ತೈಪೆ: ತೈವಾನ್ ನ ಪೂರ್ವದಲ್ಲಿ ಬುಧವಾರ ಬೆಳಗ್ಗೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.
ಇದು ದ್ವೀಪ ರಾಷ್ಟ್ರ, ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ ನ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲು ಪ್ರೇರೇಪಿಸಿತು.
ಭೂಕಂಪವು ಅಲ್ಲಿನ ಸ್ಥಳೀಯ ಸಮಯ 8 ಕ್ಕೆ ಸ್ವಲ್ಪ ಮೊದಲು ಸಂಭವಿಸಿದೆ, ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತೈವಾನ್ನ ಹುವಾಲಿಯನ್ ಸಿಟಿಯಿಂದ ದಕ್ಷಿಣಕ್ಕೆ 18 ಕಿಲೋಮೀಟರ್, 34.8 ಕಿಮೀ ಆಳದಲ್ಲಿ ಕೇಂದ್ರಬಿಂದು ಇದೆ ಎಂದು ತಿಳಿಸಿದೆ.
ಜಪಾನ್ ನ ಹವಾಮಾನ ಸಂಸ್ಥೆಯು ಮಿಯಾಕೊಜಿಮಾ ದ್ವೀಪ ಸೇರಿದಂತೆ ಈ ಪ್ರದೇಶದಲ್ಲಿನ ದೂರದ ಜಪಾನಿನ ದ್ವೀಪಗಳಿಗೆ ಮೂರು ಮೀಟರ್ ಗಳಷ್ಟು (10 ಅಡಿ) ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ಕಟ್ಟಡಗಳು ಕುಸಿದಿರುವ ವಿಡಿಯೋ ಗಳು ಸಾಮಾಜಿಕ ತಾಣದಲ್ಲಿ ಕಂಡು ಬಂದಿದೆ.














