ಮನೆ ರಾಜ್ಯ ಕುಪೇಂದ್ರ ರೆಡ್ಡಿ ಕಡೆಯವರು ಮತ ಕೇಳಿದ್ದಾರೆ,ಆಮಿಷವೊಡ್ಡಿಲ್ಲ: ದರ್ಶನ್ ಪುಟ್ಟಣ್ಣಯ್ಯ

ಕುಪೇಂದ್ರ ರೆಡ್ಡಿ ಕಡೆಯವರು ಮತ ಕೇಳಿದ್ದಾರೆ,ಆಮಿಷವೊಡ್ಡಿಲ್ಲ: ದರ್ಶನ್ ಪುಟ್ಟಣ್ಣಯ್ಯ

0

ಮಂಡ್ಯ:ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ನನಗೆ ಯಾವುದೇ ಬೆದರಿಕೆ ಹಾಗೂ ಆಮಿಷವೊಡ್ಡಿಲ್ಲ ಕೇವಲ ಮತ ಕೇಳಿದ್ದಾರೆ ಅಷ್ಟೇ ಎಂದು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸುವಂತೆ ಕಾಂಗ್ರೆಸ್‌ ಶಾಸಕರಿಗೆ ಹಣದ ಆಮಿಷವೊಡ್ಡಿ ದ್ದಾರೆಂಬ ಆರೋಪ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿ ಕುಪೇಂದ್ರರೆಡ್ಡಿ ವಿರುದ್ಧ ಕೇಳಿ ಬಂದಿತ್ತು.

