ಮನೆ ಸುದ್ದಿ ಜಾಲ 2 ದಿನಗಳಲ್ಲಿ ಹೊಸ ಸರ್ಕಾರ ರಚನೆಯಾಗದಿದ್ದರೆ ಲಂಕಾ ಆರ್ಥಿಕತೆ ಕುಸಿತ: ಸೆಂಟ್ರಲ್ ಬ್ಯಾಂಕ್  

2 ದಿನಗಳಲ್ಲಿ ಹೊಸ ಸರ್ಕಾರ ರಚನೆಯಾಗದಿದ್ದರೆ ಲಂಕಾ ಆರ್ಥಿಕತೆ ಕುಸಿತ: ಸೆಂಟ್ರಲ್ ಬ್ಯಾಂಕ್  

0

ಕೊಲಂಬೊ (Colombo)-ರಾಜಕೀಯ ಸ್ಥಿರತೆಯನ್ನು ಮರುಸ್ಥಾಪಿಸಲು ದೇಶದಲ್ಲಿ ಎರಡು ದಿನಗಳಲ್ಲಿ ಹೊಸ ಸರ್ಕಾರ ರಚನೆಯಾಗದಿದ್ದರೆ ಶ್ರೀಲಂಕಾದ ಆರ್ಥಿಕತೆಯು “ನಿರೀಕ್ಷೆ ಮೀರಿ ಕುಸಿಯಲಿದೆ” ಎಂದು ಅಲ್ಲಿನ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಎರಡು ದಿನಗಳಲ್ಲಿ ಯಾವುದೇ ಸರ್ಕಾರ ರಚನೆಯಾಗದಿದ್ದರೆ, ಆರ್ಥಿಕತೆಯು ಸಂಪೂರ್ಣವಾಗಿ ಕುಸಿಯುತ್ತದೆ ಮತ್ತು ಅದನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸೆಂಟ್ರಲ್ ಬ್ಯಾಂಕ್ ಗವರ್ನರ್ ಎಚ್ಚರಿಸಿದ್ದಾರೆ.

ಒಂದು ಅಥವಾ ಎರಡು ವಾರಗಳಲ್ಲಿ ಆರ್ಥಿಕತೆಯು ಸಂಪೂರ್ಣವಾಗಿ ಕುಸಿಯಲಿದೆ. ಆ ಹಂತದಲ್ಲಿ ಶ್ರೀಲಂಕಾವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಇಲ್ಲಿ ಸೆಂಟ್ರಲ್ ಬ್ಯಾಂಕ್ ಗವರ್ನರ್ ಆಗಿದ್ದರೂ ಏನೂ ಮಾಡಲು ಸಾಧ್ಯವಿಲ್ಲ ಎಂದ ಅವರು, ಸರ್ಕಾರ ರಚನೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಾವೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟನ್ನು ಖಂಡಿಸಿ ಶ್ರೀಲಂಕಾದಲ್ಲಿ ಜನ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದು, ಇದು ಬ್ಯಾಂಕ್‌ನ ಚೇತರಿಕೆಯ ಯೋಜನೆಗಳನ್ನು ಹಳಿ ತಪ್ಪಿಸಿದೆ ಮತ್ತು ಸೋಮವಾರದ ಪ್ರಧಾನಿಯ ರಾಜೀನಾಮೆಯಿಂದ ರಾಜಕೀಯ ಅಸ್ಥಿರತೆ ಉಂಟಾಗಿದೆ. ರಾಜಕೀಯ ಪರಿಸ್ಥಿತಿ ಸುಧಾರಿಸದೇ ಇದ್ದರೆ ಸದ್ಯದ ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕೆ ಸೆಂಟ್ರಲ್ ಬ್ಯಾಂಕ್ ಕೈಗೊಳ್ಳುವ ನಿರ್ಧಾರಗಳು ಫಲ ಕೊಡುವುದಿಲ್ಲ ಎಂದು ಸೆಂಟ್ರಲ್ ಬ್ಯಾಂಕ್ ಗವರ್ನರ್ ಪಿ. ನಂದಲಾಲ್ ವೀರಸಿಂಘೆ ಅವರು ಹೇಳಿದ್ದಾರೆ.