ಮನೆ ರಾಜ್ಯ ಅಕ್ರಮ ಸಾಗಾಟ: ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ಬಿಯರ್ ವಶ

ಅಕ್ರಮ ಸಾಗಾಟ: ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ಬಿಯರ್ ವಶ

0

ಮೈಸೂರು:  ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನ್ನು ತಪಾಸಣೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ಬಿಯರ್ ವಶಪಡಿಸಿಕೊಳ್ಳಲಾಗಿದೆ.

ಎನ್.‌ ಆರ್.‌ ಮೊಹಲ್ಲದ ಮೇಸ್ಕೋ ಸ್ಕೂಲ್ ರಸ್ತೆಯಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಚರಣೆ ವೇಳೆ ಈ ಅಕ್ರಮ ಪತ್ತೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸರಬರಾಜಿನ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದು,ತಮಗೆ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಬಕಾರಿ ಜಂಟಿ ಆಯುಕ್ತ ಎಫ್.ಎಸ್. ಛಲವಾದಿ, ಹಾಗೂ ಅಬಕಾರಿ ಉಪ ಆಯುಕ್ತ  ಎಸ್. ನಾಗರಾಜಪ್ಪ ವಾರ್ಗದರ್ಶನದಲ್ಲಿ ತನಿಖಾದಳದ ಅಬಕಾರಿ ನಿರೀಕ್ಷಕ ಎ.ಎ.ಮುಜಾವರ ಹಾಗೂ ಸಿಬ್ಬಂದಿ ತಂಡ ರಚಿಸಿಕೊಂಡು ಮೈಸೂರು ನಗರದ ಮೇಸ್ಕೋ ಸ್ಕೂಲ್ ರಸ್ತೆುಂಲ್ಲಿ ಅಬಕಾರಿ ದಾಳಿ ವಾಡಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟಮಾಡುತ್ತಿದ್ದ ವಿವಿಧ ಬ್ರಾಂಡಿನ ೮೮.೫೬೦ ಲೀಟರ್ ಮದ್ಯ ಹಾಗೂ ೪೬.೯೨೦ ಲೀಟರ್ ಬಿಯರ್ ಸೇರಿದಂತೆ ಒಟ್ಟು ೮ ಲಕ್ಷ ರೂಪಾಯಿ ಮೌಲ್ಯದ ಮಾಲನ್ನು  ವಶ ಪಡೆಯಲಾಗಿದೆ.

ಮದ್ಯ ಸಾಗಾಟಮಾಡುತ್ತಿದ್ದ ನಾಗರಾಜು ಹಾಗೂ ಆತನಿಗೆ ಮದ್ಯ ಪೂರೈಸಿದ ಶಂಕರ್ ಮತ್ತು ವಾಹನ ಮಾಲೀಕರ ವಿರುದ್ದ ಅಬಕಾರಿ ಠಾಣೆಯಲ್ಲಿ  ಪ್ರಕರಣ ದಾಖಲು.

ಕಚೇರಿಯ ಹಿರಿಯ ವಾಹನ ಚಾಲಕ ಮಂಜು, ಬಿ ಎಸ್ ಗುರುಮಲ್ಲೇಶ್,  ಹಿರಿಯ ಪೇದೆ ಎನ್.ಅಜ್‌ಮ್ ಮತ್ತು ಪ್ರತಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.‌