ಮನೆ ರಾಜ್ಯ ಮಾ.16 ರಿಂದ 28 ರವರೆಗೆ ಶ್ರೀ ವೈರಮುಡಿ ಬ್ರಹ್ಮೋತ್ಸವ

ಮಾ.16 ರಿಂದ 28 ರವರೆಗೆ ಶ್ರೀ ವೈರಮುಡಿ ಬ್ರಹ್ಮೋತ್ಸವ

0

ಮಂಡ್ಯ:- ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ 2024 ರ ಶ್ರೀ ವೈರಮುಡಿ ಬ್ರಹ್ಮೋತ್ಸವವನ್ನು ಮಾರ್ಚ್ 16 ರಿಂದ 28 ರವರೆಗೆ ಮೇಲುಕೋಟೆಯ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 16 ರಂದು ಶ್ರೀವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣ, ಮೃತ್ತಿಕಾ ಸಂಗ್ರಹಣ,17ರಂದು ಕಲ್ಯಾಣೋತ್ಸವ ಧಾರಾ ಮಹೋತ್ಸವ- ಅದಿವಾಸರ- ರಕ್ಷಾಬಂಧನ- ಧ್ವಜಪ್ರತಿಷ್ಠೆ, 18 ರಂದು 1 ನೇ ತಿರುನಾಳ್- ಧ್ವಜಾರೋಹಣ, ಶ್ರೀ ರಾಮಾನುಜಾಚಾರ್ಯರಿಗೆ ಅಭಿಷೇಕ, ಭೇರೀತಾಡನ- ತಿರುಪ್ಪರೈ -ಹಂಸವಾಹನ- ಯಾಗಶಾಲಾ ಪ್ರವೇಶ,19 ರಂದು 2 ನೇ ತಿರುನಾಳ್ ಶೇಷವಾಹನ ಪಡೆಯೇತ್ತ, 20 ರಂದು 3 ನೇ ತಿರುನಾಳ್- ನಾಗವಲ್ಲೀಮಹೋತ್ಸವ- ನರಂಧೋಳಿಕಾರೋಹಣ- ಚಂದ್ರಮಂಡಲವಾಹನ- ಪಡಿಯೇತ್ತ, 21 ರಂದು 4 ನೇ ತಿರುನಾಳ್ ಶ್ರೀ ವೈರಮುಡಿ ಕಿರೀಟಧಾರಣ ಮಹೋತ್ಸವ( ರಾತ್ರಿ 8.30 ರಿಂದ ಮುಂಜಾನೆ 4.00 ಗಂಟೆಯ ವರೆಗೆ) ಪಡಿಯೇತ್ತ, 22 ರಂದು 5 ನೇ ತಿರುನಾಳ್- ಪ್ರಹ್ಲಾದ ಪರಿಪಾಲನ- ಗರುಡವಾಹನ- ವಿಶೇಷ ಪಡಿಯೇತ್ತ, 23 ರಂದು 6 ನೇ ತಿರುನಾಳ್ – ಗಜೇಂದ್ರ ಮೋಕ್ಷ -ಆನೆವಸಂತ – ಕುದುರೆವಾಹನ- ಆನೆವಾಹನ -ವಿಶೇಷ ಪಡಿಯೇತ್ತ, 24 ರಂದು 7ನೇ ತಿರುನಾಳ್- ಶ್ರೀ ಮನ್ಮಹಾರೋಥೋತ್ಸವ, ಯಾತ್ರಾದಾನ, ರಥೋತ್ಸವ, ಶ್ರೀ ಚೆಲುವನಾರಾಯಣಸ್ವಾಮಿ ಮತ್ತು ಶ್ರೀ ರಾಮಾನುಜರಿಗೆ ಅಭಿಷೇಕ ಅಮ್ಮನವರ ಸನ್ನಿಧಿಯಲ್ಲಿ, ಬಂಗಾರ ಪಲ್ಲಕ್ಕಿ ಉತ್ಸವ, 25 ರಂದು 8ನೇ ತಿರುನಾಳ್- ಪಂಗುನ್ಯುತ್ತರA, ತೆಪ್ಪೋತ್ಸವ- ಡೋಲೋತ್ಸವ- ಕುದುರೆ ವಾಹನ- ಕಳ್ಳರಸುಲಿಗೆ, 26 ರಂದು 9ನೇ ತಿರುನಾಳ್- ಶ್ರೀ ನಾರಾಯಣಸ್ವಾಮಿ ಜಯಂತಿ, ಸಂಧಾನಸೇವೆ -ಚೂರ್ಣಅಭಿಷೇಕ- ಅವಬೃಥ – ಪಟ್ಟಾಭಿಷೇಕ -ಪುಷ್ಪಮಂಟಪರೋಹಣ (ಸಮರಭೂಪಾಲವಾಹನ)- ಪಡಿಮಾಲೆ – ಪೂರ್ಣಾಹುತಿ, ಶಾತ್ತುಮೊರೈ, ಕುಂಭಪ್ರೋಕ್ಷಣೆ, 27 ರಂದು 10 ನೇ ತಿರುನಾಳ್ -ಶ್ರೀ ನಾರಾಯಣಸ್ವಾಮಿಗೆ ಮಹಾಭಿಷೇಕ -ಪುಷ್ಪಯಾಗ- ಕತ್ತಲುಪ್ರದಕ್ಷಣೆ- ಹನುಮಂತವಾಹನ- ಉದ್ವಾಸನಪ್ರಬಂಧ, 28 ರಂದು ಶ್ರೀ ಅಮ್ಮನವರಿಗೆ ಮತ್ತು ಶ್ರೀಯೋಗಾನರಸಿಂಹಸ್ವಾಮಿಗೆ ಮಹಾಭಿಷೇಕ- ಶೇರ್ತಿಸೇವೆ -ಕೊಡೈತಿರುನಾಳ್ ಉತ್ಸವ ಪ್ರಾರಂಭವಾಗುವುದು.