ಮನೆ ಸ್ಥಳೀಯ ಬೃಹತ್ ಸೈಕಲ್ ಜಾಥಾ ಮೂಲಕ ಸಂವಿಧಾನ ಜಾಗೃತಿ

ಬೃಹತ್ ಸೈಕಲ್ ಜಾಥಾ ಮೂಲಕ ಸಂವಿಧಾನ ಜಾಗೃತಿ

0

ಮೈಸೂರು : ಭಾರತವು ತನ್ನ ಸಂವಿಧಾನವನ್ನು ಅಂಗೀಕರಿಸಿಕೊಂಡು 75 ವರ್ಷದ ಆಚರಣೆಯ ಪ್ರಯುಕ್ತ “ಸಂವಿಧಾನ ಜಾಗೃತಿ ಜಾಥಾ” ಅಂಗವಾಗಿ

 ಇಂದು ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮೈಸೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಸೈಕ್ಲಿಸ್ಟ್ ಅಸೋಸಿಯೇಷನ್ ಅವರ ಸಂಯುಕ್ತ ಆಶ್ರಯದಲ್ಲಿ  ಬೃಹತ್ ಸೈಕಲ್ ಜಾಥಾ  ಇಂದು ಬೆಳಿಗ್ಗೆ  ಮಹಾನಗರ ಪಾಲಿಕೆ ಆಯುಕ್ತರಾದ ಅಶಾದ್ ಉರ್ ರೆಹಮಾನ್ ಶರೀಫ್  ಚಾಲನೆ ನೀಡಿದರು.

ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ನ ಭಾಗವಾದ ಸಮಾಜ ಕಲ್ಯಾಣ ಇಲಾಖೆ ಪ್ರಾಯೋಜತ್ವದ ಈ ಜಾಥಾ ಗೆ ನಗರದ ಸೈಕ್ಲಿಂಗ್ ಹಾಗು ಕ್ರೀಡಾ ಸಂಘಗಳಾದ ಮೈಸೂರು ಅಥ್ಲೀಟ್ಸ್ ಕ್ಲಬ್, ಸೈಕ್ಲೋಪೀಡಿಯಾ,   ಮೈಸೂರು ಸೈಕ್ಲಿಂಗ್ ತರಬೇತಿ ಅಕಾಡೆಮಿ, ರಾಯಲ್ ರೈಡರ್ಸ್ ಹಾಗು ಯುವಜನ ಮತ್ತು ಸೇವಾ ಕ್ರೀಡಾ  ಇಲಾಖೆ ಕೈ ಜೋಡಿಸಿದ್ದು  18 ಮಹಿಳೆಯರನ್ನು ಒಳಗೊಂಡ 75 ಸೈಕಲ್ ಸವಾರರ ತಂಡ ಅಂದು ಹಳೆ ಡಿಸಿ ಆಫೀಸ್ ಕಚೇರಿಯ ಮುಂಭಾಗದಿಂದ ಹೊರಟು ಹುಣಸೂರ್ ರಸ್ತೆ ಮೂಲಕ, ಮೆಟ್ರೊಪಾಲ್ ಸರ್ಕಲ್,ರೈಲ್ವೆ ಸ್ಟೇಷನ್ ಸರ್ಕಲ್ ನಿಂದ ಎಲ್ಐಸಿ ವೃತ್ತ ತಲುಪುತ್ತದೆ… ಅಲ್ಲಿಂದ ಗಾಂಧಿನಗರ ಅಂಬೇಡ್ಕರ್ ವೃತ್ತದಲ್ಲಿ  ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸರ್ಕಾರಿ ಅತಿಥಿ ಗೃಹ ಸರ್ಕಲ್ ಇಂದ ಬೆಂಗಳೂರು ರಸ್ತೆಯ,ಮೂಲಕ ಅಶೋಕ ರಸ್ತೆ ತಲುಪಿ ಕೊನೆಗೆ ಟೌನ್ ಹಾಲ್ ವೃತ್ತದಲ್ಲಿ  ಸಮಾಪ್ತಿ ಮಾಡಲಾಯಿತು.

ಸೈಕ್ಲಿಂಗ್ ಪಟು ಗಳು ಜಾಥಾದಲ್ಲಿ ಸುಮಾರು 10 ಕಿಲೋಮೀಟರ್ ದೂರವನ್ನು (one way) ಕ್ರಮಿಸಿ ಮೈಸೂರು ನಗರ ಪ್ರದೇಶದಲ್ಲಿ ಸಂಚರಿಸಿ ಸಂವಿಧಾನ ಮಹತ್ವದ ಅರಿವನ್ನು ಮೂಡಿಸುವುದರ ವಿವಿಧ ಘೋಷಣೆಗಳನ್ನು ಕೂಗುವುದರ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಉಂಟು ಮಾಡಿದರು.  ಸಂವಿಧಾನದ ಮಹತ್ವ ಸಾರುವ ಅರಿವು ಮೂಡಿಸುವ ಸಂದೇಶವನ್ನು ಸಾರಿದರು.

ಈ ಸಂದರ್ಭದಲ್ಲಿ  ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತರು (ಆಡಳಿತ) G.S.ಸೋಮಶೇಖರ್ ರವರು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ರಂಗೇಗೌಡ ರವರು,2021 ನೇ ಸಾಲಿನ ‘ಮಿಸ್ ಗ್ಲಾಮರಸ್ ಕ್ವೀನ್ ಆಫ್ ಇಂಡಿಯಾ’ ಗೌರವಕ್ಕೆ ಭಾಜನರಾದ ಕುಮಾರಿ ತನಿಷ್ಕಾ ಮೂರ್ತಿ, ಮೈಸೂರಿನ ವಾಣಿಜ್ಯ ತೆರಿಗೆ ನಿವೃತ್ತ ಉಪ ಆಯುಕ್ತರಾದ ಹಿರಿಯ ಸೈಕಲ್ ಪಟು  ರಮೇಶ್ ನರಸಯ್ಯ ಹಾಗೂ ವೀಣಾ ಅಶೋಕ್ ಉಪಸ್ಥಿತರಿದ್ದರು.