ಮನೆ ಸ್ಥಳೀಯ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂಬ ಘೋಷ ವಾಕ್ಯಕ್ಕೆ SFI ಬೆಂಬಲ

ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು ಎಂಬ ಘೋಷ ವಾಕ್ಯಕ್ಕೆ SFI ಬೆಂಬಲ

0

ಮೈಸೂರು:  ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ, ಎಂದು ಇದ್ದ ವಾಕ್ಯವನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಜ್ಞಾನ ‘ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ದೃಷ್ಟಿಕೋನದಿಂದ ಬದಲಾವಣೆ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯ ಸಮಿತಿ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ  ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್, ಈ ಘೋಷ ವಾಕ್ಯವನ್ನು ರಾಜ್ಯ ಸರಕಾರ ಅಧಿಕೃತವಾಗಿ ಸುತ್ತೋಲೆ ಹೋರಡಿಸಿ ರಾಜ್ಯದ ಎಲ್ಲಾ ಶಾಲೆಯ ಗೋಡೆಗಳ ಮೇಲೆ ಬರೆಯಲು ಸೂಚನೆ ಕೊಡಬೇಕೆಂದು ಸಂಘಟನೆಯು ರಾಜ್ಯ ಸರಕಾರವನ್ನು ಒತ್ತಾಯ ಮಾಡುತ್ತದೆ.

ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಮಾದರಿಯಲ್ಲಿ ರಾಜ್ಯದಲ್ಲಿನ ವಿದ್ಯಾರ್ಥಿಗಳಿಗೆ ಮಾದರಿ ವೈಚಾರಿಕತೆಯನ್ನು ಬಿತ್ತರಿಸಬೇಕು. ಆದರೆ ಸಮಾಜದಲ್ಲಿ ಇಂದು ಮೌಡ್ಯತೆ ಹೆಚ್ಚಾಗುತ್ತಿದ್ದು ಆ ಮೌಢ್ಯತೆಯನ್ನು ತೊಲಗಿಸಲು ವೈಜ್ಞಾನಿಕ ಮನೋಭಾವ ಬೆಳೆಸಲು ಈ ರೀತಿಯ ಅನೇಕ ಘೋಷ ವಾಕ್ಯಗಳು ಅಗತ್ಯ ಎಂದು ಸಂಘಟನೆಯು ಪ್ರತಿಪಾದಿಸುತ್ತದೆ. ಬಿಜೆಪಿ ಪಕ್ಷದವರಿಗೆ ಸರಕಾರ ವಿದ್ಯಾರ್ಥಿಗಳಿಗೆ ವೈಜ್ಞಾನಿಕ, ವೈಚಾರಿಕ ಮನೋಭಾವ ಬೆಳೆಸುವುದನ್ನು ಕಂಡರೆ ಭಯವಾಗುತ್ತದೆ. ಅದಕ್ಕೆ ಈ ಘೋಷ ವಾಕ್ಯ ಬದಲಾವಣೆಯನ್ನು ಸದನದಲ್ಲಿ ಚರ್ಚೆಸಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ಮಾಡಲು ಸ್ಕಾಲರ್ ಶಿಪ್, ಹಾಸ್ಟೇಲ್, ಬಸ್, ಮೂಲಭೂತ ಸೌಕರ್ಯಗಳು, ಸಿಬ್ಬಂದಿ ಕೊರತೆ, ಪಠ್ಯ ಪುಸ್ತಕ, ಸೈಕಲ್, ಶೂ- ಸಾಕ್ಸ್ , ಬಟ್ಟೆ, ಶುಚಿ ಕೀಟ್ ಹೀಗೆ ಸಮಸ್ಯೆಗಳ ಸಾಕಷ್ಟು ವಿಷಯಗಳಿದ್ದರೂ ಬಿಜೆಪಿ ಪಕ್ಷದ ಶಾಸಕರ ಕಣ್ಣಿಗೆ ಅವುಗಳ ಕಂಡರೂ ಅದರ ಬಗ್ಗೆ ಮೌನವಹಿಸಿದ್ದಾರೆ.

