ಮನೆ ರಾಷ್ಟ್ರೀಯ ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಪ್ರಮುಖ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ

ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಪ್ರಮುಖ ಆದ್ಯತೆ: ಪ್ರಧಾನಿ ನರೇಂದ್ರ ಮೋದಿ

0

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ಪ್ರವಾಸದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಶಿಯಲ್ಲಿ ಮಹಿಳೆಯರೊಂದಿಗೆ ಸಂವಾದದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಶುಕ್ರವಾರ ವಾರಣಾಸಿಗೆ ಭೇಟಿ ನೀಡಿ ಸುಮಾರು 13,000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಾಯಿತು.

ಅದೇ ಸಮಯದಲ್ಲಿ, ಯುಪಿಎಸ್‌ ಐಡಿಎ ಆಗ್ರೋ ಪಾರ್ಕ್ ಕಾರ್ಖಿಯಾಂವ್‌ ನಲ್ಲಿ ಬನಾಸ್ ಕಾಶಿ ಸಂಕುಲ್ ಹಾಲು ಸಂಸ್ಕರಣಾ ಘಟಕವನ್ನು ಪ್ರಧಾನಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗಿರ್ ಹಸುಗಳನ್ನು ವಿತರಿಸಿ, ಮಹಿಳಾ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಶೇರ್ ಮಾಡಿರುವ ವಿಡಿಯೋದಲ್ಲಿ ಅವರು ಹಲವು ಮಹಿಳೆಯರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅವರು ಹೀಗೆ ಬರೆದುಕೊಂಡಿದ್ದಾರೆ:

 ‘ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ವಿಶ್ವನಾಥನ ನಗರದ ತಾಯಂದಿರು ಮತ್ತು ಸಹೋದರಿಯರಿಂದ ಗಿರ್ ಹಸು ಪಡೆದ ನಂತರ ಅವರ ಜೀವನವು ಸಾಕಷ್ಟು ಬದಲಾಗಿದೆ ಎಂದು ಕೇಳಿದಾಗ ತುಂಬಾ ತೃಪ್ತಿಯಾಯಿತು ಎಂದಿದ್ದಾರೆ. ಪ್ರಧಾನಿ ಮೋದಿಯವರೊಂದಿಗಿನ ಸಂವಾದದ ವೇಳೆ ಅನೇಕ ಮಹಿಳೆಯರು ಗಿರ್ ಹಸುಗಳು, ಅವುಗಳ ಸಂತಾನೋತ್ಪತ್ತಿ ಮತ್ತು ಪ್ರಯೋಜನಗಳ ಬಗ್ಗೆ ವಿವರಿಸಿದರು.

ಪ್ರಧಾನಿಯವರು ಬನಾಸ್ ಡೈರಿಗೆ ಭೇಟಿ ನೀಡಿ ಅಲ್ಲಿ ದನ ಸಾಕುವ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಎರಡು ವರ್ಷಗಳ ಹಿಂದೆ ಬನಾಸ್ ಡೈರಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿ ಹೀಗೆ ಹೇಳಿದ್ದಾರೆ … ನಾನು ಬನಾಸ್ ಡೈರಿ ಪ್ಲಾಂಟ್‌ಗೆ ಹೋಗಿದ್ದೆ. ಅಲ್ಲಿ ಜಾನುವಾರು ಸಾಕಣೆಯಲ್ಲಿ ತೊಡಗಿರುವ ಅನೇಕ ಸಹೋದರಿಯರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. 2-3 ವರ್ಷಗಳ ಹಿಂದೆ ಈ ರೈತ ಕುಟುಂಬಗಳ ಸಹೋದರಿಯರಿಗೆ ದೇಶಿ ತಳಿಯ ಗಿರ್ ಹಸುಗಳನ್ನು ನೀಡಿದ್ದೆವು. ಪೂರ್ವಾಂಚಲದಲ್ಲಿ ಸುಧಾರಿತ ತಳಿಯ ದೇಶಿ ಹಸುಗಳ ಬಗ್ಗೆ ಮಾಹಿತಿ ನೀಡಲಾಯಿತು. ಹಸುಗಳನ್ನು ಸಾಕುವುದು ಮತ್ತು ರೈತರು ಮತ್ತು ಜಾನುವಾರು ಸಾಕಣೆದಾರರು ಇದರ ಲಾಭ ಪಡೆಯುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.