ಮನೆ ರಾಜ್ಯ ಹುಣಸೂರು ತಾಲ್ಲೂಕಿನ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿಗೆ ಪಿ.ಜಿ.ವೇಣುಗೋಪಾಲ್, ಬಿ.ಡಿ ಆದರ್ಶ್ ಭೇಟಿ

ಹುಣಸೂರು ತಾಲ್ಲೂಕಿನ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿಗೆ ಪಿ.ಜಿ.ವೇಣುಗೋಪಾಲ್, ಬಿ.ಡಿ ಆದರ್ಶ್ ಭೇಟಿ

0

ಹುಣಸೂರು: ಮ-ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳ ವಾಸ್ತವಾಂಶ ಅರಿಯಲು ಆಯುಕ್ತಾಲಯದಿಂದ ನಿಗದಿತ ತಂಡವೊಂದು ಹುಣಸೂರು ತಾಲ್ಲೂಕಿನ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರು.

ತಾಂತ್ರಿಕ ಜಂಟಿ‌ ನಿರ್ದೇಶಕರಾದ ಪಿ.ಜಿ.ವೇಣುಗೋಪಾಲ್ ಹಾಗೂ ರಾಜ್ಯ ಜಿಐಎಸ್ ಸಂಯೋಜಕರಾದ ಬಿ.ಡಿ ಆದರ್ಶ್ ಅವರು ತಾಲ್ಲೂಕು ಪಂಚಾಯಿತಿ ಹಾಗೂ ಆಸ್ಪತ್ರೆ ಕಾವಲ್‌ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರು.

ಈ ವೇಳೆ 2022-23ನೇ ಸಾಲಿನಲ್ಲಿ ಅನುಷ್ಠಾನಗೊಂಡಿರುವ ಚರಂಡಿ‌ ಕಾಮಗಾರಿ, ಸಾಮಾಜಿಕ ಅರಣ್ಯ ಇಲಾಖೆಯಡಿ ಅರಣ್ಯ ಸಸಿ ನೆಡು ತೋಪು ಕಾಮಗಾರಿ ಹಾಗೂ ಇನ್ನಿತರೆ ಕಾಮಗಾರಿ‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಸ್ಥಳ ಪರಿಶೀಲನೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿರವರಾದ ಬಿ.ಕೆ.ಮನು, ಸಹಾಯಕ ನಿರ್ದೇಶಕರಾದ ಹೆಚ್.ಡಿ.ಲೋಕೇಶ್, ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ. ರಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಾದ ಎಂ.ಆರ್.ಶ್ರೀಧರ್, ಅರಣ್ಯ ಇಲಾಖಾಧಿಕಾರಿಗಳಾದ ಸಿದ್ಧರಾಜು, ರುದ್ರೇಶ್, ಸಂಪತ್ ಕುಮಾರ್, ತಾಂತ್ರಿಕ ಸಂಯೋಜಕರಾದ ಅರವಿಂದ್, ತಾಲ್ಲೂಕು ಐಇಸಿ ಸಂಯೋಜಕರಾದ ಪುಷ್ಪ, ಸಹಾಯಕ ತಾಂತ್ರಿಕ ಅಭಿಯಂತರರಾದ ನವೀನ್, ಪವಿತ್ರ, ಮದನ್, ನಂದ ಶ್ರೀನಿವಾಸ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿಯವರು ಉಪಸ್ಥಿತರಿದ್ದರು.