ಅಧಿಕ ರಕ್ತದ (High Blood Pressure)ಕ್ಕೂ ಮರಣಕ್ಕೂ ನಿಕಟ ಸಂಬಂಧವಿದೆ. ರಕ್ತದೊತ್ತಡ ಎಷ್ಟು ಅಧಿಕವಾಗಿದ್ದರೆ, ಆ ವ್ಯಕ್ತಿ ಅಷ್ಟುವೇಗವಾಗಿ ಮೃತ್ಯುವಿಗೆ ಹತ್ತಿರವಾಗುತ್ತಾನೆ.ಇದಕ್ಕೆ ಕಾರಣ ವೇನೆಂದರೆ-
ಅಧಿಕ ರಕ್ತದೊಡವಿರುವುದರಿಂದ, ದಿನದಿಂದ ದಿನಕ್ಕೆ ಆ ವ್ಯಕ್ತಿಯಲ್ಲಿ ನರಗಳ ವ್ಯವಸ್ಥೆ(Nervous System)ಹಾನಿಗೊಳಗಾಗಲು ಆರಂಭವಾಗುತ್ತದೆ, ಹೃದಯಕ್ಕೆ ಶ್ರಮಾ ಅಧಿಕವಾಗುತ್ತದೆ. ಕಾಲಕ್ರಮೇಣ ಹೃದಯಕ್ಕೆ ರಕ್ತ ಕೊಂಡೊಯ್ಯುವ ರಕ್ತನಾಳಗಳು ಕಿರಿದು ಮತ್ತು ಪೆಡಸೂ ಆಗುತ್ತವೆ. ಈ ಸ್ಥಿತಿಯನ್ನುAtherosclerosis ಎನ್ನುತ್ತಾರೆ.
ರತ್ತನಾಳಗಳು ಇಕ್ಕಟ್ಟಾಗುವುದರಿಂದ. ಶರೀರದ ಮುಖ್ಯ ಭಾಗಗಳಿಗೆ ಹೋಗಬೇಕಾದ ರಕ್ತ ದಿನದಿಂದದಿನಕ್ಕೆ ಕಡಿಮೆಯಾಗುತ್ತದೆ. ಇದರ ಪರಿಣಾಮ ಎಂಬಂತೆ ಹೃದ್ರೋಗ, ಪಾರ್ಶ್ವ ವಾಯು, (Stroke), ಮೂತ್ರಪಿಂಡಗಳ ವೈಫಲ್ಯ(Kidney Failure)ಗಳು ಉಂಟಾಗಿ ಆ ವ್ಯಕ್ತಿ ತನ್ನ ಜೀವನದ ಅರ್ಧಾಯುಷ್ಟದಲ್ಲಿ — ಸುಮಾರು 15 -20 ವರ್ಷಗಳ ಮುನ್ನವೇ ಮರಣವನ್ನಪ್ಪಬಹುದು.
ಸೈಲೆಂಟ್ ಕಿಲ್ಲರ್
ದುರದೃಷ್ಟವೆಂದರೆ, ಯಾವುದೇ ವ್ಯಕ್ತಿಗೆ ಹೈ ಬೀಪಿ ಇರುವುದು ಮೇಲ್ನೋಟಕ್ಕೆ ತಿಳಿಯದು ಏಕೆಂದರೆ ಇದರ ವ್ಯಾದಿಗಳಂತೆ ಇದರಲ್ಲಿ ಲಕ್ಷಣಗಳೇನೂ ಕಂಡು (Symptoms) ಬರುವುದಿಲ್ಲ.
ಲಕ್ಷಣಗಳೇನೂ ಕಂಡು. ಬರದಿರುವದರಿಂದ ಹೈಬೀಪಿ ಇರುವ ಅರ್ಧದಷ್ಟು ಜನರಿಗೆ ತಮಗೆ ಹೈ ಬೀಪಿ ಇರುವ ಅರಿವೇ ಉಂಟಾಗದು.
ಒಂದು ಸಂತೋಷದ ಸಂಗತಿ ಯೇನೆಂದರೆ, ಹೈಬೀಪಿಯನ್ನು ಹಿಡಿತದಲ್ಲಿಟ್ಟುಕೊಂಡು ಸಾಮಾನ್ಯ ಸ್ಥಿತಿಗೆ ತರಬಹುದು, ಬಾರದಂತೆ ನಿವಾರಿಸಿಕೊಳ್ಳಲುಬಹುದು ಅದಕ್ಕೆ ಏನೂ ಮಾಡಬೇಕು ?
