ಮನೆ ರಾಜ್ಯ ಹಾಸನದ ಹೊರ ವಲಯದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರ ನಿರ್ಲಕ್ಷ್ಯ: ಕ್ರಮಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹ

ಹಾಸನದ ಹೊರ ವಲಯದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರ ನಿರ್ಲಕ್ಷ್ಯ: ಕ್ರಮಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹ

0

ಹಾಸನ: ಹಾಸನದ ಹೊರ ವಲಯದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶವಿದ್ದರೂ ಹೊರ ರಾಜ್ಯದ ನೌಕರರನ್ನೇ ಕಾರ್ಖಾನೆಗಳು ಬಳಸಿಕೊಳ್ಳುತ್ತಿದ್ದು, ಇಂತವರ ವಿರುದ್ದ ಕ್ರಮಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.

ಹಾಸನದ ಕೈಗಾರಿಕಾ ವಲಯದಲ್ಲಿರುವ ಹಿಮತ್ ಸಿಂಗ್ ಕಾ ಕಾರ್ಖಾನೆ ಸೇರಿ ವಿವಿಧ ಗಾರ್ಮೆಂಟ್ಸ್ ಉದ್ಯಮದ ಕೈಗಾರಿಕೆಗಳ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಸುಮಾರು 300 ಎಕರೆಗೂ ಹೆಚ್ಚು ಭೂಮಿ ಪಡೆದು ಹೊರ ರಾಜ್ಯದ ಉದ್ಯಮಿಗಳು ನಮ್ಮಲ್ಲಿ ಕಾರ್ಖಾನೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಸುಮಾರು 430ಕೋಟಿ‌ ಹಣ ರಿಯಾಯಿತಿ ಪಡೆದಿರೋ ಹಿಮತ್ ಸಿಂಕಾ ಕಾರ್ಖಾನೆ ರಾಜ್ಯದ ಅನುಕೂಲ ಪಡೆದು ಸ್ಥಳೀಯರಿಗೆ ಅವಕಾಶವನ್ನೇ ನೀಡುತ್ತಿಲ್ಲ.

ಸರೋಜಿನಿ ಮಹಿಷಿ ವರದಿಯನ್ನೂ ಗಾಳಿಗೆ ತೂರಿದ್ದಾರೆ ಎಂದು ಜೆಡಿಎಸ್ ನಾಯಕರು ಆರೋಪ ಮಾಡಿದ್ದಾರೆ. ಸಾವಿರಾರು ಹೊರ ರಾಜ್ಯದ ಯುವಕರಿಗೆ ಮಾತ್ರ ಉದ್ಯೋಗಕ್ಕೆ ಆಧ್ಯತೆ ನೀಡಲಾಗಿದೆ. ಕೈಗಾರಿಕಾ ವಲಯಕ್ಕೆ ಭೂಮಿ ಕಳೆದುಕೊಂಡು ಸ್ಥಳೀಯ ರೈತರು ಗೋಳಾಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಕೆಲಸವಿಲ್ಲದೆ ನಿರುದ್ಯೋಗ ಅನುಭವಿಸುತ್ತಿದ್ದಾರೆ. ಉದ್ಯೋಗ ನೀಡದ ಕೈಗಾರಿಕೆಗಳ ವಿರುದ್ದ ಕ್ರಮಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹಿಸಿದ್ದಾರೆ.