ಹಾವೇರಿ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ ಬಳಿಕ ರಾಜ್ಯ ಸರ್ಕಾರಕ್ಕೆ ಉಳಿಗಾಲವಿಲ್ಲ. 6 ತಿಂಗಳು ಅಥವಾ 1 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ ಎಂದು ಮಾಜಿ ಸಿಎಂ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಹಾವೇರಿಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ಸಮಾಜಗಳ ಮಧ್ಯೆ ಅಂತರ ಬಿತ್ತುವರು ಕಾಂಗ್ರೆಸ್ ನವರು. ಜಾತಿ ಜನಾಂಗದ ಮಧ್ಯೆ ಕಾಂಗ್ರೆಸ್ ನವರು ಸಂಘರ್ಷ ಉಂಟು ಮಾಡುತ್ತಿದ್ದಾರೆ. ಪಾಕ್ ಜಿಂದಾಬಾದ್ ಮತ್ತು ಹಿಂದೂಸ್ಥಾನ್ ಮುರ್ದಾಬಾದ್ ಎಂದು ಕರೆಯುವವರ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ. ಅಂತವರನ್ನು ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಕರೆಯುತ್ತಾರೆ. ಪಾಕಿಸ್ತಾನ ದಿಂದ ಬೆಂಬಲ ಪಡೆದ ಪಿಎಫ್ಐ & ಎಸ್ ಡಿಪಿಐ ಜೊತೆ ಕಾಂಗ್ರೆಸ್ ಸೇರಿದೆ. ರಾಜಕೀಯ ಲಾಭಕ್ಕೆ ಈ ಸಂಘಟನೆ ಜೊತೆ ಕಾಂಗ್ರೆಸ್ ಸೇರಿದೆ ಎಂದರು.
ದೇಶವನ್ನು ಕಟ್ಟುವವರಿಗೆ ಅಧಿಕಾರ ಜನರು ನೀಡಬೇಕು. ಕಾಂಗ್ರೆಸ್ 10 ತಿಂಗಳ ಆಡಳಿತ ಕಂಡು ಜನ ತಿರ್ಮಾನ ಮಾಡಿದ್ದಾರೆ. ಸರ್ಕಾರದ ಯಾವುದೇ ಇಲಾಖೆಯಲ್ಲಿ ಒಂದು ಸಣ್ಣ ಅಭಿವೃದ್ಧಿಯಾಗಿಲ್ಲ. ಯಾವುದೇ ಹಣಕಾಸಿನ ವ್ಯವಸ್ಥೆ ಇಲ್ದೆ ಗ್ಯಾರಂಟಿ ಯೋಜನೆ ನೀಡಿದರು. ನಮ್ಮ ಸರ್ಕಾರ ಇದ್ದಾಗ ರೈತಪರ ಯೋಜನೆಯನ್ನು ನಾವು ನೀಡಿದ್ದೆವು. 10 ಕೆಜಿ ಅಕ್ಕಿ ಎಂದರು, ಆದರೆ ಎಲ್ಲಿ ನೀಡಿದರು? ಕೇಂದ್ರ ಸರ್ಕಾರದ ಅಕ್ಕಿ ಜನರಿಗೆ ನೀಡಿ ನಾವೇ ನೀಡಿದ್ದೇವೆಂದು ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಜನಪರ ಯೋಜನೆ ನಿಲ್ಲಿಸಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.