ಮನೆ ರಾಜ್ಯ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ನಿರ್ವಹಣೆ ಸಂಬಂಧ ಹಲವು ನಿರ್ದೇಶನ

ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ನಿರ್ವಹಣೆ ಸಂಬಂಧ ಹಲವು ನಿರ್ದೇಶನ

0

ಬೆಂಗಳೂರು: ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ಅದರ ಆಗು-ಹೋಗುಗಳ ಬಗ್ಗೆ ನಿರ್ದೇಶನ ನೀಡಿ ನಿಗಾವಹಿಸುವಂತೆ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮೇಲುಸ್ತುವಾಗಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.

ಮೇಲುಸ್ತುವಾರಿ ಸಮಿತಿಯ ಮಾಹಿತಿ
ಎಲ್ಲಾ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿದ್ದು, ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾ ವ್ಯಾಪ್ತಿಯಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.

ಅಂತೆಯೇ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆ ಮತ್ತು ಧ್ವನಿ ಮುದ್ರಣ ಕುರಿತು ಸರ್ವೋಚ್ಛ ನ್ಯಾಯಾಲಯ ಕೆಲವು ನಿರ್ದೇಶನಗಳನ್ನು ನೀಡಿದೆ.

ನಿರ್ದೇಶನಗಳು ಇಂತಿದೆ
ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಹಾಗೂ ಇತರ ಪರಿಕರಗಳ ಕಾರ್ಯನಿರ್ವಹಣೆ, ಡೇಟಾ ಬ್ಯಾಕಪ್, ದೋಷ ಸರಿಪಡಿಸುವಿಕೆಗೆ ಆಯಾ ಠಾಣಾಧಿಕಾರಿಗಳು ಜವಬ್ದಾರರಾಗಿರುತ್ತಾರೆ.

ಸಿಸಿಟಿವಿ ಸಲಕರಣೆಗಳು ಅಥವಾ ಅಸಮರ್ಪಕ ಕಾರ್ಯಗಳಲ್ಲಿನ ಯಾವುದೇ ಲೋಪದೋಷ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿಗೆ ವರದಿ ಸಲ್ಲಿಸುವುದು ಠಾಣಾಧಿಕಾರಿಗಳ ಆದ್ಯ ಕರ್ತವ್ಯ.

ವರದಿ ಮಾಡಿದ ತಕ್ಷಣವೇ ಉಪಕರಣಗಳ ದುರಸ್ತಿ ಮತ್ತು ಖರೀದಿಗೆ ರಾಜ್ಯಮಟ್ಟದ ಮೇಲುಸ್ತುವಾರಿ ಸಮಿತಿಗೆ ವಿನಂತಿಸುವುದು.

ಕ್ಯಾಮೆರಾಗಳ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾಯಿಸದೇ 24*7 ಕಾರ್ಯಾಚರಣೆಯಲ್ಲಿರುವಂತೆ ಆಯಾ ಠಾಣಾಧಿಕಾರಿಗಳು ನಿಗಾವಹಿಸಿಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.