ಮನೆ ಮನರಂಜನೆ ಮೇ 10ಕ್ಕೆ ರಿಷಿ, ಪ್ರಣೀತಾ ನಟನೆಯ  “ರಾಮನ ಅವತಾರ’ ಸಿನಿಮಾ ರಿಲೀಸ್

ಮೇ 10ಕ್ಕೆ ರಿಷಿ, ಪ್ರಣೀತಾ ನಟನೆಯ  “ರಾಮನ ಅವತಾರ’ ಸಿನಿಮಾ ರಿಲೀಸ್

0

ರಿಷಿ ಹಾಗೂ ಪ್ರಣೀತಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ರಾಮ ಅವತಾರ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೇ 10ರಂದು ತೆರೆಕಾಣುತ್ತಿದೆ.

Join Our Whatsapp Group

 “ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್‌ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್‌ ಸಾಗರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವಿಕಾಸ್‌ ಪಂಪಾಪತಿ “ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

“ಆಪರೇಷನ್‌ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್‌ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನ ಈ ಸಿನಿಮಾಗೆ ವಿಷ್ಣುಪ್ರಸಾದ್‌ ಹಾಗೂ ಸಮೀ ದೇಶ್‌ ಪಾಂಡೆ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್‌ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್‌ ನಡೆಸಲಾಗಿದೆ.