ಉಪ್ಪನ್ನು ಕಡಿಮೆ ಮಾಡಬೇಕು
ಬೀಪಿ ಇರುವವರು ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕೆಂಬುದನ್ನು ಕೇಳಿರುತ್ತೇವೆ. ಆದರೆ ಉಪ್ಪು ಎಷ್ಟು ಕಡಿಮೆ ಮಾಡಬೇಕು? ಎಷ್ಟು ಉಪ್ಪನ್ನು ಬಳಸಬೇಕು?
ಒಬ್ಬ ಸಾಧಾರಣ ವ್ಯಕ್ತಿಗೆ ದಿನಕ್ಕೆ 10-12 ಗ್ರಾಮಗಳಷ್ಟು ಉಪ್ಪು ಅಗತ್ಯ.ಒಂದು ಗ್ರಾಂ ಗಳಷ್ಟು ಅಂದರೆ ಒಂದು ಚಿಟಕಿಯಷ್ಟು!
ಬಿಪಿ ರೋಗಿ 4-6 ಗ್ರಾಂ ಗಳಷ್ಟು ಉಪ್ಪನ್ನು ಬಳಸಬಹುದು. ಅಂದರೆ ಅವನು 5 -6ಚಿಟಕೆ ಉಪ್ಪನ್ನು ಬಳಸಬಹುದು ಎಂದಾಯಿತು!
ಬೇಬಿಗಾಗಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ, ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಅವನಿಗೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತಿರುತ್ತದೆ. ಹಾಗೆಯೇ ರಕ್ತದಲ್ಲಿ ಸೋಡಿಯಂ ಕಡಿಮೆಯಾಗುವುದರಿಂದ ಆಯಾಸ, ನಿಶ್ಯಕ್ತಿ,ಕಾಲು ಸೇದುವುದು ಮುಂತಾದ ಸಾಧ್ಯತೆಯ, ಅವಕಾಶವೂ ಇದೆ.
ಬೀಪಿ ಇರುವವರು ಡಾಕ್ಟರು ಸೂಚಿಸಿದ ಚಿಕಿತ್ಸೆಯ ಜೊತೆಗೆ, ಈ ಕೆಳಗಿನ ಎಚ್ಚರಿಕಗಳನ್ನು ವಹಿಸುವುದೂ ಒಳ್ಳೆಯದು. ದಿನವೂ ವ್ಯಾಯಾಮ ಮಾಡಬೇಕು ಆದರೆ ಅದು ಅತಿಯಾಗಬಾರದು. ನಡಿಗೆ ಇದಕ್ಕೆ ದಿವ್ಯಔಷದ. ಪ್ರತಿದಿನ 4 ಕಿಲೋಮೀಟರುಗಳು, ಅಂದರೆ ಸುಮಾರು 45 ನಿಮಿಷಗಳು ನಡೆಯುವುದು ಒಳ್ಳೆಯ ಪರಿಣಾಮ ನಿಡುತ್ತದೆ.
ವಾಕಿಂಗ್ ಗೆ ಹೋಗುವಾಗ ಕೈಯಲ್ಲಿ ಭಾರ ಇರಬಾರದು.ಉದಾರಣೆಗೆ ತರಕಾರಿ ತುಂಬಿದ ಚೀಲಗಳು ಇತ್ಯಾದಿ.
ಕೈಯಲ್ಲಿ 1ರಿಂದ 3 ಪೌಂಡಗಳ ತೂಕವಿದ್ದರೂ, ಆ ವ್ಯಕ್ತಿ ಸಿಸ್ಟಾಲಿಕ್ ಫ್ರೆಷರ್ 9 ಪಾಯಿಂಟ್ ಗಳಷ್ಟು ಹೆಚ್ಚಾಗುವುದೆಂದು, ಪರಿಶೀಲನೆಗಳಿಂದ ತಿಳಿದು ಬಂದಿದೆ.
ಯೋಗಾಸನಗಳ ಮೂಲಕ, ಇಲ್ಲವೇ ಬ್ರೇಕಿಂಗ್ ಎಕ್ಸರ್ ಸೈ ಜುಗಳ ಮೂಲಕ ಆಗಾಗ ರಿಲ್ಯಾಕ್ಸ್ ಮಾಡುತ್ತಿಬೇಕು.
ಸಿಗರೇಟ್ ಸೇವನೆಯನ್ನು ಸಂಪೂರ್ಣವಾಗಿ ಬಿಡಬೇಕು.
