ಮನೆ ಸ್ಥಳೀಯ ದಲಿತ ಯುವತಿಯ ಸಾವಿಗೆ ಕಾರಣವಾದ ಕಾನೂನು ಬಾಹಿರ ತಾಮರ ಹೆಲ್ತ್ ಕೇರ್ ಸೆಂಟರ್ ಮತ್ತು ಜಿಲ್ಲಾ...

ದಲಿತ ಯುವತಿಯ ಸಾವಿಗೆ ಕಾರಣವಾದ ಕಾನೂನು ಬಾಹಿರ ತಾಮರ ಹೆಲ್ತ್ ಕೇರ್ ಸೆಂಟರ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ಫೆ.27 ರಂದು ಪ್ರತಿಭಟನೆ

0

ಮೈಸೂರು: ಮೈಸೂರು ನಗರದ ಹೆಬ್ಬಾಳ್ ಇಂಡಸ್ಟೀಯಲ್ ಏರಿಯಾದಲ್ಲಿರುವ ತಾಮರ ಹೆಲ್ತ್ ಕೇರ್ ಸೆಂಟರ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಮತಾ ಎಸ್ ಇದೇ ತಿಂಗಳ 15 ರಂದು ಅನುಮಾನಸ್ಪದವಾಗಿ ಮೃತಪಟ್ಟಿದ್ದಳು.

ಮಮತಾಳ ಸಾವಿಗೆ ಕಾರಣರಾದ ತಾಮರ್ ಹೆಲ್ತ್ ಕೇರ್ ಸೆಂಟರ್ ಮತ್ತು ಅವರಿಗೆ ಬೆಂಗವಲಾಗಿರುವ ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಳ ರಕ್ಷಣಾ ಸಮಿತಿ (ರಿ) ಸಹಯೋಗದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಫೆ.27 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅಂತೆಯೇ ಫೆ.26 ರಂದು ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ.

ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ರಾಜ್ಯಾಧ್ಯಕ್ಷರು ಶ್ರೀಮತಿ ಸುಶೀಲ, ರಾಜ್ಯ ಕಾರ್ಯದರ್ಶಿಗಳು ಶ್ರೀ ಪುಟ್ಟರಾಜು, ಜಿಲ್ಲಾಧ್ಯಕ್ಷರಾದ ವಿನೋದ್ ಸೇರಿದಂತೆ ಇತರೆ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.