ಮನೆ ರಾಷ್ಟ್ರೀಯ ಉಚಿತವಾಗಿ ಕೆಲಸ ಮಾಡಲು ನಿರಾಕರಿಸಿದ ಕಾರ್ಮಿಕರ ಗುಡಿಸಲಿಗೆ ಬೆಂಕಿ ಇಟ್ಟ ವ್ಯಕ್ತಿ

ಉಚಿತವಾಗಿ ಕೆಲಸ ಮಾಡಲು ನಿರಾಕರಿಸಿದ ಕಾರ್ಮಿಕರ ಗುಡಿಸಲಿಗೆ ಬೆಂಕಿ ಇಟ್ಟ ವ್ಯಕ್ತಿ

0

ಗಾಂಧಿನಗರ್:‌ ಉಚಿತವಾಗಿ ಕೆಲಸ ಮಾಡಲು ನಿರಾಕರಿಸಿದ ಕಾರ್ಮಿಕರನ್ನು ಬೆದರಿಸುವ ಸಲುವಾಗಿ ಅವರ ಗುಡಿಸಲಿಗೆ ವ್ಯಕ್ತಿಯೊಬ್ಬ ಬೆಂಕಿ ಇಟ್ಟಿರುವ ಘಟನೆ  ಗುಜರಾತ್ ನ ಕಚ್ ನಲ್ಲಿ ನಡೆದಿದೆ.

ಆರೋಪಿಯನ್ನು ಮಹಮ್ಮದ್ ರಫೀಕ್ ಕುಂಬಾರ್ ಎಂದು ಗುರುತಿಸಲಾಗಿದ್ದು, ಈತ ಅಂಜಾರ್ ಪೇಟೆಯಿಂದ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅವರ ಕೆಲಸಕ್ಕೆ ಸಂಬಳವನ್ನು ನೀಡದೆ ಉಚಿತವಾಗಿ ದುಡಿಸಿಕೊಳ್ಳುತ್ತಿದ್ದ.

ಸಂಬಳ ನೀಡಿದರೆ ಮಾತ್ರ ಬರುತ್ತೇವೆ ಎಂದು ಕಾರ್ಮಿಕರು ಇತ್ತೀಚೆಗೆ ರಫೀಕ್‌ ಕರೆದಾಗ ಹೋಗಿಲ್ಲ. ಇದರಿಂದ ಕೋಪಗೊಂಡ ರಫೀಕ್‌ ನೀವು ಬರದಿದ್ದಾರೆ, ನಿಮ್ಮ ಗುಡಿಸಲಿಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಮರುದಿನ ಬೆಳಿಗ್ಗೆ, ರಫೀಕ್ ಖಾತ್ರಿ ಬಜಾರ್ ಬಳಿಯಿರುವ‌ ಕಾರ್ಮಿಕರ 15 ಗುಡಿಸಲು ಮನೆಗಳಿಗೆ ಬೆಂಕಿ ಹಚ್ಚಿದ್ದಾನೆ. ಈ ವೇಳೆ ನಿದ್ರೆಯಲ್ಲಿದ್ದ ಕಾರ್ಮಿಕರು ಎಚ್ಚರಗೊಂಡು ಮನೆಯಿಂದ ಓಡಿ ಬಂದಿದ್ದಾರೆ.

ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದು, ಗುಡಿಸಲಿನಲ್ಲಿದ್ದ ಬೆಕ್ಕು ಅದರ ಏಳು ಮರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದವರು ಬರುವಷ್ಟರಲ್ಲಿ ಗುಡಿಸಲು ಹಾಗೂ ಮನೆಯ ಸಾಮಾಗ್ರಿಗಳೆಲ್ಲ ಬೆಂಕಿಗೆ ಆಹುತಿಯಾಗಿದೆ.

ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಕಚ್‌ನ ಪೊಲೀಸ್ ಅಧೀಕ್ಷಕ ಸಾಗರ್ ಬಾಗ್ಮಾರ್ ಹೇಳಿದ್ದಾರೆ.