ಆಲ್ಕೋಹಾಲ್ ಸೇವನೆ ಪೂರ್ತಿ ನಿಲ್ಲಿಸಬೇಕು.ಇಲ್ಲವೇ ಮಿತವಾಗಿ ತೆಗೆದುಕೊಳ್ಳಬೇಕು.
ಸೇವಿಸುವ ಆಹಾರದಲ್ಲಿ ಕೊಲೆಸ್ಟರಾಲ್ ಇರುವ ಪದಾರ್ಥಗಳನ್ನು ಆದಷ್ಟೂ ಕಡಿಮೆ ಮಾಡಬೇಕು ಕರಿದ ಪದಾರ್ಥಗಳು. ಬೆಣ್ಣೆ, ಕೆನೆ, ಮಾಂಸದಲ್ಲಿ ಲಿವರ್ ಮಿದುಳು, ಕಿಡ್ನಿಗಳಂತಹವನ್ನು ಕಡಿಮೆ ತೆಗೆದುಕೊಳ್ಳಬೇಕು.ಸಾಧ್ಯವಾದರೆ ತ್ಯಜಿಸಬೇಕು
ಹಾಗೆಯೇ ಕೋಳಿ ಮೊಟ್ಟೆಗಳ ಹಳದಿ ಭಾಗದಲ್ಲಿ ಕೊಲೆಸ್ಟರಾಲ್ ಹೆಚ್ಚಾಗಿರುತ್ತದೆ, ಅದರಿಂದ ಅದನ್ನು ಬಿಟ್ಟು ಬಿಳಿ ಭಾಗವನ್ನು ಮಾತ್ರ ತೆಗೆದುಕೊಳ್ಳುವುದು ಒಳ್ಳೆಯದು.
ಮೇಲಿನವುಗಳನ್ನು ಬಿಡುವುದೆಂದರೆ ಪೂರ್ತಿಯಾಗಿ ನಿಲ್ಲಿಸಬೇಕಂದಲ್ಲ ತಿಂಗಳಿಗೊಂದು
ಬಾರಿಯೋ ಎರಡು ಬಾರಿಯೋ ತೆಗೆದುಕೊಳ್ಳಬಹುದು.
ಮೃಗಾಲಯಕ್ಕೆ ಹೋಗಿ ಬನ್ನಿ
ಚಿಂತೆ ಮಾಡುವುದು, ಕೋಪಗೊಳ್ಳುವುದು ಬಿಪಿ ಹೆಚ್ಚಾಲು ಕಾರಣ. ಚಿಂತಿಸು ಅಗತ್ಯ ಏರ್ಪಡದಂತೆ ನೋಡಿಕೊಳ್ಳುವುದು. ಪ್ರಕೃತಿಯೊಡನೆ ಒಡನಾಟದಂತಹ ಚರ್ಯೆಗಳು ಬೀಪಿ ಕಡಿಮೆಯಾಗಲು ಸಹಾಯ ಮಾಡುತ್ತವೆ.
ಪಾರ್ಕಿಂಗ್ ಗೆ ಹೋಗುವುದು,ಹತ್ತಿರದಲ್ಲಿ ಮೃಗಾಲಯವಿದ್ದರೆ ಅಲ್ಲಿಗೆ ಹೋಗುವುದು ಮನುಷ್ಯನನ್ನು ರಿಲ್ಯಾಕ್ಸ್ ಸ್ಥಿತಿಗೆ ತರುತ್ತವೆ. ಅಲ್ಪಮಟ್ಟದ ಹೈಪರ್ ಟೆನ್ಷನ್(Mild Hypetensivon ) ಏನಾದರೂ ಇದ್ದರೆ,ಅದನ್ನು ದೂರ ಮಾಡುತ್ತವೆ
ನಗಬೇಕು
ನಗು ರಿಲ್ಯಾಕ್ಷೇಷಗೆ ಒಳ್ಳೆಯ ಉಪಾಯ ಹೃದಯಪೂರ್ವಕವಾಗಿ ಸಂತೋಷಭರಿತರಾಗಿ ನಗುವ ನಗೆ ಬೀಪಿಯನ್ನು ತಪ್ಪದೇ ಕಡಿಮೆ ಮಾಡಿ ಕೊಡಿಸುತ್ತದೆ ಸೈಡ್ ಎಫೆಕ್ಟ್ ಏನೂ ಇರದ ದಿವ್ಯವಾದ ನಗು .
