ಮನೆ ಸ್ಥಳೀಯ ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು: ಕೆ. ಹರೀಶ್ ಗೌಡ ಮನವಿ

ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು: ಕೆ. ಹರೀಶ್ ಗೌಡ ಮನವಿ

0

2.10 ಕೋಟಿಯ ವೆಚ್ಛದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಮೈಸೂರು: ನಗರದ ವಾರ್ಡ್ ನಂ.23 ಹಾಗೂ 42 ಮತ್ತು 50ರ ಕಾಕರವಾಡಿ, ಬೆಸ್ತರಗೇರಿ, ಕುಂಬಾರಗೇರಿ, ಕುರುಬಗೇರಿ, ಗೊಲ್ಲಗೇರಿ, ಗೀತಾ ರಸ್ತೆ, ಕೆ ಜಿ ಕೊಪ್ಪಲ್, ಹಳೆ ಬಂಡಿಕೇರಿ, ಗಾಣಿಗರ ಬೀದಿ, ಬೆಳ್ಳಿಕಟ್ಟೆ , ಹಾಗೂ ದೇವರಾಜ ಮೊಹಲ್ಲಾ ಭಾಗದ  ಪ್ರದೇಶಕ್ಕೆ ಮೂಡಾ ಕಛೇರಿ ಪಕ್ಕದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗರವನ್ನು ನಿರ್ಮಿಸಿ, ರಾಮಸ್ವಾಮಿ ವೃತ್ತದ ಸಮೀಪ ಲಿಂಕಿಂಗ್ ಮಾಡುವ ಕಾಮಗಾರಿಯ ಅಂದಾಜು 2.10 ಕೋಟಿ ಮೊತ್ತದ  ಕಾಮಗಾರಿ ಗುದ್ದಲಿ ಪೂಜೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ನೆರವೇರಿಸಿದರು

ನಂತರ ಮಾತನಾಡಿದ ಅವರು ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸರಬರಾಜು ವಿಚಾರವಾಗಿ ಜನಸಾಮನ್ಯರ ಮನೆಮನೆಗೆ ಕುಡಿಯುವ ನೀರಿನ ಪೊರೈಕೆ ದೃಷ್ಠಿಯಿಂದ 2.10 ಕೋಟಿಯ ವೆಚ್ಛದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆದಿದ್ದು ಕಾಮಗಾರಿ ಪ್ರಾರಂಭವಾಗಲಿದೆ, ಕುರುಬರ ಬೀದಿ, ಗೊಲ್ಲಗೇರಿ, ಸೋನಾರ್ ಬೀದಿ ಅಗಸಗೇರಿ, ಗೀತಾ ರಸ್ತೆ  ಹಾಗೂ ಕೆ ಜಿ ಕೊಪ್ಪಲ್ ಬಡಾವಣೆಗಳಿಗೆ ಕುಡಿಯುವ ನೀರು ಪೊರೈಕೆ ಸಮರ್ಪಕವಾಗಿ ಮನೆ ಮನೆಗೆ ಪೊರೈಕೆಯಾಗಲಿದ್ದು, ಮೈಸೂರು ನಗರಕ್ಕೆ ಇಲ್ಲಿಯವರೆಗೂ ನೀರಿನ ತೊಂದರೆ ಬಂದಿಲ್ಲ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರು ಹಾಗೂ ವಾಣಿವಿಲಾಸ ನೀರು ಸರಬರಾಜು ಮಂಡಳಿ ತಂಡ ರಚಿಸಿ ಸಹಾಯವಾಣಿ ತೆರೆಯಲಾಗಿದೆ, ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು ಹಾಗೂ ಮುಂದಿನ ಎರಡು ತಿಂಗಳ ಬಳಿಕ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದರು.

ಜೀವ ಸಂಕುಲದ ವೈವಿಧ್ಯದಲ್ಲಿ ನೀರಿನ ಮಹತ್ವ ಅತಿಮುಖ್ಯವಾಗಿದೆ. ಭೂಮಿಯಲ್ಲಿ ಅತಿ ಹೆಚ್ಚು ಬಳಸುವ ವಸ್ತುಗಳಲ್ಲಿ ನೀರು ಸಹ ಒಂದು. ಇದನ್ನು ಇತಿ-ಮಿತವಾಗಿ ಬಳಸಿ, ನೀರನ್ನು ಸದ್ಬಳಕೆ ಮಾಡುವಂತೆ ಮೈಸೂರಿನ ನಾಗರೀಕರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಕುಮಾರ್, ನವೀನ್, ಬೋರಪ್ಪ, ಅಧಿಕಾರಿ ಪ್ರಸನ್ನ, ಕಂಟ್ರಾಕ್ಟರ್ ರಮೇಶ್, ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳಾದ ಇಇ ನಾಗರಾಜ್, ಎಇಇ ಧನುಷ್, ಪ್ರಶಾಂತ್, ಇನ್ನಿತರ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.