ಮನೆ ಕಾನೂನು ಕ್ಯಾಟರಿಂಗ್ ಬಿಲ್ ಮಾಡಲು ೫೦ ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ

ಕ್ಯಾಟರಿಂಗ್ ಬಿಲ್ ಮಾಡಲು ೫೦ ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಎಫ್‌ಡಿಎ

0

ಮೈಸೂರು: ಕ್ಯಾಟರಿಂಗ್ ಬಿಲ್ ಬಿಡುಗಡೆ ಮಾಡಲು ೫೦ ಸಾವಿರ ಲಂಚ ಪಡೆಯುವಾಗ, ಇಲ್ಲಿನ ಮೇಟಗಳ್ಳಿ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಎಫ್‌ಡಿಎ ಮಹೇಶ ಎಂಬುವರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದರು.

Join Our Whatsapp Group

ಕೇಂದ್ರದ ಶಿಬಿರಾರ್ಥಿಗಳಿಗೆ ಊಟೋಪಚಾರ ಒದಗಿಸಿದ್ದಕ್ಕೆ ವಿನಾಯಕ ಕ್ಯಾಟರಿಂಗ್’ನ ಮಾಲೀಕ ಶಿವನಾಗ ಎಂಬವರಿಗೆ 5.16 ಲಕ್ಷ ಬಿಲ್ ಬಿಡುಗಡೆ ಮಾಡಲಾಗಿದೆ. ಆರೋಪಿ ಮಹೇಶ್, ಬಿಲ್ ಮಾಡಲು ಶ್ರಮ ವಹಿಸಿದ್ದಕ್ಕೆ 80 ಸಾವಿರ ಲಂಚ ನೀಡಬೇಕೆಂದು ಕೇಳಿದ್ದರು.

ಶಿವನಾಗ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದು, ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಎಸ್‌ಪಿ ವಿ.ಜೆ.ಸಜಿತ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ವಿ.ಕೃಷ್ಣಯ್ಯ, ಇನ್‌ಸ್ಪೆಕ್ಟರ್‌ಗಳಾದ ಜಯರತ್ನ, ಉಮೇಶ್ ಹಾಗೂ ಸಿಬ್ಬಂದಿ ಗೋಪಿ, ಕಾಂತರಾಜ್, ಪ್ರಕಾಶ್, ಮೋಹನ್ ಗೌಡ, ಶೇಖರ್, ಲೋಕೇಶ್, ಆಶಾ, ವೀಣಾ, ರಮೇಶ್ ಪಾಲ್ಗೊಂಡಿದ್ದರು.