ಮನೆ ಆರೋಗ್ಯ ಬಿ ಪಿ  ಎಂದರೆ …

ಬಿ ಪಿ  ಎಂದರೆ …

0

ವ್ರತ ಉಪವಾಸ

   ಕೆಲವು ಧರ್ಮಗಳಲ್ಲಿ ರಸ ಉಪಾಸಕ್ರಮ ಕಡ್ಡಾಯ ಸಂಪ್ರದಾಯಸ್ಥರು ವ್ರತ, ಆಚರಣೆ ಸಂದರ್ಭಗಳಲ್ಲಿ ಉಪವಾಸ ವಿರುತ್ತಾರೆ ಇಂತಹ ಆಚರಣೆಯಿಂದ ಬಹಳ ಹೊತ್ತು ಖಾಲಿ ಹೊಟ್ಟೆಯಲ್ಲಿ ಇರುವುದು ಲೋ ಬಿಪಿಗೆ ಕಾರಣವಾಗುತ್ತದೆ ಗ್ಲುಕೋಸ್,ಹಣ್ಣಿನ ರಸ, ಇತ್ಯಾದಿ ತೆಗೆದುಕೊಂಡ ನಂತರ ಉಪಶಮನ ಸಿಗುತ್ತದೆ.

Join Our Whatsapp Group

ಕುಳಿತಿದ್ದ ವ್ಯಕ್ತಿ ತಕ್ಷಣ ಎದ್ದಾಗ

ಎಂತಹ ಆರೋಗ್ಯವಂತನಾಗಿದ್ದರು, ಕುಳಿತಿದ್ದ ಸ್ಥಿತಿಯಿಂದ ತಕ್ಷಣ ಎದ್ದು ನಿಂತಾಗ ತಲೆಸುತ್ತುವುದು, ಕಣ್ಣು ಕತ್ತಲಾಗುವುದು ಆಗುತ್ತದೆ.

ಪ್ರಜ್ಞೆ ತಪ್ಪುವುದು ಆಗುತ್ತದೆ ಇದನ್ನುPostural Hypotension ಎನ್ನುತ್ತಾರೆ.

  ಇಂತಹ ಸ್ಥಿತಿಯಲ್ಲಿ ಲೋಬಿಪಿಯಾದರೆ ಗಾಬರಿಯಾಗಬೇಕಿಲ್ಲ. ನಿಯಮಿತವಾಗಿ ವ್ಯಾಯಾಮ ಮಾಡುವುದು. ನಡೆಯುವುದು ಮಾಡಬೇಕು. ವಯಸ್ಸಾಗಿದ್ದರೆ ಹಠಾತ್ತಾಗಿ ಏಳಬಾರದು, ನಿಧಾನವಾಗಿ ಎದ್ದು ನಿಂತುಕೊಳ್ಳಬೇಕು, ಈ ನಿಯಮ ಪಾಲಿಸುವುದು ಒಳ್ಳೆಯದು.

ಬಹಳ ದಿನ ಹಾಸಿಗೆ ಹಿಡಿದು ಮಲಗಿದಾಗಲೂ ಸಹ ಬಿಪಿ ಕಡಿಮೆಯಾಗುವ ಸಾಧ್ಯತೆ ಇದೆ. ಪುಷ್ಟಿಕರವಾದ ಆಹಾರ ತೆಗೆದುಕೊಳ್ಳುವುದು, ಕ್ರಮೇಣ ಓಡಾಡುವುದು ಮಾಡಿದಾರೆ ಸರಿಹೋಗುತ್ತದೆ .

ಔಷಧಿಗಳಿಂದಾಗಿ : ಹೈ ಬಿಪಿಗೆ ಔಷಧಿಗಳನ್ನು ತೆಗೆದುಕೊಂಡಾಗ,ಅದರ ಅಡ್ಡ ಪರಿಣಾಮವಾಗಿ ಬಿಪಿ ಕಡಿಮೆಯಾಗಬಹುದು, ತಲೆ ಸುತ್ತುವುದು, ಎಂದ ತಕ್ಷಣ ಬೀಳುವುದು ಇತ್ಯಾದಿ ಪದೇ ಪದೇ ಆಗುತ್ತಿದ್ದರೆ. ಖಂಡಿತ ಡಾಕ್ಟರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಔಷಧಿ ಸೇವಿಸಿರಿ

ರಕ್ತ ಹೀನತೆ ಸಕ್ಕರೆ ಕಾಯಿಲೆಯಿಂದ  ರಕ್ತಹೀನತೆಯಿಂದ ನರಳುವವರ ಬಿಪಿ ಕೂಡ ವ್ಯತ್ಯಾಸವಾಗುತ್ತದೆ.