ಸಂತೋಷವಾಗಿರಿ
ವ್ಯಸನ, ಚಿಂತೆಗಳಿಂದಲೇ ಸಂತೋಷವಾಗಿರುವುದರಿಂದ ಮನುಷ್ಯನಲ್ಲಿ ಸಿಸ್ಟಾಲಿಕ್ ಪ್ರೆಷರ್ ಕಡಿಮೆಯಾಗುವುದೆಂದು ಚಿಂತೆಗೊಳಗಾದರೆ ಡಯಸ್ಟಾಲಿಕ್, ಪ್ರೆಷರ್ ಹೆಚ್ಚಾಗುವುದೆಂದೂ ಪರೀಕ್ಷೆಗಳು ಹೇಳುತ್ತವೆ.
ಮತ್ತೊಂದು, ಬಿಪಿ ಗಮನೀಯವಾಗಿ ಹೆಚ್ಚುವುದೆಂದು,ಮನೆಯೊಳಗಡೆ ಆಂದೋನ ಗುಳಗಾಗದಾರ ಈ ಬಿಪಿಗೆ ಅಷ್ಟಾಗಿ ಇರದೆಂದು ಇದೇ ಅಧ್ಯಾಯನದ ತಿಳಿಯೇ ಪಡಿಸಿದೆ
ಮತ್ತೊಂದು ಬೀಪಿ ಗಮನೀಯವಾಗಿ ಹೆಚ್ಚುವುದೆಂದು, ಮನೆಯೊಳಗೆ ಆಂದೋಳನಗೊಳಗಾದರೆ ಈ ಬೀಪಿ ಏರುವಿಕೆ ಅಷ್ಟಾಗಿ ಇರದೆಂದೂ ಇದೇ ಅಧ್ಯಯನ ತಿಳಿಯಪಡಿಸಿದೆ :
ಆದ್ದರಿಂದ ಬೀಪಿ ಸುಸ್ಥಿಯಲ್ಲಿರಬೇಕಾದರೆ, ಜೀವನದಲ್ಲಿ ಈ ಕೆಳಗಿನ ಸೂತ್ರವನ್ನು ಮೈಗೂಡಿಸಿಕೊಳ್ಳಬೇಕು :
ಒಂದು ವೇಳೆ ಚಿಂತಿಸುವುದು ಅನಿವಾರ್ಯವಾಗಿದ್ದಲ್ಲಿ ಯೋಚನೆಯನ್ನು ಮನೆಯಲ್ಲೇ ಮಾಡಿ.ಅಷ್ಟೆಲ್ಲದೆ ಚಿಂತೆ ಯೋಚನೆಗಳನ್ನು ನಿಮ್ಮೊಂದಿಗೆ. ಹೂರ ಗುಯ್ಯಬೇಡಿ
ಕೋಪ ಕಡಿಮೆ ಮಾಡಿಕೊಳ್ಳಿ
ಸಿಟ್ಟು ಬೀಪಿಯನ್ನು ಹೆಚ್ಚಿಸುತ್ತದೆ. ಕೋಪವನ್ನು ನಿಯಂತ್ರಿಸುವುದು, ಇಲ್ಲವೇ ಒಳಗೇ ಇಟ್ಟುಕೊಂಡು ಕುದಿಯುವುದು ಕೂಡಾ, ಬೀಪಿಯನ್ನು ಹೆಚ್ಚು ಮಾಡುವ ಅಂಶಗಳು.
ಪ್ರಯತ್ನದಿಂದ ಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು. ಕೋಪ ಬಂದಾಗಲೆಲ್ಲ ಈ ವಿಷಯವನ್ನು ಒಂದು ಡೈರಿಯಲ್ಲಿ ಬರೆದುಕೊಳ್ಳಿ.ಯಾವ ಸಂದರ್ಭದಲ್ಲಿ ಕೋಪ ಬಂತು,ಯಾರ ಮೇಲೆ ಕೋಪ ಬಂತು,ಆ ಕೋಪಕ್ಕೆ ಕಾರಣವೇನು, ಈ ವಿವರಗಳನ್ನಲ್ಲ ಡೈರಿಯಲ್ಲಿ ಬರೆದುಕೊಳ್ಳಿ ಅಷ್ಟೇ ಅಲ್ಲ ಆ ಸಮಯದಲ್ಲಿ ಅನಂತರ ನಿಮ್ಮ ಅನಿಸಿಕೆಗಳು ಹೇಗಿದ್ದವೆಂಬುದನ್ನು ಕೂಡ ಬರೆದುಕೊಳ್ಳಿ.
