ಮನೆ ರಾಜ್ಯ ಅರಸು ಅವರು ತಮ್ಮ ಆಡಳಿತ ಕಾರ್ಯವೈಖರಿಯಿಂದಲೇ ಅಮರ: ತನ್ವೀರ್ ಸೇಠ್

ಅರಸು ಅವರು ತಮ್ಮ ಆಡಳಿತ ಕಾರ್ಯವೈಖರಿಯಿಂದಲೇ ಅಮರ: ತನ್ವೀರ್ ಸೇಠ್

0

ಮೈಸೂರು: ದೇವರಾಜ ಅರಸು ಅವರು ಮೈಸೂರು ಭಾಗದವರು ಎಂಬುದಕಷ್ಟೆ ಅಲ್ಲದೆ ಅವರ ಆಡಳಿತ ವೈಖರಿ, ಈ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವಲ್ಲಿ, ಉಳುವವನೇ ಭೂಮಿಯ ಓಡೆಯನನ್ನಾಗಿ ಮಾಡುವುದರ ಮೂಲಕ ಪ್ರತಿಯೊಬ್ಬರ ಮನಸಿನಲ್ಲೂ ಚಿರಾಯು ಆಗಿದ್ದಾರೆ ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಹೇಳಿದರು.

ಇಂದು ಸಿದ್ಧಾರ್ಥ ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ 50 ರ ಸವಿನೆನಪಿಗೆ ಶ್ರೀ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನೆ ಶಂಕು ಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಎಂದು ನಾಮಕರಣಗೊಂಡ 50 ನೇ ವರ್ಷದ ಸಂಭ್ರಮಾಚರಣೆಗೆ ಕಾಲಿಟ್ಟಿದ್ದೇವೆ. ಸಮ ಸಮಾಜದ ನಿರ್ಮಾಣಕ್ಕಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಇಂದಿನ ಸರ್ಕಾರಗಳು ಅನುಸರಿಸಿಕೊಂಡು ಹೋದಾಗ ಮಾತ್ರವೇ ಅಂತಹ ವ್ಯಕ್ತಿಗೆ ನಮನಗಳನ್ನು ಸಲ್ಲಿಸಲು ಸಾಧ್ಯ. ಅನೇಕ ಜನಪರ ಹಾಗೂ ಅಭಿವೃದ್ಧಿ ಪಥದಲ್ಲಿ ಸಮಾನವಾದ ಸಮಾಜವನ್ನು ನಿರ್ಮಾಣ ಮಾಡುವುದು ಕಷ್ಟ ಸಾಧ್ಯದ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ಯಾವುದೇ ಜಾತಿ ಧರ್ಮ ಬೇದ ವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸುವ ಹಾದಿಯಲ್ಲಿ ಸಾಗುತ್ತಿದೆ ಎಂದರು.

ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ. ರಾಜೇಂದ್ರ ಅವರು ಮಾತನಾಡಿ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಎರಡು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದಂತಹ ಮೈಸೂರು ಭಾಗದ ಜನಪ್ರಿಯ ಮುಖ್ಯಮಂತ್ರಿ ಡಿ ದೇವರಾಜು ಅರಸುರವರು. ಈ ಶುಭ ಸಮಾರಂಭದಲ್ಲಿ ಹಳೆಯ ಜಿಲ್ಲಾಧಿಕಾರಿ ಕಚೇರಿಗಿಂತ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಹಳ ಲವಲವಿಕೆ ಇಂದ ಕೂಡಿದ್ದು, ಸಾರ್ವಜನಿಕರಿಗೆ ಬಹಳ ಸಹಾಯವಾಗುತ್ತಿದೆ. ಪ್ರತಿಯೊಬ್ಬರ ಮನೆ ಮನ ಮುಟ್ಟುವ ಮೂಲಕ ಶ್ರೀ ಡಿ. ದೇವರಾಜ ಅರಸ್ ರವರ ಪ್ರತಿಮೆ ಅನಾವರಣಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಹಾಗೂ ಜಿಲ್ಲಾಡಳಿತದ ಬೆಂಬಲಕ್ಕಾಗಿ ನಿಂತ ಎಲ್ಲರಿಗೂ ಸಹ ಧನ್ಯವಾದ ತಿಳಿಸುತ್ತಾ, ಸರ್ವರನ್ನು ಜೊತೆಗೆ ಕರೆದುಕೊಂಡು ಹೋಗುವಂತಹ ಭಾವನೆ ಪ್ರತಿ ಧರ್ಮದವರನ್ನು ಸಮಾನರಾಗಿ ಕಾಣುವ ಸೌಹಾರ್ದತೆ ಮತ್ತು ಸಹೋದರತೆ ಎಂಬ ಅರಸು ರವರ ಕಲ್ಪನೆಯನ್ನು ದಲಿತರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣದಿಂದ ಸಮಸಮಾಜದ ನಿರ್ಮಾಣ ಮಾಡುವಂತಹ ಅವರ ಇಚ್ಛೆಯನ್ನು ನಾವು ನನಸು ಮಾಡಬೇಕು ಎಂದರು.