ಬಹಳ ದಿನಗಳಿಂದ ಡಯಾಬಿಟೀಸ್ ಕಾಯಿಲೆಯಿಂದ ಪೀಡಿತರಾದವರಲ್ಲೂ ಬಿಪಿ ಕಡಿಮೆಯಾಗುವ ಸಾಧ್ಯತೆ ಇದೆ ರಕ್ತ ಪ್ರವಹಿಸುವ ರಕ್ತನಾಳಗಳ ವೈಫಲ್ಯದಿಂದ ಹೀಗಾಗುತ್ತದೆ.

ಚಿಕಿತ್ಸೆ

     ಕುಳಿತುಕೊಂಡಾಗ ತಾತ್ಕಾಲಿಕವಾಗಿ ಉಂಟಾಗುವ ಲೋ ಬಿಪಿಯನ್ನು ದೂರ ಮಾಡಲು ಕೆಲವು ನಿಮಿಷ ಮಲಗಿಕೋಳ್ಳಬೇಕು.

    ಆಗ ಏನೂ ಕುಡಿಯಬಾರದು, ತಿನ್ನಬಾರದು, ಸಾಮಾನ್ಯ ಸ್ಥಿತಿಗೆ ಬಂದಾಗ ನೀರು, ಹಾಲು, ಹಣ್ಣಿನ ರಸ ಅಥವಾ ಕಾಫಿ, ಟೀ ಕುಡಿಯಬಹುದು.

ನಮ್ಮ ಶರೀರದ ಒಂದೊಂದು ಕಣಕ್ಕೂ ಆಮ್ಲಜನಕ ಮತ್ತು ಪ್ರೋಷಕಾಂಶಗಳ ಅವಶ್ಯಕತೆ ಇರುತ್ತದೆ.ಆಕ್ಸಿಜನ್, ಪೋಷಕ ಪದಾರ್ಥಗಳನ್ನೂಳಗೊಂಡ ರಕ್ತವು ಒತ್ತಡಕ್ಕೆ ಒಳಗಾದಾಗ, ಅಂತಹ ಕಣಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ.

ಹೃದಯ ತನ್ನ ಪಂಪಿಂಗ್ ಸಿಸ್ಟಮ್ ನಿಂದ ರಕ್ತಕ್ಕೆ ಒತ್ತಡ ಉಂಟುಮಾಡುತ್ತದೆ ಹೃದಯ ಶ್ರಮವಹಿಸಿ ಕೆಲಸ ಮಾಡುತ್ತದೆ ಎಂಬುದನ್ನು ಸಿಸ್ಟಾಲಿಕ್ ಬಿಪಿ ರೇಡಿಂಗ್ ನಿಂದ ತಿಳಿಯಬಹುದು.

ಡಯಾಲಸ್ಟಾಲಿಕ್  ಬಿ.ಪಿ.ರೇಡಿಂಗ್ ಎನ್ನುವುದು, ದಮನಿಗಳಲ್ಲಿ (Arteries)ಪ್ರವಹಿಸುವ ರಕ್ತದ ಮೇಲೆ ಬೀಳುವ ಒತ್ತಡಕ್ಕೆ ಸಂಬಂಧಪಟ್ಟಿದ್ದಾಗಿದೆ.

ಡಯಾಸ್ಟಾಲಿಕ್ ಬಿಪಿ ಹೆಚ್ಚಿದರೆ ಧಮನಿಗಳಲ್ಲಿ ಹರಿಯುವ ರಕ್ತಕ್ಕೆ ಕಷ್ಟವಾಗುತ್ತದೆ

 ಹಲವು ಸಂದರ್ಭಗಳಲ್ಲಿ ನಮ್ಮ ಶರೀರಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ನಮ್ಮ ನರಗಳ ಜೋಡಣೆ ನಿಯಂತ್ರೀಸುತ್ತದೆ.

 ವಿಶ್ರಾಂತಿತೆಗೆದುಕೊಳ್ಳುವಾಗ,ನಿದ್ರೆ ಮಾಡುವಾಗ ಬಿ.ಪಿ. ಕಡಿಮೆ ಇರುವಂತೆ ಮಾಡುತ್ತದೆ

 ವ್ಯಾಯಮ ಮಾಡುವಾಗ, ಕೆಲಸ ಮಾಡುವಾಗ, ಭಯದಿಂದ ಕೂಡಿದ್ದಾಗ ಮಾನಸಿಕ ಒತ್ತಡಕ್ಕೆ (Stress)ಒಳಗಾದಾಗ ಬಿಪಿ ಹೆಚ್ಚಾಗುತ್ತದೆ.

  ನಮ್ಮ ಶರೀರದಲ್ಲಿರುವ (Fluids)ಲವಣದ ಪ್ರಮಾಣ ಎಷ್ಟು ದೆ, ಎಷ್ಟು ವಿಸರ್ಜಿಸಲ್ಪಡುತ್ತದೆ ಎಂಬುದು ಕೂಡ ಬಿ.ಪಿಯ ಮೇಲೆ ಪ್ರಭಾವ ಬೀರುತ್ತದೆ.

