ಮನೆ ಅಪರಾಧ ಅತ್ತೆ-ಮಾವನ ಮೇಲಿನ‌ ಸಿಟ್ಟಿಗೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದ ಸೊಸೆ

ಅತ್ತೆ-ಮಾವನ ಮೇಲಿನ‌ ಸಿಟ್ಟಿಗೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದ ಸೊಸೆ

0

ದಾವಣಗೆರೆ: ಅತ್ತೆ-ಮಾವನ ಮೇಲಿನ‌ ಸಿಟ್ಟಿಗೆ ಸೊಸೆ 40ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿರುವ ಘಟನೆ ದಾವಣಗೆರ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಚಿದಾನಂದಸ್ವಾಮಿ, ಶಿವನಾಗಮ್ಮ ಅವರ ಜೇಷ್ಠ ಪುತ್ರ ಕುಮಾರಸ್ವಾಮಿಯ ಪತ್ನಿ ರೂಪಾ ಕೆಲ ವರ್ಷಗಳಿಂದ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಳು. ಆದರೆ ಅತ್ತೆ-ಮಾವ ಆಸ್ತಿಯಲ್ಲಿ ಪಾಲು ಕೊಡಲು ಹಿಂದೇಟು ಹಾಕುತ್ತಿದ್ದಾರೆ.

ಇದರಿಂದ ಕೋಪಗೊಂಡ ಸೊಸೆ ರೂಪಾ 3 ವರ್ಷದ 40 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕಡಿದು ಹಾಕಿದ್ದಾಳೆ. “ಸೊಸೆ ರೂಪಾ ನಮ್ಮನ್ನು ಸರಿಯಾಗಿ ನೋಡಿಕೊಳ್ಳದೆ, ಹಲ್ಲೆ ಮಾಡುತ್ತಿದ್ದಾಳೆ. ನಮ್ಮ ಬಳಿ 8 ಲಕ್ಷ ರೂಪಾಯಿ ‌ಪಡೆದು ಮನೆ ಕಟ್ಟಿಸಿಕೊಂಡಿದ್ದಾಳೆ. ಎಂದು ಮಾವ ಚಿದಾನಂದಪ್ಪ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಆರೋಪಿ ರೂಪಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.