ಮೈಸೂರು(Mysuru): ಹಳ್ಳಿಗಳು ಸ್ಮಶಾನವಾಗುವ ಮೊದಲು ರೈತರು ಎಚ್ಚೆತ್ತುಕೊಂಡು ಸಂಘಟಿತರಾಗಿ ನಿಲ್ಲಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಇಂದು ವಾಜಮಂಗಲ ಗ್ರಾಮ ಘಟಕ ಉದ್ಘಾಟನೆ ಮಾಡಿ ಮಾತನಾಡಿದರು.
ದೇಶದ ಆಹಾರ ಉತ್ಪಾದನೆ ಏರಿಕೆಯಾಗಿದ್ದರೂ ರೈತರ ಸಮಸ್ಯೆಗಳು ಕಡಿಮೆಯಾಗುತ್ತಿಲ್ಲ ರಸಗೊಬ್ಬರ ಬೆಲೆ ಏರಿಕೆ, ವಿದ್ಯುತ್ ಸಮಸ್ಯೆ, ಬೆಳೆಗೆ ಬೆಲೆ ಸಿಗದೇ ಇರುವುದು, ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸುವ ತಂತ್ರಗಾರಿಕೆಯಾಗಿದೆ ಎಂದರು.
ಕೃಷಿ ಜಮೀನು ಮೂರು ವರ್ಷ ವ್ಯವಸಾಯ ಮಾಡದೆ ಕಾಲಿ ಬಿಟ್ಟರೆ ಬೀಳು ಜಮೀನು ಎಂದು ಹೇಳುತ್ತಾರೆ ಭೂ ಮಾಫಿಯಾದವರು ಕೃಷಿ ಜಮೀನು ಖರೀದಿಸಿ ಸಾವಿರಾರು ಎಕರೆ ಕೃಷಿ ಮಾಡದೆ ಖಾಲಿ ಬಿಟ್ಟಿದ್ದರು ಯಾಕೆ ಬೀಳು ಜಮೀನು ಎಂದು ಪ್ರಕಟಿಸಿ ಸರ್ಕಾರದ ವಶಕ್ಕೆ ಪಡೆಯುತ್ತಿಲ್ಲ, ಇದು ದೇಶದ ನಷ್ಟ ಅಲ್ಲವೇ, ಹಳ್ಳಿಗಳ ರೈತರ ಕಡಿಮೆ ಬೆಲೆಗೆ ಜಮೀನು ಕಿತ್ತುಕೊಂಡು ಹಳ್ಳಿಗಳ ಸುತ್ತ ಮೋಜಿನ ತಾಣಗಳು ನಿರ್ಮಾಣವಾಗುತ್ತಿವೆ ಇದನ್ನು ಅರಿಯದೆ ರೈತರು ಜಾತಿ ,ಪಕ್ಷ ,ರಾಜಕಾರಣಕ್ಕೆ ಜ್ಯೋತು ಬಿದ್ದಿದ್ದಾರೆ, ಇನ್ನಾದರೂ ಎಚ್ಚೆತ್ತುಕೊಂಡು ರೈತ ವರ್ಗ ಉಳಿಸಿಕೊಳ್ಳಲು ಸಂಘಟಿತರಾಗುವುದು ಸೂಕ್ತ ಎಂದರು.
ಬಸವಣ್ಣ ಅಂಬೇಡ್ಕರ್ ಬುದ್ಧ ವಾಲ್ಮೀಕಿ ಪೂಜೆ ಮಾಡುವುದಕ್ಕೆ ಸಾಲದು ಅವರ ಬಗ್ಗೆ ತತ್ವಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು ಆಗ ಮಾತ್ರ ದೇಶದಲಿ ಸರಿಸಮಾನವಾದ ಸಮಾಜ ನಿರ್ಮಾಣವಾಗುತ್ತದೆ ಪೂಜೆಗೆ ಸೀಮಿತವಾಗಬಾರದು ಪಾಲನೆ ಮಾಡಬೇಕು ತಿಳಿಸಿದರು.
ವಾಮಮಾರ್ಗಗಳಿಂದ ಹಣ ಸಂಪಾದಿಸಿ ಅಧಿಕಾರ ಹಿಡಿದ ಜನರಿಂದ ಪೊಲೀಸ್ ಬಲ ತೂಗುತ್ತಿದೆ ಇಂತಹ ಜನಪ್ರತಿನಿಧಿಗಳಿಗೆ ಪೊಲೀಸ್ ರಕ್ಷಣೆ ನೀಡುವ ಪರಿಸ್ಥಿತಿ ನಿರ್ಮಾಣವಾಗುತಿದೆ ಇದೇ ರೀತಿ ಮುಂದುವರಿದರೆ ಪ್ರಜಾ ರಕ್ಷಣೆ ಇಲ್ಲವಾಗುತ್ತದೆ ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಂಡು ಪೊಲೀಸ್ ಇಲಾಖೆಗೆ ಸ್ವಯತ್ತತೆ ಆಡಳಿತ ವ್ಯವಸ್ಥೆ ಜಾರಿಗೆ ತರಲಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಇಂದು ಮೈಸೂರು ತಾಲೂಕಿನ ವಾಜಮಂಗಲ ಗ್ರಾಮದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು
ನೂರಾರು ರೈತರು ಸಂಘಟನೆಗೆ ಸೇರ್ಪಡೆಯಾದರು ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ರಾಜ್ಯ ಸಂಘಟನೆ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಮಂಡ್ಯ ಜಿಲ್ಲೆ ಸಂಚಾಲಕ ಕೆ ಆರ್ ಎಸ್ ರಾಮೇಗೌಡ, ಬಿ ಪಿ ಪರಶಿವಮೂರ್ತಿ, ಮೈಸೂರು ತಾಲೂಕು ಅಧ್ಯಕ್ಷ ವೆಂಕಟೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ನಗರಾಧ್ಯಕ್ಷ ದೇವೇಂದ್ರ ಕುಮಾರ್ ಆರಾಧ್ಯ, ಪುಟ್ಟೇಗೌಡನ ಹುಂಡಿ ರಾಜು, ವಾಜಮಂಗಲ ಮಹಾದೇವು, ಮಾಲಿಂಗ ನಾಯಕ, ಶಿವಪ್ಪ, ದೊಡ್ಡ ಮಾದಪ್ಪ, ರಂಗಪ್ಪ, ಭಾಗ್ಯಮ್ಮ, ಸಾಕಮ್ಮ,ವರಕೊಡು ಜಯರಾಮ್, ನಾಗೇಶ್, ಬೋರೇಗೌಡ, ಮುಖಂಡರಾದ ಕುರುಬೂರು ಸಿದ್ದೇಶ್, ಹೆಗ್ಗೂರು ರಂಗರಾಜು, ಗೌರಿಶಂಕರ್, ರಾಜೇಂದ್ರ, ಲಿಂಗರಾಜು, ಪಾಳ್ಯ ಸ್ವಾಮಿ ಭಾಗವಹಿಸಿದ್ದರು