ಶರೀರದಲ್ಲಿ  Fluids ಹೆಚ್ಚಾಗಿ ಉಳಿದಾಗ ಬಿ.ಪಿ ಹೆಚ್ಚಾಗುತ್ತದೆ ಆಡ್ರಿನಲ್ ಗ್ರಂಥಿಗಳು ಬಿಡುಗಡೆ ಮಾಡುವ Aldosteroneಎಂಬುವ ಹಾರ್ಮೋನ್ ಕಿಡ್ನಿ ಗಳಿಂದ Fluids ಮತ್ತು ಲವಣಗಳ ವಿಸರ್ಜನೆಯನ್ನು ನಿಯಂತ್ರಿಸುತ್ತದೆ.

ಈ ಹಾರ್ಮೋನ್  ಹೆಚ್ಚಾಗಿ ಬಿಡುಗಡೆಯಾದರೆ ಲವಣಗಳು ಹೊರ ಹೋಗದೆ ಶರೀರದಲ್ಲೇ ಉಳಿದು ಆಗ ಹೈ ಬಿಪಿ ಉಂಟಾಗುತ್ತದೆ.

ಕಿಡ್ನಿಗಳು ವಿಸರ್ಜಿಸುವ  Reninಎಂಬ ಇನ್ನೊಂದು ರಸ Angiotensin

ಆಗಿ ಮಾರ್ಪಾಡಾಗುತ್ತದೆ. ಇದು Aldosterone ಹೆಚ್ಚಾಗಿ ಉತ್ಪತಿಯಾಗಲು ರತ್ನನಾಳಗಳು ಸಂಕುಚಿತಗೊಳ್ಳಲು ಕಾರಣವಾಗುತ್ತದೆ ಇದರಿಂದ ಹೈ ಬಿಪಿ ಉಂಟಾಗುವ ಸಾಧ್ಯತೆ ಇದೆ.

ಹೃದಯ ಸ್ತಂಭನ ಉಂಟಾಗಬಹುದು

ಆಕಸ್ಮಿಕವಾಗಿ ರಕ್ತದ ಒತ್ತಡ ಕಡಿಮೆಯಾಗಿ ಬೆವರು ಬರುವುದು. ಎದೆಯಲ್ಲಿ ನೋವುಂಟಾದರೆ.ಬಹುಶಃ ಅದು ಹೃದಯಘಾತವಿರಬಹುದು. ತಕ್ಷಣ ಡಾಕ್ಟರನ್ನು ಸಂಪರ್ಕಿಸುವುದು ಒಳ್ಳೆಯದು.

ಲೋ ಬಿಪಿಗೆ ಇತರ ಕಾರಣಗಳು

ಲೋ ಬಿಪಿಗೆ ಹಲವು ಕಾರಣಗಳಿವೆ, ಹೃದಯಾಘಾ ತವಾದಾಗ, ಆಕ್ಸಿಡೆಂಟ್ ಆದಾಗ, ರಕ್ತಸ್ರಾವ ವಾದಾಗ, ಇತ್ಯಾದಿ.

ಹೃದಯದ ಕವಾಟಗಳು ಬಲಹೀನವಾದರೆ ಆೄಡ್ರಿನಲ್  ಗ್ರಂಥಿಗಳು  ರೋಗಗ್ರಸ್ಥವಾದರೆ (ಇದನ್ನು Addison’ s Disease ಎನ್ನುತ್ತಾರೆ) ಸಾಧಾರಣವಾಗಿ ಹೃದಯದ ಬಡಿತ ಹೆಚ್ಚಾದಾಗ ಕೂಡ ಬಿಪಿ ಕಡಿಮೆಯಾಗಬಹುದು.

ಬಿಪಿಯ ಅಳತೆ

 ರಕ್ತದೊತ್ತಡ ಪರೀಕ್ಷಿಸಲು ಯಾವಾಗಲೂ ಒಂದೇ ಕೈಯನ್ನು ತೆಗೆದುಕೊಳ್ಳಬೇಕು. ಬಲಗೈ,ಜಾಸ್ತಿ ಉಪಯೋಗಿಸುವವರಾದರೆ, ಅವರ ಎಡಗೈಯ ಮೂಲಕ ಬಿಪಿ ಪರೀಕ್ಷೆ ಮಾಡಬೇಕು. ಸಾಮಾನ್ಯವಾಗಿ ಎರಡು ಕೈಗಳ ಬಿಪಿಯಲ್ಲಿ 10-20 ರಷ್ಟು ವ್ಯತ್ಯಾಸವಿರುತ್ತದೆ ಬಲಗೈಗಿಂತ ಎಡಗೈನಲ್ಲಿ ಬಿ.ಪಿ. ಜಾಸ್ತಿ!