ಮನೆ ಸುದ್ದಿ ಜಾಲ ಮೈಸೂರು ಮೃಗಾಲಯದಲ್ಲಿ  3 ಮರಿಗೆ ಜನ್ಮ ನೀಡಿದ ಬಿಳಿ ಹುಲಿ

ಮೈಸೂರು ಮೃಗಾಲಯದಲ್ಲಿ  3 ಮರಿಗೆ ಜನ್ಮ ನೀಡಿದ ಬಿಳಿ ಹುಲಿ

0

ಮೈಸೂರು(Mysuru): ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ 8 ವರ್ಷದ ‘ತಾರಾ’ ಹೆಸರಿನ ಬಿಳಿ ಹುಲಿ ಹಾಗೂ 4 ವರ್ಷದ ‘ರಾಕಿ’ ಹೆಸರಿನ ಗಂಡು ಹುಲಿ ಮೂರು ಮರಿಗಳಿಗೆ ಜನ್ಮ ನೀಡಿವೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಮೃಗಾಲಯದಲ್ಲಿ 9 ಗಂಡು, 8 ಹೆಣ್ಣು ಹಾಗೂ ಮೂರು ಮರಿಗಳು ಇವೆ. ತಾಯಿ ತಾರಾ ಹಾಗೂ ಮರಿಗಳು ಆರೋಗ್ಯವಾಗಿದ್ದು, ಪಶುಪಾಲಕರು ಹಾಗೂ ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿ ವಿನಿಯಮ ಯೋಜನೆಯಡಿ ಚೆನ್ನೈನ ಅರಿಗ್ಣರ್‌ ಅಣ್ಣ ಮೃಗಾಲಯದಿಂದ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಒಂದು ಬಿಳಿ ಹೆಣ್ಣು ಹುಲಿ ಕಾವೇರಿ ಮತ್ತು ಹೆಣ್ಣು ಉಷ್ಟ್ರಪಕ್ಷಿಯನ್ನು ತರಿಸಿಕೊಳ್ಳಲಾಗಿದೆ. ಪಿಲಿಕುಳದಲ್ಲಿ ಈಗಾಗಲೇ 11 ಹುಲಿಗಳಿವೆ (7 ಗಂಡು, 4 ಹೆಣ್ಣು). ಹೊಸದಾಗಿ ಆಗಮಿಸಿರುವ ಕಾವೇರಿ ಹುಲಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಸ್ಥಳೀಯ ಪರಿಸರಕ್ಕೆ ಒಗ್ಗಿದ ಬಳಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.