ಮನೆ ಸ್ಥಳೀಯ ರಪ್ತು ಉತ್ತೇಜನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳನ್ನು ನೀಡುತ್ತಿವೆ:  ಟಿ. ದಿನೇಶ್

ರಪ್ತು ಉತ್ತೇಜನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳನ್ನು ನೀಡುತ್ತಿವೆ:  ಟಿ. ದಿನೇಶ್

0

ಮೈಸೂರು: ರಪ್ತು ಉತ್ತೇಜನ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ರಪ್ತು ಉತ್ತೇಜನಕ್ಕೆ ಇರುವ ಸೌಲಭ್ಯಗಳನ್ನು ಉದ್ಯಮಿಗಳು ಬಳಸಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ ದಿನೇಶ್ ಅವರು ತಿಳಿಸಿದರು.

ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ಕೈಗಾರಿಕೆಗಳ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ದಿ ಇನ್ಸ್ಟಿಟ್ಯೂಷನ್ ಅಪ್ ಎಂಜಿನಿಯರ್ಸ್ ಎಸ್ ಪಿ ಭಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ರಪ್ತು ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರು ಜಿಲ್ಲೆಯಿಂದ  2021-22 ರಲ್ಲಿ 6100 ಕೋಟಿ, 2022-23 ರಲ್ಲಿ 6300 ಕೋಟಿ ಮೌಲ್ಯದ ವಸ್ತುಗಳನ್ನು ರಪ್ತು ಮಾಡಿದ್ದೇವೆ. ಪ್ರತಿ ವರ್ಷ ಶೇಕಡಾ 5 % ರಪ್ತನ್ನು ಹೆಚ್ಚಳ ಮಾಡಿಕೊಳ್ಳುತ್ತಿದ್ದೇವೆ. ಭಾರತ ಸರ್ಕಾರದ ಉದ್ದೇಶ ಪ್ರತಿ ಜಿಲ್ಲೆಯನ್ನು ರಪ್ತು ಹಬ್ ಆಗಿ ಮಾಡಬೇಕು ಎಂಬುದಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಪ್ತು ಉತ್ತೇಜನ ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಈ ಸೌಲಭ್ಯಗಳನ್ನು ಉದ್ಯಮಿಗಳು ಬಳಸಿಕೊಳ್ಳಬೇಕು. ನಾವು ಯಾವ ದೇಶಕ್ಕೆ ಯಾವ ವಸ್ತುವನ್ನು ಕಳುಹಿಸಬೇಕು. ಯಾವ ದೇಶದಲ್ಲಿ ಯಾವ ಉತ್ಪನ್ನಕ್ಕೆ ಬೇಡಿಕೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕು.

ಮೈಸೂರು ಕೈಗಾರಿಕೆಗಳ ಸಂಘ ದ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಜೈನ್ ಅವರು ಮಾತನಾಡಿ ರಪ್ತು ಮಾಡುವಲ್ಲಿ ಹಲವು ಸವಾಲುಗಳು ಹಾಗೂ ಸಮಸ್ಯೆಗಳು ಎದುರು ಆಗುತ್ತವೆ. ನಮ್ಮ ಉತ್ಪನ್ನವನ್ನು ಖರೀದಿಸುವ ವ್ಯಕ್ತಿ ಮನಸ್ಥಿತಿ ಉತ್ತಮವಾಗಿರಬೇಕು. ರಪ್ತು ಮಾಡುವಲ್ಲಿ ಮಧ್ಯವರ್ತಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ರಪ್ತು ಹೆಚ್ಚಾಗಲು ನಾವು ಉತ್ಪಾದನೆ ಮಾಡುವ ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿ ಇರಬೇಕು. ರಪ್ತು ಉದ್ಯಮಕ್ಕೆ ವಿಪುಲವಾದ ಅವಕಾಶಗಳಿವೆ. ಮೈಸೂರು ರಪ್ತಿನ ತವರೂರು ಆಗಿದೆ ಎಂದು ಮಾಹಿತಿ ನೀಡಿದರು.

ರಪ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕರಾದ ಮೇಘಲಾ ಅವರು ಮಾತನಾಡಿ ರಪ್ತು ನಮ್ಮ ದೇಶದ ಆರ್ಥಿಕ ಬೆಳವಣಿಗೆಯ ಯಂತ್ರ ವಾಗಿದೆ. ರಪ್ತು ಉದ್ಯೋಗವನ್ನು ಸೃಷ್ಟಿ ಮಾಡುತ್ತದೆ. ಮೈಸೂರು ಜಿಲ್ಲೆಯಿಂದ ಸುಮಾರು 80 ಜನ ಉದ್ಯಮಿಗಳು ಉತ್ಪಾದನೆಯನ್ನು ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ರಪ್ತು ಹೆಚ್ಚಾಗುವುದರಿಂದ ಉದ್ಯಮಿಗಳು ಲಾಭ ಗಳಿಸಲು ಸಾಧ್ಯ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಉಪ ನಿರ್ದೇಶಕರಾದ ಮನ್ಸೂರ್ ಅವರು ಸೇರಿದಂತೆ ಉದ್ಯಮಿಗಳು ಉಪಸ್ತಿತರಿದ್ದರು.