ಕಠ್ಮಂಡು(ನೇಪಾಳ): ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು ಒಂದು ಬಾರಿ ಹತ್ತುವುದೇ ಮಹತ್ವದ ಸಾಧನೆ. ಆದರೆ ಪರ್ವತಾರೋಹಿ ಲಕ್ಪಾ ಶೆರ್ಪಾ 10ನೇ ಬಾರಿ ಹತ್ತುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.
ಗುರುವಾರ ಮುಂಜಾನೆ ಲಕ್ಪಾ ಶೆರ್ಪಾ ಮತ್ತು ಇತರ ಹಲವು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಹತ್ತಿದ್ದು, ಪರ್ವತಾರೋಹಣಕ್ಕೆ ಅನುಕೂಲಕರ ವಾತಾವರಣವಿತ್ತು. ಲಕ್ಪಾ ಶೆರ್ಪಾ ಆರೋಗ್ಯವಾಗಿದ್ದು, ಸುರಕ್ಷಿತವಾಗಿ ಕೆಳಗಿಳಿಯುತ್ತಿದ್ದಾರೆ ಎಂದು ಲಕ್ಪಾ ಶೆರ್ಪಾ ಅವರ ಸಹೋದರ ಮತ್ತು ಪರ್ವತಾರೋಹಣ ಸಂಘಟಕ ಮಿಂಗ್ಮಾ ಗೆಲು ಮಾಹಿತಿ ನೀಡಿದ್ದಾರೆ.
ನೇಪಾಳ ಮೂಲದ 48 ವರ್ಷದ ಲಕ್ಪಾ ಶೆರ್ಪಾ , ಅಲ್ಲಿಗೆ ಬರುವ ಚಾರಣಿಗರಿಗೆ ಉಪಯುಕ್ತ ವಸ್ತುಗಳನ್ನು ನೀಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಈಗ ಅದೇ ಲಕ್ಪಾ ಶೆರ್ಪಾ 10ನೇ ಬಾರಿ ಪರ್ವತಾರೋಹಣವನ್ನು ಯಶಸ್ವಿಗೊಳಿಸಿದ್ದಾರೆ.