ಹೈದರಾಬಾದ್: ಬಿಟೌನ್ ಬ್ಯೂಟಿ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಹುಟ್ಟುಹಬ್ಬದಂದು ಅವರ ಅಭಿಮಾನಿಗಳಿಗಾಗಿ ಟಾಲಿವುಡ್ ಸಿನಿರಂಗದಿಂದ ಸರ್ಪ್ರೈಸ್ ಸಿಕ್ಕಿದೆ.
ಜಾಹ್ನವಿ ಕಪೂರ್ ಜೂ.ಎನ್ ಟಿಆರ್ ಅವರೊಂದಿಗೆ ʼದೇವರʼ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಇದು ಅವರ ಮೊದಲ ಸೌತ್ ಸಿನಿಮಾವಾಗಿರಲಿದೆ. ಈ ಸಿನಿಮಾದಲ್ಲಿನ ಜಾಹ್ನವಿ ಕಪೂರ್ ಅವರ ಫಸ್ಟ್ ಲುಕ್ ಈಗಾಗಲೇ ಸೌತ್ ಸಿನಿಮಂದಿಯ ಗಮನ ಸೆಳೆದಿದೆ.
ಈ ನಡುವೆ ಇದೀಗ ಜಾಹ್ನವಿ ಕಪೂರ್ ಮತ್ತೊಂದು ಸೌತ್ ಸೂಪರ್ ಸ್ಟಾರ್ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದಾರೆ. ಟಾಲಿವುಡ್ ನಟ ರಾಮ್ ಚರಣ್ ಅವರ 16ನೇ ಸಿನಿಮಾದಲ್ಲಿ ಜಾಹ್ನವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ರಾಮ್ ಚರಣ್ ಅವರ ʼRC 16ʼ ಸಿನಿಮಾವನ್ನು ಬುಚ್ಚಿ ಬಾಬು ಸನಾ ಅವರು ನಿರ್ದೇಶನ ಮಾಡಲಿದ್ದಾರೆ. ʼಮೈತ್ರಿ ಮೂವಿ ಮೇಕರ್ಸ್ʼ ಜಾಹ್ನವಿ ಕಪೂರ್ ಅವರನ್ನು ಪೋಸ್ಟರ್ ಹಂಚಿಕೊಳ್ಳುವ ಮೂಲಕ ವೆಲ್ ಕಮ್ ಮಾಡಿ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ.
ರಾಮ್ ಚರಣ್ ಕೂಡ ಹುಟ್ಟುಹಬ್ಬದ ಶುಭಾಶಯವನ್ನು ಕೋರಿ, ನಿಮ್ಮೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ರಾಮ್ ಚರಣ್ ಶಂಕರ್ ಅವರ ʼಗೇಮ್ ಚೇಂಜರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದೆಡೆ ಜಾಹ್ನವಿ ಜಾನ್ವಿ ಕೊನೆಯದಾಗಿ ವರುಣ್ ಧವನ್ ಜೊತೆ ‘ಬವಾಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಆರ್‌ಸಿ 16’ ಮತ್ತು ‘ದೇವರ’ ಹೊರತುಪಡಿಸಿ, ಜಾನ್ವಿ ರಾಜ್‌ಕುಮಾರ್ ರಾವ್ ಅವರೊಂದಿಗೆ ‘ಮಿಸ್ಟರ್ ಅಂಡ್ ಮಿಸಸ್ ಮಹಿ’, ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಅವರೊಂದಿಗೆ ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.