇಶಕರು ಸಹ ಆಗಿದ್ದರು.

ಜಮ್ಮುವಿನಲ್ಲಿ ಜನಿಸಿದ ಪಂಡಿತ್ ಶಿವಕುಮಾರ್ ಶರ್ಮಾ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ಸಂತೂರ್ ನುಡಿಸುವುದನ್ನು ಕಲಿಯಲು ಪ್ರಾರಂಭಿಸಿದರು. 1955ರಲ್ಲಿ ಮೊದಲ ಬಾರಿಗೆ ಮುಂಬೈನಲ್ಲಿ ಸಾರ್ವಜನಿಕವಾಗಿ ಸಂತೂರ್ ಪ್ರದರ್ಶನ ನೀಡುವ ಮೂಲಕ ಸಂತೂರ್‌ನನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಹರಿಪ್ರಸಾದ್ ಚೌರಾಸಿಯಾ ಅವರೊಂದಿಗೆ, ಪಂಡಿತ್ ಶಿವಕುಮಾರ್ ಶರ್ಮಾ ಅವರು, ಸಿಲ್ಸಿಲಾ, ಚಾಂದಿನಿ ಮತ್ತು ಡರ್ ಸೇರಿದಂತೆ ಹಲವಾರು ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 1991 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಮತ್ತು 2001 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪಂಡಿತ್ ಶಿವಕುಮಾರ್ ಶರ್ಮಾ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.