ಮನೆ ಉದ್ಯೋಗ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ ನಲ್ಲಿ ಸಾವಿರಾರು SI ಮತ್ತು ಕಾನ್ಸ್‌ ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ

ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ ನಲ್ಲಿ ಸಾವಿರಾರು SI ಮತ್ತು ಕಾನ್ಸ್‌ ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ

0

ದೇಶದಾದ್ಯಂತ ರೈಲ್ವೆ ವಲಯಗಳಲ್ಲಿ ರಕ್ಷಣಾ ವ್ಯವಸ್ಥೆ ಬಲಪಡಿಸಲು ಬೃಹತ್ ಪ್ರಮಾಣದಲ್ಲಿ ರೈಲ್ವೆ ಸಚಿವಾಲಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ ಪಿಎಫ್) ಮತ್ತು ರೈಲ್ವೇ ಪ್ರೊಟೆಕ್ಷನ್ ಸ್ಪೆಷಲ್ ಫೋರ್ಸ್ (ಆರ್‌ಪಿಎಸ್‌ಎಫ್) ನಲ್ಲಿ  ಒಟ್ಟು 4,660 ಎಸ್‌ ಎಸ್‌ ಐ ಮತ್ತು ಕಾನ್ಸ್‌ಟೇಬಲ್ (SI, Constable) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕೋರಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 15 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

10ನೇ ತರಗತಿ ಮತ್ತು ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಬೆಂಗಳೂರು  ಸೇರಿದಂತೆ ಅಹಮದಾಬಾದ್, ಅಜ್ಮೀರ್, ಭೋಪಾಲ್, ಕೋಲ್ಕತ್ತಾ, ಮಾಲ್ಡಾ, ಮುಂಬೈ, ಮುಜಾಫರ್‌ಪುರ, ಭುವನೇಶ್ವರ್, ಬಿಲಾಸ್‌ಪುರ್, ಚಂಡೀಗಢ, ಚೆನ್ನೈ, ಗುವಾಹಟಿ, ಜಮ್ಮು ಮತ್ತು ಶ್ರೀನಗರ, ಪಾಟ್ನಾ, ಪ್ರಯಾಗರಾಜ್, ರಾಂಚಿ, ಸಿಕಂದರಾಬಾದ್, ಸಿಲಿಗುರಿ, ತಿರುವನಂತಪುರ, ಗೋರಖ್‌ಪುರ ಆರ್​ಆರ್​ಬಿ ವಲಯಗಳಲ್ಲಿ ಹುದ್ದೆಗಳ ಭರ್ತಿ   ನಡೆಯಲಿದೆ.

 ಕಾನ್‌ ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ತೇರ್ಗಡೆಯಾಗಿರಬೇಕು. ಎಸ್‌ ಎಸ್‌ ಐ ಉದ್ಯೋಗಕ್ಕಾಗಿ ಪದವಿ ಪಾಸಾಗಿರಬೇಕು. ಶೈಕ್ಷಣಿಕ ಅರ್ಹತೆಗಳ ಜೊತೆಗೆ, ಕೆಲವು ಭೌತಿಕ ಮಾನದಂಡಗಳನ್ನು ಸಹ ಪೂರೈಸಬೇಕು. ಅಲ್ಲದೆ, ಕಾನ್ಸ್‌ಟೇಬಲ್ ಹುದ್ದೆಗಳಿಗೆ ಜುಲೈ 01, 2024 ಕ್ಕೆ ಅರ್ಜಿದಾರರ ವಯಸ್ಸು 18 ರಿಂದ 28 ವರ್ಷಗಳ ನಡುವೆ ಇರಬೇಕು. SSI ಹುದ್ದೆಗಳಿಗೆ, ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು.

ಕಂಪ್ಯೂಟರ್ ಆಧಾರಿತ ಪರೀಕ್ಷೆ ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ, ದೈಹಿಕ ಮಾಪನ ಪರೀಕ್ಷೆ, ವೈದ್ಯಕೀಯ ಪ್ರಮಾಣಿತ ಪರೀಕ್ಷೆ, ಪ್ರಮಾಣಪತ್ರ ಪರಿಶೀಲನೆ ಇತ್ಯಾದಿಗಳ ಆಧಾರದ ಮೇಲೆ ಅಂತಿಮ ಆಯ್ಕೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್‌ ಎಸ್‌ ಐ ಹುದ್ದೆಗಳಿಗೆ ರೂ. 35,400 ಮತ್ತು ಕಾನ್ಸ್‌ಟೇಬಲ್ ಹುದ್ದೆಗಳಿಗೆ ರೂ. 21,700 ಮಾಸಿಕ ವೇತನವನ್ನು ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು 14ನೇ ಮೇ 2024 ರ ಮೊದಲು ಆನ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಮಯದಲ್ಲಿ, ಎಸ್‌ ಸಿ, ಎಸ್‌ ಟಿ, ಮಾಜಿ ಸೈನಿಕರು, ಮಹಿಳೆಯರು, ತೃತೀಯಲಿಂಗಿಗಳು, ಅಲ್ಪಸಂಖ್ಯಾತರು, ಇಬಿಸಿ ಅಭ್ಯರ್ಥಿಗಳು ರೂ. 250 ಮತ್ತು ಇತರ ವರ್ಗಗಳಿಗೆ ಸೇರಿದವರು ರೂ. 500 ನೋಂದಣಿ ಶುಲ್ಕವಾಗಿ ಪಾವತಿಸಬೇಕು. ಪ್ರದೇಶಾವಾರು ಖಾಲಿ ಹುದ್ದೆಗಳ ವಿವರಗಳು, ಪೋಸ್ಟ್‌ವಾರು ಶೈಕ್ಷಣಿಕ ಅರ್ಹತೆಗಳು, ಲಿಖಿತ ಪರೀಕ್ಷೆಯ ವಿಧಾನ, ಪಠ್ಯಕ್ರಮ ಇತ್ಯಾದಿಗಳನ್ನು ವಿವರವಾದ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು, ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಖಾಲಿ ಹುದ್ದೆಗಳ ವಿವರ ಒಟ್ಟು ಹುದ್ದೆಗಳ ಸಂಖ್ಯೆ: 4660