ಮನೆ ರಾಜ್ಯ ಅಸನಿ ಚಂಡಮಾರುತ ಎಫೆಕ್ಟ್:‌ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಮಳೆ

ಅಸನಿ ಚಂಡಮಾರುತ ಎಫೆಕ್ಟ್:‌ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಮಳೆ

0

ಬೆಂಗಳೂರು (Bengaluru)- ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಜೋರು ಮಳೆಯಾಗಿದೆ. ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಮಳೆಯಾಗುತ್ತಿದೆ.

ಕಳೆದ ಮೂರು ದಿನಗಳಿಂದ ಇದ್ದ ಮಂಜು ಮುಸುಕಿದ ವಾತಾವರಣ ಇಂದು ಕೂಡ ಮುಂದುವರೆದಿದ್ದು, ಅಲ್ಲಲ್ಲಿ ಮಳೆಯಾಗಿದೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ಚರ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ‌. ಇನ್ನೂ 24 ಗಂಟೆ ಆಸನಿ ಚಂಡಮಾರುತದ ಪ್ರಭಾವ ಬೆಂಗಳೂರು ನಗರ ಹಾಗೂ ರಾಜ್ಯದ ಹಲವೆಡೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ‌.

ಅಲ್ಲದೇ, ಕಳೆದ 22 ವರ್ಷಗಳಲ್ಲೇ ಮೇ ತಿಂಗಳಲ್ಲಿ ಅತ್ಯಂತ ಕಡಿಮೆ ತಾಪಮಾನವನ್ನು ಬೆಂಗಳೂರು ಹೊಂದಿರುವುದು ಕಂಡು ಬಂದಿದೆ. ಮೇ 11 ರಂದು ಬೆಂಗಳೂರಿನಲ್ಲಿ 24.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಇನ್ನೂ ಎರಡು ದಿನ ಬೆಂಗಳೂರಿನಲ್ಲಿ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ನಿಂದ 26 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇನ್ನು ಅಸನಿ ಚಂಡಮಾರುತ ಆಂಧ್ರ ಹಾಗೂ ಒಡಿಶಾ ಕರಾವಳಿ ದಾಟಿದ್ದು, ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಇದರ ಪ್ರಭಾವದಿಂದಾಗಿ ಆಂಧ್ರಪ್ರದೇಶ ಒಡಿಶಾದಲ್ಲಿ ನಿನ್ನೆ ವ್ಯಾಪಕ ಮಳೆಯಾಗಿದೆ.