ಮನೆ ಕಾನೂನು ಪತಂಜಲಿ ಜಾಹೀರಾತು ವಿವಾದ: ಕೇಂದ್ರ ಮತ್ತು ರಾಮ್‌ ದೇವ್‌ ಗೆ ಸುಪ್ರೀಂ ತರಾಟೆ

ಪತಂಜಲಿ ಜಾಹೀರಾತು ವಿವಾದ: ಕೇಂದ್ರ ಮತ್ತು ರಾಮ್‌ ದೇವ್‌ ಗೆ ಸುಪ್ರೀಂ ತರಾಟೆ

0

ನವದೆಹಲಿ: ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮ್‌ ದೇವ್‌ ಮತ್ತು ಬಾಲಕೃಷ್ಣ ಸಲ್ಲಿಸಿದ್ದ ಮತ್ತೊಂದು ಕ್ಷಮೆಯಾಚನೆ ಅಫಿಡವಿತ್‌ ಅನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದ್ದು, ನಾವೇನು ಕುರುಡರಲ್ಲ, ಈ ವಿಚಾರದಲ್ಲಿ ನಾವು ಉದಾರವಾದಿಯಾಗಲು ಬಯಸುವುದಿಲ್ಲ ಎಂದು ತಿಳಿಸಿದ್ದು, ಕೇಂದ್ರ ಸರ್ಕಾರ ಸಲ್ಲಿಸಿದ್ದ ಪ್ರತಿಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ.

Join Our Whatsapp Group

 “ಕ್ಷಮಾಪಣೆ ಕಾಗದದ ಮೇಲಿದೆ, ಅವರ ಬೆನ್ನು ಗೋಡೆಗೆ ವಿರುದ್ಧವಾಗಿದೆ. ಇದನ್ನು ಸ್ವೀಕರಿಸಲು ನಾವು ಸಿದ್ಧರಿಲ್ಲ. ಇದು ಉದ್ದೇಶಪೂರ್ವಕ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸುವುದಾಗಿ” ಸುಪ್ರೀಂಪೀಠದ ಜಸ್ಟೀಸ್‌ ಹಿಮಾ ಕೊಹ್ಲಿ ಮತ್ತು ಜಸ್ಟೀಸ್‌ ಎ.ಅಮಾನುಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಚಾರಣೆಯ ಆರಂಭದಿಂದಲೂ ರಾಮ್‌ ದೇವ್‌ ಮತ್ತು ಬಾಲಕೃಷ್ಣ ಕ್ಷಮಾಪಣೆಯನ್ನು ಮೊದಲು ಮಾಧ್ಯಮಗಳಿಗೆ ಕಳುಹಿಸುತ್ತಿರುವುದನ್ನು ಪೀಠ ಗಮನಿಸಿದೆ. ವಿಷಯ ಕೋರ್ಟ್‌ ನಲ್ಲಿ ಇರುವಾಗಲೇ ಅಫಿಡವಿತ್‌ ಸಲ್ಲಿಸದೇ, ಮೊದಲು ಮಾಧ್ಯಮಗಳಿಗೆ ಕ್ಷಮಾಪಣೆ ಪತ್ರ ಕಳುಹಿಸುತ್ತಾರೆ.  ಇದೊಂದು ಪ್ರಚಾರದ ಗೀಳು ಎಂದು ಜಸ್ಟೀಸ್‌ ಕೊಹ್ಲಿ ಅಸಮಾಧಾನವ್ಯಕ್ತಪಡಿಸಿದ್ದಾರೆ.

ಪತಂಜಲಿ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್‌ ರೋಹ್ಟಗಿ, ರಿಜಿಸ್ಟ್ರಿ ಪರವಾಗಿ ಮಾತನಾಡಲು ಸಾಧ್ಯವಿಲ್ಲ, ಈಗಾಗಲೇ ಕ್ಷಮಾಪಣೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉತ್ತರಾಖಂಡ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ, ಲೈಸೆನ್ಸ್‌ ನೀಡಿದ ಇನ್ಸ್‌ ಪೆಕ್ಟರ್‌ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ, ಒಂದು ಬಾರಿಯಾದರೂ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ತಿಳಿಸಿದೆ.