ಈ ಕುರಿತು ಸ್ಪಷ್ಟನೆ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರಜಾಪ್ರಭುತ್ವದಲ್ಲಿ ಮತಯಾಚಿಸುವುದು ಸಾಮಾನ್ಯ.ಅದರಂತೆ ಕುಪೇಂದ್ರ ರೆಡ್ಡಿ ಕಡೆಯವರು ಕರೆ ಮಾಡಿ ಮತ ಕೇಳಿದ್ದಾರೆ.ಅದು ಬಿಟ್ಟು ಬೆದರಿಕೆ ಹಾಗೂ ಆಮಿಷ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.ಶಾಸಕ ಪಿ.ರವಿಕುಮಾರ್ ಅವರು ನನಗೆ ಕರೆ ಮಾಡಿದ್ದರು.ಆಗ ತಿಳಿಸಿದ್ದೆನು.ಅದು ಬಿಟ್ಟು ಬೇರೆ ಏನೂ ಆಗಿಲ್ಲ ಎಂದರು.
ಬೇರೆ ಶಾಸಕರಿಗೆ ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ.ಇಲ್ಲಿ ಹೈಡ್ರಾಮ ನಡೆಯುತ್ತಿದೆ.ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ ಅಭ್ಯರ್ಥಿಗೆ ನನ್ನ ಬೆಂಬಲ: ನನ್ನ ತಂದೆ ದರ್ಶನ್‌ ಪುಟ್ಟಣ್ಣಯ್ಯ ಹಾಗೂ ನನ್ನ ಗೆಲುವಿಗೆ ಕಾಂಗ್ರೆಸ್‌ ಪಕ್ಷ ಸಹಕಾರ ನೀಡಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವುದು ನನ್ನ ಕರ್ತವ್ಯ ಎಂದು ಹೇಳಿದರು.
ಕಳೆದ ಬಾರಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಷ್‌ಗೆ ಬೆಂಬಲ ನೀಡಿದ್ದೀರಿ, ಮುಂಬರುವ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಬೆಂಬಲ ಯಾರಿಗೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಟ್ರಯಲ್‌ ಬ್ಲಾಸ್ಟ್‌ಗೆ ನನ್ನ ವಿರೋಧವಿದೆ
ಕೆ.ಆರ್.‌ಎಸ್‌ ಅಣೆಕಟ್ಟೆ ವ್ಯಾಪ್ತಿಯಲ್ಲಿ ನಡೆಸಲುದ್ದೇಶಿಸಿರುವ ಟ್ರಯಲ್‌ ಬ್ಲಾಸ್ಟ್‌ಗೆ ನನ್ನ ಸಂಪೂರ್ಣ ವಿರೋಧವಿದೆ ಎಂದು ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದರು.
ಕೆ.ಆರ್.‌ಎಸ್‌ ಜಲಾಶಯ ಉಳಿಯಬೇಕು.ಮಂಡ್ಯ, ಮೈಸೂರು, ರಾಮನಗರ ಹಾಗೂ ಬೆಂಗಳೂರು ಸೇರಿದಂತೆ ಕೋಟ್ಯಾಂತರ ಜನರಿಗೆ ಕುಡಿಯುವ ನೀರೊದಗಿಸುತ್ತಿದೆ. ಟ್ರಯಲ್‌ ಬ್ಲಾಸ್ಟ್‌ನಿಂದ ಕೆ.ಆರ್‌.ಎಸ್‌.ಗೆ ಅಪಾಯ ಎದುರಾಗುವುದಾದರೆ ಟ್ರಯಲ್‌ ಬ್ಲಾಸ್ಟ್‌ ಬೇಡವೇ ಬೇಡ ಎಂದು ತಿಳಿಸಿದರು.
ಕೆ.ಆರ್. ಎಸ್.‌ ಆಣೆಕಟ್ಟೆ ಸುತ್ತಮುತ್ತಲಿನ 8 ಪಂಚಾಯಿತಿಯ ಜನರು ಅಣೆಕಟ್ಟೆ ಕಟ್ಟಲು ಬಂದವರು ನಮ್ಮ ತಂದೆಯ ಕಾಲದಿಂದಲೂ ಕೈಕುಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.ಅವರಿಗೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಡಳಿತಕ್ಕೆ ಕೇಳಿದ್ದೇನೆ. ಇಲ್ಲದಿದ್ದರೆ ಅವರಿಗೆ ಪರ್ಯಾಯವಾಗಿ ಏನಾದರೂ ಮಾಡಬೇಕಿದೆ ಎಂದರು.
ಅಕ್ರಮ ಗಣಿಗಾರಿಕೆ ವಿರುದ್ಧ ರೈತ ಸಂಘ ಈ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ. ಕೆ.ಆರ್.ಎಸ್‌. ವ್ಯಾಪ್ತಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಬ್ಲಾಸ್ಟ್‌ ಮಾಡಿ ಗಣಿಗಾರಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಟ್ರಯಲ್‌ ಬ್ಲಾಸ್ಟ್‌ ನಂತರ ಗಣಿಗಾರಿಕೆ ನಡೆಸಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ ಎಂದರು.
ಗಣಿಗಾರಿಕೆ ಮುಖ್ಯವಲ್ಲ.ಬದುಕಲಿಕೆ ಕೆ.ಆರ್.ಎಸ್‌ ಅಣಿಕಟ್ಟೆ ಮುಖ್ಯ. ಇದು ನನ್ನೊಬ್ಬನಿಂದ ಸಾಧ್ಯವಿಲ್ಲ. ಗಣಿಗಾರಿಕೆ ನಡೆಸುವವರು ಅರ್ಥ ಮಾಡಿಕೊಳ್ಳಬೇಕು. ಟ್ರಯಲ್‌ ಬ್ಲಾಸ್ಟ್‌ನಿಂದ ನೆಗೆಟಿವ್‌ ವರದಿ ಬಂದರೆ ಗಣಿಗಳಿಗೆ ಕುತ್ತಿಗೆಗೆ ಬರಲಿದೆ ಎಂದರು.
ಯಾರೇ ಬಂದರೂ ನಾನು ಎದುರುವುದಿಲ್ಲ. ಕೆ.ಆರ್.ಎಸ್.‌ ಉಳಿವಿಗೆ ಸದಾ ನನ್ನ ಬೆಂಬಲವಿರುತ್ತದೆ ಎಂದರು.