ಮನೆ ರಾಜ್ಯ ನ್ಯಾಯಮೂರ್ತಿ ಸಂತೋಷ್ ಹೆಗಡೆ ವರದಿ ಬಳಿಕ ಜನಾರ್ಧನರೆಡ್ಡಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದು: ಸಿದ್ದರಾಮಯ್ಯ

ನ್ಯಾಯಮೂರ್ತಿ ಸಂತೋಷ್ ಹೆಗಡೆ ವರದಿ ಬಳಿಕ ಜನಾರ್ಧನರೆಡ್ಡಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದು: ಸಿದ್ದರಾಮಯ್ಯ

0

ಮೈಸೂರು: ಅಕ್ರಮ ಗಣಿಗಾರಿಕೆಯ ಆರೋಪಗಳು ತನ್ನ ಮೇಲಿದ್ದಂತೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಸಂತೋಷ್ ಲಾಡ್  ಮತ್ತು ಬಿ ನಾಗೇಂದ್ರ ಅವರ ಮೇಲೂ ಇವೆ, ಅವರ ವಿರುದ್ಧ ಯಾಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನೆ ಮಾಡಲ್ಲ ಎಂದು ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಎತ್ತಿರುವ ಪ್ರಶ್ನೆಗೆ ಸಿದ್ದರಾಮಯ್ಯ ಇಂದು ಮೈಸೂರಲ್ಲಿ ಖಡಕ್ ಉತ್ತರ ನೀಡಿದರು.

Join Our Whatsapp Group

ಸಂತೋಷ್ ಲಾಡ್ ಮತ್ತು ಬಿ ನಾಗೇಂದ್ರ ಅಕ್ರಮ ನಡೆಸಿರುವ ಬಗ್ಗೆ ರೆಡ್ಡಿಯವರಲ್ಲಿ ಸಾಕ್ಷ್ಯವಿದ್ದರೆ ಕೋರ್ಟ್ ಗೆ ಹೋಗಲಿ, ಅವರನ್ನು ತಡೆದವರು ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ತಾನು ರೆಡ್ಡಿ ವಿರುದ್ಧ ಪ್ರತಿಭಟನೆ ಮಾಡಿದ್ದು ಆಗಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ವರದಿಯ ಆಧಾರದ ಮೇಲೆ. ತಮ್ಮ ವರದಿಯಲ್ಲಿ ಹೆಗಡೆ ಅವರು ರೆಡ್ಡಿ ಬಳ್ಳಾರಿಯನ್ನು ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಹೊರಟಿದ್ದಾರೆ ಅಂತ ಹೇಳಿದ್ದರು. ಅದನ್ನು ತಾನು ಅಸೆಂಬ್ಲಿಯಲ್ಲಿ ಪ್ರಸ್ತಾಪಿಸಿದಾಗ ಅಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಸಚಿವ ರೆಡ್ಡಿ ತನ್ನ ಮೇಲೆ ಮುಗಿಬಿದ್ದರು, ಅದಾದ ಬಳಿಕವೇ ತಾನು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದು ಎಂದು ಸಿದ್ದರಾಮಯ್ಯ ಹೇಳಿದರು.