ಮನೆ ಅಪರಾಧ ಬೆಳಗಾವಿ ಹುಕ್ಕಾ ಬಾರ್, ತಂಬಾಕು ಉತ್ಪನ್ನ ಮಾರಾಟ ಮಳಿಗೆ ಮೇಲೆ ದಾಳಿ: ಲಕ್ಷಾಂತರ ಮೌಲ್ಯದ ವಸ್ತುಗಳು...

ಬೆಳಗಾವಿ ಹುಕ್ಕಾ ಬಾರ್, ತಂಬಾಕು ಉತ್ಪನ್ನ ಮಾರಾಟ ಮಳಿಗೆ ಮೇಲೆ ದಾಳಿ: ಲಕ್ಷಾಂತರ ಮೌಲ್ಯದ ವಸ್ತುಗಳು ಸೀಜ್

0

ಬೆಳಗಾವಿ: ಬೆಳಗಾವಿ ಹುಕ್ಕಾ ಬಾರ್ ಮತ್ತು ತಂಬಾಕಿನ ಉತ್ಪನ್ನ ಮಾರಾಟ ಮಳಿಗೆ ಮೇಲೆ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

 ಈ ವೇಳೆ ದೇಶದಲ್ಲಿ ನಿಷೇಧಿತ ಇ-ಸಿಗರೆಟ್ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಸೀಜ್ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಮಂಗಳೂರು ಮೂಲದ ಅಬುಬ್ಕರ್ ಸಿದ್ದಿಕ್, ಶಬಾಬ್ ಅಹಮ್ಮದ್ ಎಂಬುವವರನ್ನು ಬಂಧಿಸಲಾಗಿದೆ.

ಟಿಳಕವಾಡಿಯ ಗ್ಯಾಲರಿ ಸ್ಮೋಕ್ & ಚಾಕಲೇಟ್ ಗಿಫ್ಟ್ & ಮೋರ್ ಮೇಲೆ ದಾಳಿ ನಡೆಸಲಾಗಿದ್ದು, ಯಾವುದೇ ಲೈಸೆನ್ಸ್ ಇಲ್ಲದೇ ಅನಧಿಕೃತವಾಗಿ ಮಳಿಗೆಯಲ್ಲಿ ಸುರಂಗ ಮಾರ್ಗ ನಿರ್ಮಿಸಿ ಹುಕ್ಕಾ ಮಾರಾಟ ಮಾಡಲಾಗುತ್ತಿತ್ತು. ಮಾದಕ ವಸ್ತುಗಳ ಮಾರಾಟಕ್ಕೆ ಕೇಂದ್ರ ಸರ್ಕಾರದ ನಿಷೇಧವಿದ್ದರೂ ಕೂಡ ಮಾರಾಟ ಮಾಡಲಾಗಿತ್ತು. ಇನ್ನು ದಾಳಿ ವೇಳೆ 5.53 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದರೆ, ಹುಕ್ಕಾ, ರೋಲ್ ಪೇಪರ್, ಚಾರ್ಕಕೋಲ್, ವಿದೇಶಿ ಸಿಗರೆಟ್, ತಂಬಾಕಿನ ಪಾಕೇಟ್​ಗಳನ್ನು ಜಪ್ತಿ ಪಡೆಯಲಾಗಿದೆ.

ಇನ್ನು ಕಾಲೇಜು ವಿದ್ಯಾರ್ಥಿಗಳಿಗೆ ಈ ಹುಕ್ಕಾ, ವಿದೇಶಿ ಸಿಗರೆಟ್ ಮರಾಟವಾಗುತ್ತಿತ್ತು ಎನ್ನಲಾಗಿದೆ.