ಮನೆ ರಾಜ್ಯ ದೇಶದ್ರೋಹ, ಭಯೋತ್ಪಾದನಾ ಕೃತ್ಯಗಳಿಗೆ ಯಾವ ಪಕ್ಷವೂ ಬೆಂಬಲ ನೀಡುವುದಿಲ್ಲ: ಸಂತೋಷ ಲಾಡ್  

ದೇಶದ್ರೋಹ, ಭಯೋತ್ಪಾದನಾ ಕೃತ್ಯಗಳಿಗೆ ಯಾವ ಪಕ್ಷವೂ ಬೆಂಬಲ ನೀಡುವುದಿಲ್ಲ: ಸಂತೋಷ ಲಾಡ್  

0

ಹುಬ್ಬಳ್ಳಿ: ದೇಶದ್ರೂಹ, ಭಯೋತ್ಪಾದನಾ ಕೃತ್ಯಗಳಿಗೆ ಯಾವ ಪಕ್ಷವೂ ಬೆಂಬಲ ನೀಡುವುದಿಲ್ಲ. ಚುನಾವಣೆ ಕಾರಣಕ್ಕೆ ಇದೇ ವಿಚಾರಗಳನ್ನು ಬಿಜೆಪಿ ವಿಷಯವಾಗಿಸುತ್ತಿದೆ. ಅಭಿವೃದ್ಧಿ ಬಗ್ಗೆ ಅವರೆಂದು ಚರ್ಚಿಸುವುದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್  ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ವಿಚಾರದಲ್ಲಿ ಸಿಎಂ- ಡಿಸಿಎಂ ರಾಜೀನಾಮೆ ನೀಡಬೇಕೆಂದಾದರೆ, ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪಾಕ್ ಪರ ಘೋಷಣೆಗೆ ಪ್ರಧಾನಿ ರಾಜೀನಾಮೆ ನೀಡಬೇಕಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಕಾಲದಲ್ಲಿ ಇಂತಹ ಘಟನೆಗಳು ನಡೆದಿರಲಿಲ್ಲವೆ ಆಗ ಇವರ ನೈತಿಕತೆ ಎಲ್ಲಿಗೆ ಹೋಗಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ, ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಬಿಜೆಪಿಯ ಸುಳ್ಳುಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

ಸಂತೋಷ ಲಾಡ್ ಅವರನ್ನು ಬೈಯೋಕೆ ಇಟ್ಟುಕೊಂಡಿದ್ದಾರೆ. ರಾಹುಲ್ ಗಾಂಧಿಯಂತೆ ಮಾತನಾಡುತ್ತಾರೆ ಎಂದು ತಮ್ಮ ವಿರುದ್ದ ಲೇವಡಿ ಮಾಡುವ ಬಿಜೆಪಿಗರು, ಅವರ ಬಲಿಷ್ಠ ಪ್ರಧಾನಮಂತ್ರಿಯ ಬಗ್ಗೆ ಚಕಾರ ಎತ್ತುವುದಿಲ್ಲ. 9 ವರ್ಷದಲ್ಲಿ ಡಾಲರ್ ಮೌಲ್ಯ 30 ರೂಪಾಯಿ ಹೆಚ್ಚಾಗಲು ಕಾರಣ ಏನು. ನೋಟ್ ಬ್ಯಾನ್ ಮಾಡಿದ ಮೇಲೆ ಮತ್ತೆ ಅವುಗಳನ್ನು ಮುದ್ರಿಸಲು 25 ಸಾವಿರ ಕೋಟಿ ಖರ್ಚ ಆಗಿದೆ.

ಇವರು ಏನೇ ಮಾಡಿದರೂ ಅದು ಕೇವಲ ಶ್ರೀಮಂತರಿಗೆ ಲಾಭ ಆಗಲಿದೆ ಎಂದು ಕಿಡಿ ಕಾರಿದರು. ನರೇಗಾ ಯೋಜನೆ ಕೂಲಿ ಹಣ ಬಿಡುಗಡೆಯಾಗದೇ ಇರೋದಕ್ಕೆ ಕಿಡಿಕಾರಿದ ಸಚಿವ ಸಂತೋಷ ಲಾಡ್, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಆದ್ರೆ ಕೂಲಿ ಮಾಡಿ ನಾಲ್ಕೈದು ತಿಂಗಳಾದ್ರೂ ಹಣ ಬಿಡುಗಡೆಯಾಗಿಲ್ಲ.ರಾಜ್ಯಕ್ಕೆ 1400 ಕೋಟಿ ರೂಪಾಯಿ ಬಾಕಿ ಹಣವಿದೆ. ಬರ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50 ದಿನಕ್ಕೆ ಹೆಚ್ಚಿನ ಕೆಲಸ ಕೇಳಿದ್ದೇವೆ. ಆದರೆ ಇದುವರೆಗೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ. ಬರಗಾಲದ ಪರಿಹಾರವಾಗಿ ನಾವು ಕೈಲಾದಷ್ಟು ಕೊಟ್ಟಿದ್ದೇವೆ. ಆದ್ರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದರು.

ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯವಹಾರ ಆರೋಪ ಕುರಿತು ಪ್ರತಿಕ್ರಿಯೆ ನೀಡಿ, ಯಾವುದೇ ರೀತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ತಿಳಿಸಿದರು.