ಡೈರಿ ಬರೆಯುವ ಹವ್ಯಾಸದಿಂದ ನಿಮ್ಮ ಕೋಪ ಅರ್ಥ ಕಡಿಮೆಯಾಗುತ್ತದೆ ಅನಂತರ ಮತ್ತೆ ಓದಿಕೊಂಡಾಗ ನಿಮ್ಮ ಕೋಪ ಸಾಕಾರಣವೂ. ಅಲ್ಲವೋ, ಒಂದು ವೇಳೆ ಸಕಾರಣವಾಗಿಯೆ ಇದ್ದರೆ ಅದಕ್ಕೇನು ಮಾಡಬೇಕೆಂದು ತಿಳಿಯುತ್ತದೆ.
ನಿಮ್ಮ ಪತ್ನಿಯ ಬೀಪಿಯನ್ನು ಕೂಡ ಪರೀಕ್ಷೆ ಮಾಡಿಸಿ
ಅನೇಕ ವರ್ಷಗಳ ಕಾಲ ಸಂಸಾರ ಮಾಡಿದ ಪತಿ-ಪತ್ನಿಯರ ಮುಖಗಳಲ್ಲಿ ಮೂಡುವ ರೇಖೆಗಳು (ಅಂದರೆ ಜೊತೆಯಲ್ಲಿ ಮುಖದಲ್ಲಿ ಏರ್ಪಡುವ ಸ್ನಾಯುಗಳ ಮಡಿಕೆಗಳು,ಗೀಟುಗಳು )ಒಂದೇ ವಿಧವಾಗಿ ರೂಪೂಗೊಳ್ಳುತ್ತವೆಂದು ಮನಃಶ್ಶಾಸ್ತ್ರಜಜ್ಞರ ಅಧ್ಯಯನಗಳಿಂದ ತಿಳಿದುಬಂದಿದೆ.
ಅದೇ ರೀತಿಯಾಗಿ ಅನೇಕ ವರ್ಷಗಳವರೆಗೆ ಸಂಸಾರ ಮಾಡಿದ, ಪತಿ ಪತ್ನಿಯರ ಬೀಪಿ ಕೂಡ ಒಂದೇ ವಿಧವಾಗಿರುತ್ತದೆಂದು, ಸಂಶೋಧಕರು, ಕಂಡು ಕೊಂಡಿದ್ದಾರೆ.
ಇವುಗಳ ಅರ್ಥವೇನಂದರೆ ಮದುವೆಯ ವೇಳೆ ಒಬ್ಬರು ಹೈ ಬೀಪಿ ಇರುವವರಾಗಿದ್ದು ಮತ್ತೊಬ್ಬರು ಸಾಧಾರಣ ಬೀಪಿ ಉಳ್ಳವರು ಅಂದರೆ ಪ್ರಶಾಂತ ಚಿತ್ತರಾಗಿದ್ದರೂ ಕೂಡ ಕೆಲಕಾಲದ ಸಂಸಾರಿಕ ಜೀವನದ ನಂತರ, ಸಾಧರಣ ಬೀಪಿ ಇರುವ ಪತಿ /ಪತ್ನಿ ಸಹ ಹೈ ಬೀಪಿ ಸ್ಥಿತಿಗೆ ಹೋಗುತ್ತಾರೆ.
ಆರು ತಿಂಗಳು ಸಂಸಾರ ಮಾಡಿದರೆ, ಅವರು ಇವರಗುವರೆಂಬ ನಮ್ಮ ಹಿರಿಯರ ಸೂಕ್ತಿ ಇಲ್ಲಿ ಸಮಜಸವಾಗಿ ಅನ್ವಯಿಸುತ್ತದೆ.
ಅದರಿಂದ ಪತಿ ಪತ್ನಿಯರಲ್ಲಿ ಯಾರಿಗಾದರೂ ಒಬ್ಬರಿಗೆ ಬೀಪಿ ಇರುವುದು ತಿಳಿದರೆ ಮತ್ತೊಬ್ಬರೂ ಬೀಪಿ ಪರೀಕ್ಷೆ ಮಾಡಿಸಿಕೊಂಡು ಮುಂಜಾಗ್ರತೆ ತೆಗೆದುಕೊಳ್ಳುವುದು ಅಗತ್ಯ. ಮುಖ್ಯವಾಗಿ ಮಧ್ಯ ವಯಸ್ಸು ಸಮೀಪಿಸುತ್ತಿರುವವರು, ಮಧ್ಯವಯಸ್ಸನ್ನು ದಾಟುತ್ತಿರುವವರು.