ಮನೆ ಆರೋಗ್ಯ ಲೋ ಬಿಪಿ

ಲೋ ಬಿಪಿ

0

    ಸಾಮಾನ್ಯ ಮಟ್ಟದ ಬಿಪಿಗಿಂತ ಕಡಿಮೆ ಇದ್ದರೆ. ಅದನ್ನು ಲೋ ಬಿಪಿ (Low Blood Pressure)ಎನ್ನುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಹೈ ಪ್ರೊಟೆನ್ಷನ್ ಎನ್ನುತ್ತಾರೆ. ಲೋ ಬಿಪಿ  ಒಂದು ಕಾಯಿಲೆಯಲ್ಲ. ಲೋ ಬಿಪಿಯಿಂದ ಬಳಲುವವರು ತಮ್ಮನ್ನು ರೋಗಿಗಳೆಂದು ಭಾವಿಸುವುದರಿಂದ ಇದೊಂದು ರೋಗವೆಂದು   ಗುರುತಿಸಲ್ಪಟ್ಟಿದೆ.

Join Our Whatsapp Group

   ಹೃದಯದ,ರಕ್ತನಾಳಗಳಲ್ಲಿ ಯಾವ ತೊಂದರೆ ಇಲ್ಲದಿದ್ದರೂ ಆರೋಗ್ಯವಂತರಿಗೆ ಒಮ್ಮೊಮ್ಮೆ ಯಾವುದೋ ಕಾರಣಗಳಿಂದಾಗಿ ಬಿ. ಪಿ. ಕಡಿಮೆಯಾಗಿಬಿಡುತ್ತದೆ ಹೀಗಾದಾಗ ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡು ತಲೆ ತಿರುಗಿದಂತಾಗುವುದು,  ಕಣ್ಣು ಕತ್ತಲು ಆದಂತಾಗುವುದು ಜ್ಞಾನ ತಪ್ಪುವುದು, ಬೆವರುವುದು ಇತ್ಯಾದಿ ಸಂಭವಿಸಬಹುದು. ಇಂತಹ ಲಕ್ಷಣಗಳುಳ್ಳ ರೋಗವನ್ನು ಲೋ ಬಿಪಿ ಹೈಪೋಟೆನ್ಷನ್ ಎನ್ನುತ್ತಾರೆ.

  ಸಾಮಾನ್ಯವಾಗಿ ಮನುಷ್ಯನಿಗೆ ಬಿಪಿಯು ಯಾವ ಮಟ್ಟದಲ್ಲಿ ಇರಬೇಕೆಂಬುದು ಕೆಲವರಿಗೆ ತಿಳಿಯದಿರುವುದಿಲ್ಲ. Systolic Prssure 100-140 ಮಧ್ಯೆ ಇದ್ದಾಗ,Diastolic Pressure 60-90 ಮಧ್ಯ ಇದ್ದರೆ ಸಾಮಾನ್ಯ ಸ್ಥಿತಿ (Normal )ಯಲ್ಲಿದೆ ಎಂದು ಹೇಳಬಹುದು.

★ ವ್ಯಕ್ತಿಯಿಂದ ವ್ಯಕ್ತಿಗೆ ಬಿಪಿ ರೇಂಜ್ ವ್ಯತ್ಯಾಸವಿರುತ್ತದೆ. ವಯಸ್ಸಾದಂತೆ ಅದೂ ವ್ಯತ್ಯಾಯವಾಗುತ್ತಿರುತ್ತದೆ. ಹಾಗೆಯೇ ಸ್ತ್ರೀ – ಪುರುಷರಲ್ಲಿಯೂ ಬಿಪಿ ವ್ಯತ್ಯಾಸವಾಗುತ್ತಿರುತ್ತದೆ ನಮ್ಮ ಮಾನಸಿಕ ಸ್ಥಿತಿ, ಕೋಪ- ತಾಪ, ದುಃಖ ಸಂತೋಷ, ಭಯ ಖಿನ್ನತೆ ಇತ್ಯಾದಿಗಳಿಂದಲೂ ವ್ಯತ್ಯಯವಾಗಬಹುದು ಆದ್ದರಿಂದ ಈ ರಕ್ತದೊತ್ತಡ ಒಂದೇ ಸ್ಥಿತಿಯಾಲಿ ಇರುತ್ತದೆ ಎಂದು ಭಾವಿಸಬಾರದು.

ಉದಾಹರಣೆಗೆ:

★   ಒಬ್ಬ ವ್ಯಕ್ತಿಯು ಬಿಪಿ -ರೀಡಿಂಗ್ 100 /60,100 /70, 120/70,130/80,140/80 ಇಲ್ಲವೇ 1408/90  ಇದ್ದರೆ ಗಾಬರಿಯಾಗಬೇಕಾಗಿಲ್ಲ. ಇದು ಸಾಮಾನ್ಯ ಎಂದೇ ಭಾವಿಸಬೇಕು.

★.ಅದೇ ರೀತಿ  ಈ ಮೊದಲ 130/ 80 ಇದ್ದು ಈಗ 120 /70 ಇದ್ದರೂ ಅದನ್ನು ಲೋ ಬಿಪಿ ಎಂದು ತಿಳಿಯುವುದು ತಪ್ಪು  ಆತನ ಬಿಪಿ ಸಹಜ ಸ್ಥಿತಿಯಲ್ಲಿದೆಯೆಂದೇ ತಿಳಿಯಬೇಕು

   ★ ಆದರೆ ಬಿಪಿ ರೀಡಿಂಗ್ ನಲ್ಲಿ 40 mm ಗಳ ವ್ಯತ್ಯಾಸ ಉಂಟಾದರೆ ಮಾತ್ರ ಜಾಗುರೂಕತ್ತೆ ವಹಿಸುವುದು ಅವಶ್ಯಕವೆಂದೂ,  ಬಿಪಿ ಕಡಿಮೆಯಾಗಿದೆ ಎಂದು ತಿಳಿಯಬೇಕು ಉದಾಹರಣೆಗೆ, ಈಮೊದಲು 160 ರಿಂದ 90 ಇದದ್ದೂ ಈಗ 110/ 70 ಇದ್ದರೆ ಇದು ಖಂಡಿತ ಲೋ ಬಿಪಿಯೇ!

     ★ಡಾಕ್ಟರ್ ಬಳಿ ಹೋದಾಗೆಲ್ಲಾ ಬಿಪಿ ಪರೀಕ್ಷೆ ಮಾಡಿಕೊಂಡು, ರೀಡಿಂಗ್ ತೆಗೆದುಕೊಂಡು ಗುರುತು ಮಾಡಿಕೊಳ್ಳುವುದು ಉತ್ತಮ ಅಭ್ಯಾಸ ಲೋ ಬುಪಿ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಹೈಬಿಪಿವುಳ್ಳವರಿಗಿಂತ ಲೋ ಬಿಪಿ ಇರುವವರ ಆರೋಗ್ಯವಂತರೆಂದೂ,ಹೈಬಿಪಿಯವರಿಗಿಂತ ಹೆಚ್ಚು ವರ್ಷ ಜೀವಿಸುತ್ತಾರೆಂದು ರುಜುವತಾಗಿದೆ.