ಮನೆ ಸ್ಥಳೀಯ ಯುವ ಮತದಾರರು ತಪ್ಪದೇ ಮತ ಚಲಾಯಿಸಿ: ಕುಮುದಾ ಶರತ್

ಯುವ ಮತದಾರರು ತಪ್ಪದೇ ಮತ ಚಲಾಯಿಸಿ: ಕುಮುದಾ ಶರತ್

0

ಮೈಸೂರು: ಯುವ ಮತದಾರರ ಮುಕ್ತ ಹಾಗೂ ನ್ಯಾಯೋಚಿತವಾದ ಚುನಾವಣೆಯನ್ನು ಬೆಂಬಲಿಸಬೇಕು. ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಬೇಕು ಎಂದು ಸಹಾಯಕ  ಚುನಾವಣಾಧಿಕಾರಿಗಳಾದ ಕುಮುದಾ ಶರತ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Join Our Whatsapp Group

ಹೆಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆ – 2024 ರ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುವ ಮತದಾರರ ಮತದಾನ ಜಾಗೃತಿ ಹಾಗೂ ಹಸ್ತಾಕ್ಷರ ಸಂಗ್ರಹ ಅಭಿಯಾನವನ್ನು ಉದ್ಘಾಟಿಸಿದರು.

ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಧರಣೇಶ್ ಎಸ್.ಪಿ ಅವರು ಮಾತನಾಡಿ, ಯಾವುದೇ ಆಸೆ ಆಮಿಷಗಳಿಗೆ ಯುವ ಮತದಾರರ ಒಳಗಾಗದೆ ಪ್ರಜಾ ಪ್ರಜಾಪ್ರಭುತ್ವವನ್ನು ಬಲಪಡಿಸಲು ತಪ್ಪದೇ ಮತದಾನ ಮಾಡಬೇಕು. ಜೊತೆಗೆ ತಮ್ಮ ಕುಟುಂಬದವರು, ನೆರೆಹೊರೆಯವರು, ಸಂಬಂಧಿಕರು ಹಾಗೂ ಮತದಾನದ ಬಗ್ಗೆ ಅಸಡ್ಡೆ ತೋರುವವರನ್ನು ಪ್ರೇರೇಪಿಸಿ ಮತಗಟ್ಟೆಗೆ ಕರೆದುಕೊಂಡು ಹೋಗಿ ಮತದಾನ ಮಾಡಿಸಬೇಕು.

ಮತದಾನ ಮಾಡುವ ಪ್ರತಿಯೊಬ್ಬ ಯುವಕರಿಗೆ ಮೊದಲು ಮತದಾನ ಮಾಡುವ ದಿನದ ಬಗ್ಗೆ ಅರಿವು ಇರಬೇಕು. ಜೊತೆಗೆ VHA ( ವೋಟರ್ ಹೆಲ್ಫ್ ಲೈನ್ ಆಪ್) ನಲ್ಲಿ ನಿಮ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಎಂದು ತಿಳಿಸಿದರು.

ವಿದ್ಯಾರ್ಥಿಗಳೇ ಭಾರತದ ಮುಂದಿನ ಭವಿಷ್ಯದ ಪ್ರಜೆಗಳು” “ವಿದ್ಯಾರ್ಥಿಗಳ ನಡೆ – ಮತಗಟ್ಟೆಯ ಕಡೆ” ಇರಬೇಕು. ಆದ್ದರಿಂದ ಎಲ್ಲಾರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಂವಿಧಾನಿಕ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಬೇಕು ಕಿವಿಮಾತು ಹೇಳಿದರು.

ಮೊದಲ ಬಾರಿಗೆ ಮತದಾನ ಮಾಡುವ ವಿದ್ಯಾರ್ಥಿನಿ ಶಿಲ್ಪಾ ಅವರು, ಮೊದಲ ಬಾರಿಗೆ ಮತದಾನ ಮಾಡಲು ತುಂಬಾ ಉತ್ಸುಕಳಾಗಿದ್ದೇನೆ ಹಾಗೂ ಸಂತೋಷವಾಗುತ್ತಿದೆ. ಹಿಂದೆ ಹೆಣ್ಣು ಮಕ್ಕಳಿಗೆ ಮತದಾನ ಮಾಡುವ ಹಕ್ಕು ಇರಲಿಲ್ಲ, ಕೇವಲ ಶ್ರೀಮಂತರು, ಪದವಿಧರರಿಗೆ ಮಾತ್ರ ಇತ್ತು, ಡಾ.ಬಿ.ಆರ್.ಅಂಬೇಡ್ಕರ್ ಹೆಣ್ಣು ಮಕ್ಕಳಿಗೂ ಮತದಾನದ ಹಕ್ಕನ್ನು ಕೊಡಿಸಿದ್ದಾರೆ ಇದರಿಂದ ನಮ್ಮ ನಾಯಕರನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.

ಇದೇ ವೇಳೆ ಯುವ ಮತದಾರರಿಂದ ಹಸ್ತಾಕ್ಷರ ಸಂಗ್ರಹ ಹಾಗೂ ಮಾನವ ಸರಪಳಿ ನಿರ್ಮಿಸಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಲಾಯಿತು.

ಈ ವೇಳೆ ತಾಲ್ಲೂಕು ಯೋಜನಾಧಿಕಾರಿಗಳಾದ ಕೆ.ರಂಗಸ್ವಾಮಿ, ಕಾಲೇಜಿನ ಪ್ರಾಂಶುಪಾಲರಾದ ಅರುಣ್, ಕಾಲೇಜು  ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.