ಲೋಕಸಭಾ ಚುನಾವಣೆ ದೃಷ್ಟಿಕೋನದಿಂದ ಭಾವನಾತ್ಮಕ ವಿಷಯಗಳಿಗೆ ಮಾತ್ರ ಆದ್ಯತೆ ಕೋಡಲಾಗುತ್ತಿದ್ದು ಇದು ಕೂಡಾ ಹಾಗೇ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸುಮಾರು 6 ತಿಂಗಳನಿಂದ ವಿದ್ಯಾರ್ಥಿಗಳಿಗೆ ಶುಚಿ ಕೀಟ್ (ಸೋಪು,ಪೇಸ್ಟ್,ಕೊಬ್ಬರಿ ಎಣ್ಣೆ, ಪೌಡರ್) ವಿತರಣೆ ಮಾಡಿರುವುದಿಲ್ಲ, ಗುಣಮಟ್ಟದ ಆಹಾರ ಸಿಗುತ್ತಿಲ್ಲಾ, ಯಡಿಯೂರಪ್ಪನವರಿಗೆ ಜನಪ್ರಿಯತೆ ತಂದುಕೊಟ್ಟ 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯನ್ನು ಈ ಹಿಂದೆ ಇದ್ದ ಬಿಜೆಪಿ ಸರ್ಕಾರವೇ ನಿಲ್ಲಿಸಿತು. ಆದರೂ ಅದರ ಬಗ್ಗೆ ಇವರು ಯಾರು ತುಟಿ ಪಿಟಿಕ್ ಅನ್ನುವುದಿಲ್ಲ. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕತೆಗಾಗಿ ಮೊಟ್ಟೆ ಕೊಡುವುದಕ್ಕೆ ಸಹ ಕೆಲವರು ವಿರೋಧ ಮಾಡಿದ್ದರು ಹೀಗೆ ಇವರಗೆ ವಿದ್ಯಾರ್ಥಿಗಳು ವೈಜ್ಞಾನಿಕವಾಗಿ, ವೈಚಾರಿಕ ನೆಲೆಯಲ್ಲಿ ಬೆಳೆಯುವುದು, ಪ್ರಶ್ನೆ ಮಾಡವುದನ್ನು ಕಲಿತರೆ ನಾಳೆ ಬಿಜೆಪಿ  ಆರ್ ಎಸ್ ಎಸ್  ಬಿತ್ತವು ಮೌಡ್ಯತೆಯನ್ನು ಧರ್ಮಾಂಧತಿಯ ಕೋಮುವಾದವನ್ನು ವಿದ್ಯಾರ್ಥಿಗಳು, ಯುವಕರು ಪ್ರಶ್ನಿಸಲು ತೊಡಗುತ್ತಾರೆ ಎಂಬ ಭಯ ಇವರನ್ನು ಈಗಲೇ ಕಾಡಲಾರಂಭಿಸಿದೆ. ಹಾಗಾಗಿ ಸರಕಾರ ಈ ತರಹದ ಮನಸ್ಥಿತಿಯ ಶಾಸಕರನ್ನು ಗಟ್ಟಿತನದಿಂದ ಎದುರಿಸಬೇಕು. ಇದನ್ನು ಸರಕಾರ ಹಿಂದೆಟು ಹಾಕದೆ ಅಧಿಕೃತ ಸುತ್ತೋಲೆ ಹೊರಡಿಸಿ ಜಾರಿಗೊಳಿಸಬೇಕು. ರಾಜ್ಯದ ವಿದ್ಯಾರ್ಥಿ ಸಮುದಾಯ ಸರಕಾರದ ಜೊತೆ ಇರುತ್ತದೆ ಎಂದು ಪ್ರಕಟಣೆ ಮೂಲಕ ತಿಳಿಸಿದೆ.